Google Pixel 6 Pro 5G: ಕೇವಲ 46,910 ರೂ. ಗೆ ಸೇಲ್ ಆಗುತ್ತಿದೆ 1 ಲಕ್ಷದ ಈ ಸ್ಮಾರ್ಟ್‌ಫೋನ್: ಆಫರ್ ಮಿಸ್ ಮಾಡ್ಬೇಡಿ
ಕಳೆದ ವರ್ಷ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಗೂಗಲ್ ಪಿಕ್ಸೆಲ್ 6 ಪ್ರೊ 5ಜಿ (Google Pixel 6 Pro 5G) ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಶೇ. 57 ರಷ್ಟು ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಭರ್ಜರಿ ಫೀಚರ್ಗಳಿಂದ ಗ್ರಾಹಕರನ್ನು ಸೆಳೆದಿದೆ.
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ (Amazon) ಯಾವುದೇ ಮೇಳ ಆಯೋಜಿಸಿಲ್ಲವಾದರೂ ಸ್ಮಾರ್ಟ್ಫೋನ್ಗಳು ಬಂಪರ್ ಡಿಸ್ಕೌಂಟ್ಗೆ ಮಾರಾಟ ಆಗುತ್ತಿದೆ. ಮುಖ್ಯವಾಗಿ ಕಳೆದ ವರ್ಷ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಗೂಗಲ್ ಪಿಕ್ಸೆಲ್ 6 ಪ್ರೊ 5ಜಿ (Google Pixel 6 Pro 5G) ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಶೇ. 57 ರಷ್ಟು ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಭರ್ಜರಿ ಫೀಚರ್ಗಳಿಂದ ಗ್ರಾಹಕರನ್ನು ಸೆಳೆದಿದೆ. ಮುಖ್ಯವಾಗಿ ತನ್ನ ಕ್ಯಾಮೆರಾ (Camera) ಮೂಲಕವೇ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿತ್ತು. ಗೂಗಲ್ ಪಿಕ್ಸೆಲ್ 7 ಸರಣಿ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಈ ಬಂಪರ್ ಆಫರ್ ನೀಡಲಾಗಿದೆ. ಹಾಗಾದರೆ ಗೂಗಲ್ ಪಿಕ್ಸಲ್ 6 ಪ್ರೊ ಈಗ ಎಷ್ಟು ರೂಪಾಯಿಗೆ ಮಾರಾಟ ಆಗುತ್ತಿದೆ?, ಇದರ ವಿಶೇಷತೆ ಏನು?, ಇಲ್ಲಿದೆ ಮಾಹಿತಿ.
ಏನಿದೆ ಆಫರ್?:
ಗೂಗಲ್ ಪಿಕ್ಸಲ್ 6 ಪ್ರೊ 5G ಸ್ಮಾರ್ಟ್ಫೋನ್ನ 12GB RAM ಮೂಲಬೆಲೆ 1,09,000 ರೂ. ಆಗಿದೆ. ಆದರೀಗ 57% ವರೆಗೆ ರಿಯಾಯಿತಿ ನೀಡಲಾಗಿದ್ದು, ಇದನ್ನು ಕೇವಲ 46,910 ರೂ. ಗೆ ಖರೀದಿಸಬಹುದು. ಇದರ ಜೊತೆಗೆ ವಿನಿಮಯ ಆಫರ್ ಬಳಕೆ ಮಾಡಿಕೊಂಡು ಈ ಫೋನ್ ಖರೀದಿ ಮೇಲೆ 20,550 ರೂ. ವರೆಗೂ ಹಣ ಉಳಿತಾಯ ಮಾಡಬಹುದು. ಸದ್ಯಕ್ಕೆ ಈ ಆಫರ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಲಭ್ಯವಿದೆ.
APPLE Store: ದೇಶದ ಮೊದಲ ಮುಂಬೈ ಸ್ಟೋರ್ಗೆ ಆ್ಯಪಲ್ ಸಿಇಒ ಟಿಮ್ ಕುಕ್ ಚಾಲನೆ
ಫೀಚರ್ಸ್ ಏನಿದೆ?:
ಗೂಗಲ್ ಪಿಕ್ಸಲ್ 6 ಪ್ರೊ 5G ಸ್ಮಾರ್ಟ್‌ಫೋನ್ 1,440 x 3,120 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7-ಇಂಚಿನ ಎಲ್‌ಟಿಪಿಒ ಡಿಸ್‌ಪ್ಲೇ ಹೊಂದಿದೆ. 120Hz ವರೆಗಿನ ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲಾಗಿದೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿದೆ.
ಗೂಗಲ್ ಟೆನ್ಸರ್ SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಟೆನ್ಸರ್ 20-ಕೋರ್ ಜಿಪಿಯು ಹೊಂದಿದ್ದು, ಉತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ. 12 GB RAM ಮತ್ತು 512 GB ಡೀಫಾಲ್ಟ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಈ ಫೋನ್ ಕಾಣಿಸಿಕೊಂಡಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದು 150% ಹೆಚ್ಚು ಬೆಳಕನ್ನು ಸೆರೆಹಿಡಿಯುತ್ತದೆ. ಎರಡನೇ ಕ್ಯಾಮೆರಾ 48MP ಟೆಲಿಫೋಟೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. 11.1 ಮೆಗಾಫಿಕ್ಸೆಲ್ನ ಅದ್ಭುತವಾದ ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ.
ಗೂಗಲ್ ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್ 5,003mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 23W ವಾಯರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದರೊಂದಿಗೆ ‘ಕ್ವಿಕ್ ಟ್ಯಾಪ್ ಟು ಸ್ನ್ಯಾಪ್’ ಎಂಬ ಫೀಚರ್ಸ್ ಅನ್ನು ಪಡೆದುಕೊಂಡಿದ್ದು, ಲಾಕ್‌ಸ್ಕ್ರೀನ್‌ನಿಂದ ಸ್ನ್ಯಾಪ್‌ಚಾಟ್ ಕ್ಯಾಮೆರಾವನ್ನು ತೆರೆಯಲು ಇದು ಸಹಾಯ ಮಾಡಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Sat, 22 April 23