Vivo Y56 5G: ವಿವೋದಿಂದ ಮತ್ತೊಂದು ಆಕರ್ಷಕ ವಿವೋ Y56 5G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?
ವಿವೋ ವೈ ಸರಣಿ ಅಡಿಯಲ್ಲಿ ಮತ್ತೊಂದು ಹೊಸ ವಿವೋ ವೈ56 5ಜಿ (Vivo Y56 5G) ಫೋನನ್ನು ಲಾಂಚ್ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್ಗಳನ್ನು ಒಳಗೊಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳು (Smartphone) ಬಿಡುಗಡೆ ಆಗುತ್ತಿದೆ. ಅತ್ಯುತ್ತಮ ಕ್ಯಾಮೆರಾ (Camera), ಬ್ಯಾಟರಿ, ಪ್ರೊಸೆಸರ್ ಇರುವ ಕಡಿಮೆ ಬೆಲೆಯ ಮೊಬೈಲ್ಗಳು ಭರ್ಜರಿ ಸೇಲ್ ಆಗುತ್ತಿದೆ. ಇದೇ ಸಾಲಿನಲ್ಲಿ ಪ್ರಸಿದ್ಧ ವಿವೋ ಸಂಸ್ಥೆ ಹೊಸ ಮೊಬೈಲ್ ಒಂದನ್ನು ಅನಾವರಣ ಮಾಡಿದೆ. ಶುಕ್ರವಾರವಷ್ಟೆ ತನ್ನ ವೈ ಸರಣಿಯಲ್ಲಿ ವಿವೋ Y100 ಎಂಬ ಬಣ್ಣ ಬದಲಾಯಿಸುವ ಫೋನ್ ಪರಿಚಯಿಸಿದ್ದ ಕಂಪನಿ ಇದೀಗ ಇದೇ ವೈ ಸರಣಿ ಅಡಿಯಲ್ಲಿ ಮತ್ತೊಂದು ಹೊಸ ವಿವೋ ವೈ56 5ಜಿ (Vivo Y56 5G) ಫೋನನ್ನು ಲಾಂಚ್ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್ಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ವಿವೊ Y56 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 8GB RAM + 128GB ವೇರಿಯಂಟ್ ಬೆಲೆಯು 19,999 ರೂ. ಆಗಿದೆ. ವಿಶೇಷ ಎಂದರೆ ಇಂದಿನಿಂದಲೇ ಈ ಸ್ಮಾರ್ಟ್‌ಫೋನ್ ಖರೀದಿಗೆ ಸಿಗುತ್ತಿದೆ. ಐಸಿಐಸಿಐ, ಎಸ್ಬಿಐ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಕಾರ್ಡ್ ಮೂಲಕ ಪಡೆದುಕೊಂಡರೆ 1,000 ರೂ. ಗಳ ಕ್ಯಾಶ್ಬ್ಯಾಕ್ ಆಫರ್ ಘೋಷಿಸಲಾಗಿದೆ.
ಇನ್ನು ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ಇದು 1,080 x 2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 60Hz ರೀಫ್ರೇಶ್ ರೇಟ್ನಿಂದ ಕೂಡಿದ್ದು ಮೀಡಿಯಾ ಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 13 ಆಧಾರಿತ ಫನ್ಟಚ್ 13 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ವಿವೋ Y56 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಆ ಪೈಕಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್ನಲ್ಲಿ ನೈಟ್ ಮೋಡ್, ಪೋರ್ಟ್ರೇಟ್ ಲೈಟ್ ಎಫೆಕ್ಟ್, ವಿಡಿಯೋ ಫೇಸ್ ಬ್ಯೂಟಿ, ಸೇರಿದಂತೆ ಅನೇಕ ಎಡಿಟಿಂಗ್ ಆಯ್ಕೆಗಳನ್ನು ನೀಡಿರುವುದು ವಿಶೇಷ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಜೊತೆಗೆ ಬ್ಲೂಟೂತ್ 5.0, 4ಜಿ ಎಲ್ ಟಿಇ, ವೈ-ಫೈ, 5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Sat, 18 February 23