Google Pixel 6 Pro 5G: 1 ಲಕ್ಷದ ಈ ಫೋನನ್ನು ಕೇವಲ 49,999 ರೂ. ಗೆ ಖರೀದಿಸಿ: ಅಮೆಜಾನ್​​ನಿಂದ ಹಿಂದೆಂದೂ ನೀಡದ ಆಫರ್

Amazon Offer: ಕಳೆದ ವರ್ಷ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಗೂಗಲ್ ಪಿಕ್ಸೆಲ್ 6 ಪ್ರೊ 5ಜಿ (Google Pixel 6 Pro 5G) ಸ್ಮಾರ್ಟ್​ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಶೇ. 54 ರಷ್ಟು ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್​ ಆಕರ್ಷಕ ಫೀಚರ್​ಗಳೊಂದಿಗೆ ಗ್ರಾಹಕರನ್ನು ಸೆಳೆದಿದೆ.

Google Pixel 6 Pro 5G: 1 ಲಕ್ಷದ ಈ ಫೋನನ್ನು ಕೇವಲ 49,999 ರೂ. ಗೆ ಖರೀದಿಸಿ: ಅಮೆಜಾನ್​​ನಿಂದ ಹಿಂದೆಂದೂ ನೀಡದ ಆಫರ್
Google Pixel 6 Pro
Follow us
|

Updated on: Feb 19, 2023 | 11:45 AM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ (Amazon) ಯಾವುದೇ ಮೇಳ ಆಯೋಜಿಸಿಲ್ಲವಾದರೂ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ಗೆ ಮಾರಾಟ ಆಗುತ್ತಿದೆ. ಮುಖ್ಯವಾಗಿ ಕಳೆದ ವರ್ಷ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಗೂಗಲ್ ಪಿಕ್ಸೆಲ್ 6 ಪ್ರೊ 5ಜಿ (Google Pixel 6 Pro 5G) ಸ್ಮಾರ್ಟ್​ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಶೇ. 54 ರಷ್ಟು ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್​ ಆಕರ್ಷಕ ಫೀಚರ್​ಗಳೊಂದಿಗೆ ಗ್ರಾಹಕರನ್ನು ಸೆಳೆದಿದೆ. ಮುಖ್ಯವಾಗಿ ತನ್ನ ಕ್ಯಾಮೆರಾ (Camera) ಮೂಲಕವೇ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿತ್ತು. ಹಾಗಾದರೆ ಗೂಗಲ್‌ ಪಿಕ್ಸಲ್‌ 6 ಪ್ರೊ ಈಗ ಎಷ್ಟು ರೂಪಾಯಿಗೆ ಮಾರಾಟ ಆಗುತ್ತಿದೆ?, ಇದರ ವಿಶೇಷತೆ ಏನೇನು ಎಂಬುದನ್ನು ನೋಡೋಣ.

  • ಗೂಗಲ್‌ ಪಿಕ್ಸಲ್‌ 6 ಸ್ಮಾರ್ಟ್​ಫೋನ್​ನ ಮೂಲಬೆಲೆ 1,09,000 ರೂ. ಆದರೀಗ ಫ್ಲಿಪ್‌ಕಾರ್ಟ್​ನಲ್ಲಿ ಶೇ. 54 ರಷ್ಟು ಡಿಸ್ಕೌಂಟ್ ಪಡೆದುಕೊಂಡು ಕೇವಲ 49,999 ರೂ. ಗೆ ಮಾರಾಟ ಆಗುತ್ತಿದೆ.
  • ಇದರ ಜೊತೆಗೆ ಆಯ್ದ ಕೆಲ ಬ್ಯಾಂಕ್‌ಗಳಿಂದ ಆಕರ್ಷಕ ರಿಯಾಯಿತಿ ಕೊಡುಗೆಗಳು ಸಿಗಲಿದೆ.
  • ಇದನ್ನೂ ಓದಿ
    Image
    Tech Tips: ನಿಮ್ಮ ಫೋನ್​ನಲ್ಲಿರುವ ಡಿಸ್ ಪ್ಲೇಯನ್ನು ಹೀಗೂ ಉಪಯೋಗಿಸಬಹುದು: ಒಮ್ಮೆ ಟ್ರೈ ಮಾಡಿ ನೋಡಿ
    Image
    World’s First Mobile Phone: ಇದುವೇ ನೋಡಿ ವಿಶ್ವದ ಮೊಟ್ಟ ಮೊದಲ ಮೊಬೈಲ್ ಫೋನ್: ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇತ್ತು?
    Image
    Vivo Y56 5G: ವಿವೋದಿಂದ ಮತ್ತೊಂದು ಆಕರ್ಷಕ ವಿವೋ Y56 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
    Image
    Best Smartphone: ಕೇವಲ 10,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್​ ಬೇಕೇ?: ಇಲ್ಲಿದೆ ನೋಡಿ ಟಾಪ್ 5 ಮೊಬೈಲ್
  • ಗೂಗಲ್‌ ಪಿಕ್ಸಲ್‌ 6 ಪ್ರೊ 5G ಸ್ಮಾರ್ಟ್‌ಫೋನ್‌ 12GB RAM + 128GB ಸ್ಟೋರೇಜ್‌ನ ವೇರಿಯಂಟ್‌ ಮೇಲೆ ಈ ಆಫರ್ ನೀಡಲಾಗಿದೆ. ಅಲ್ಲದೆ ನೋ ಕಾಸ್ಟ್‌ ಇಎಮ್‌ಐ ಆಯ್ಕೆ ಸಹ ಲಭ್ಯವಾಗುತ್ತಿದೆ.
  • ಈ ಸ್ಮಾರ್ಟ್‌ಫೋನ್‌ 1,440 x 3,120 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7-ಇಂಚಿನ ಎಲ್‌ಟಿಪಿಒ ಡಿಸ್‌ಪ್ಲೇ ಹೊಂದಿದೆ. 120Hz ವರೆಗಿನ ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿದೆ.
  • ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲಾಗಿದೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿದೆ.
  • ಗೂಗಲ್‌ ಪಿಕ್ಸೆಲ್‌ 6 ಪ್ರೊ ಸ್ಮಾರ್ಟ್‌ಫೋನ್‌ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಟೆನ್ಸರ್ 20-ಕೋರ್ ಜಿಪಿಯು ಹೊಂದಿದ್ದು, ಉತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ.
  • ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದು 150% ಹೆಚ್ಚು ಬೆಳಕನ್ನು ಸೆರೆಹಿಡಿಯುತ್ತದೆ.
  • ಎರಡನೇ ಕ್ಯಾಮೆರಾ 48MP ಟೆಲಿಫೋಟೋ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 12MP ಅಲ್ಟ್ರಾ-ವೈಡ್ ಲೆನ್ಸ್‌ ಅನ್ನು ಹೊಂದಿದೆ. 11.1 ಮೆಗಾಫಿಕ್ಸೆಲ್​ನ ಅದ್ಭುತವಾದ ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ.
  • ದೀರ್ಘ ಸಮಯ ಬಾಳಿಕೆ ಬರುವ 5,003mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 23W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು