Best Smartphone: ಕೇವಲ 10,000 ರೂ. ಒಳಗೆ ಆಕರ್ಷಕ ಸ್ಮಾರ್ಟ್‌ಫೋನ್ ಬೇಕೇ?: ಇಲ್ಲಿದೆ ನೋಡಿ ಟಾಪ್ 5 ಮೊಬೈಲ್
Smartphones Under Rs. 10,000: ತಿಂಗಳಿಗೆ ಕಡಿಮೆ ಎಂದರೂ 5 ರಿಂದ 8 ಕಡಿಮೆ ಬೆಲೆಯ ಫೋನ್ಗಳು ಭಾರತದಲ್ಲಿ ಅನಾವರಣ ಆಗುತ್ತದೆ. ಹಾಗಾದರೆ, ಸದ್ಯ ದೇಶದಲ್ಲಿ 10,000 ರೂ. ಒಳಗಿನ ಯಾವ ಫೋನ್ ಹೆಚ್ಚು ಸೇಲ್ ಆಗುತ್ತಿದೆ ಎಂಬುದನ್ನು ನೋಡೋಣ.
ಭಾರತದಲ್ಲೀಗ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳಿಗೆ (Smartphone) ಎಲ್ಲಿಲ್ಲದ ಬೇಡಿಕೆ ಇದೆ. ಇತ್ತೀಚೆಗಷ್ಟೆ ಖಾಸಗಿ ವೆಬ್ಸೈಟ್ ಒಂದು ಮಾಡಿರುವ ವರದಿಯ ಪ್ರಕಾರ, ದೇಶದಲ್ಲಿ ಹೈ-ರೇಂಜ್ ಅಥವಾ ಮಧ್ಯಮ ಬೆಲೆಯ ಮೊಬೈಲ್ಗಳಿಗಿಂತ (Mobile) ಕಡಿಮೆ ಬೆಲೆಯ ಫೋನ್ಗಳು ಅತಿ ಹೆಚ್ಚು ಸೇಲ್ ಆಗುತ್ತಿದೆಯಂತೆ. ಇದಕ್ಕಾಗಿಯೇ ಪ್ರಸಿದ್ಧ ಸ್ಮಾರ್ಟ್‌ಫೋನ್ ಸಂಸ್ಥೆಗಳು ಬಜೆಟ್ ಬೆಲೆಯ ಮೊಬೈಲ್ಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿದೆ. ತಿಂಗಳಿಗೆ ಕಡಿಮೆ ಎಂದರೂ 5 ರಿಂದ 8 ಕಡಿಮೆ ಬೆಲೆಯ ಫೋನ್ಗಳು ಭಾರತದಲ್ಲಿ ಅನಾವರಣ ಆಗುತ್ತದೆ. ಇದರಲ್ಲಿ ಕೆಲ ಸ್ಮಾರ್ಟ್‌ಫೋನ್ ಟ್ರೆಂಡಿಂಗ್ನಲ್ಲಿ (Tending) ಕಾಣಿಸಿಕೊಂಡರೆ ಇನ್ನೂ ಕೆಲವು ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ಹಾಗಾದರೆ, ಸದ್ಯ ದೇಶದಲ್ಲಿ 10,000 ರೂ. ಒಳಗಿನ ಯಾವ ಫೋನ್ ಹೆಚ್ಚು ಸೇಲ್ ಆಗುತ್ತಿದೆ ಎಂಬುದನ್ನು ನೋಡೋಣ.
ಇನ್ಫಿನಿಕ್ಸ್ ನೋಟ್ 12i: ಇತ್ತೀಚೆಗಷ್ಟೆ ಬಿಡುಗಡೆ ಆದ ಇನ್ಫಿನಿಕ್ಸ್ ನೋಟ್ 12i ಸ್ಮಾರ್ಟ್ಫೋನ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆಎ. ಇದರ ಬೆಲೆ ಕೇವಲ 9,999 ರೂ. ಈ ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ QVGA ರೆಸಲ್ಯೂಶನ್ ಅನ್ನು ಒಳಗೊಂಡಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ರಿಯಲ್‌ಮಿ ನಾರ್ಜೊ 50i: ರಿಯಲ್‌ಮಿ ನಾರ್ಜೊ 50i ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೋಕ್ 9863 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI ಗೋ ಆವೃತ್ತಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 8 ಮೆಗಾ ಪಿಕ್ಸೆಲ್ AI ರಿಯರ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 5 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ಕೇವಲ 6,499 ರೂ. ಆಗಿದೆ.
WhatsApp: ಕೂಡಲೇ ವಾಟ್ಸ್ಆ್ಯಪ್ ಅಪ್ಡೇಟ್ ಮಾಡಿ: ನೂತನ ಫೀಚರ್ ಕಂಡು ಬಳಕೆದಾರರು ಫುಲ್ ಖುಷ್
ಸ್ಯಾಮ್ಸಂಗ್ ಗ್ಯಾಲಕ್ಸಿ F04: ಈ ಸ್ಮಾರ್ಟ್ಫೋನ್ನ ಬೆಲೆ ಕೇವಲ 8,999 ರೂ. ಆಗಿದೆ. ಇದು 6.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೋ P35 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ರೆಡ್ಮಿ 10A: 2022 ರಲ್ಲಿ ಬಜೆಟ್ ಬೆಲೆಗೆ ಬಿಡುಗಡೆ ಆದ ಮತ್ತೊಂದು ಆಕರ್ಷಕ ಸ್ಮಾರ್ಟ್‌ಫೋನ್ ರೆಡ್ಮಿ 10ಎ. ಇದರ ಬೆಲೆ 8,699 ರೂ.. ಇದು 6.53 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೋ G25SoC ಪ್ರೊಸೆಸರ್ ಬಲವನ್ನು ಪಡೆದಿದೆ. 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ LED ಫ್ಲ್ಯಾಷ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು 10W ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಟೆಕ್ಮೋ ಸ್ಪಾರ್ಕ್ 9: ಟೆಕ್ನೋ ಕಂಪನಿಯ ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್‌ಫೋನ್ 6.6 ಇಂಚಿನ ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, MediaTek Helio G37 ಚಿಪ್‌ಸೆಟ್, 13MP ಹಿಂಬದಿಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 5000mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್‌ನ 4GB/64GB ರೂಪಾಂತರವನ್ನು ಅಮೆಜಾನ್ನಲ್ಲಿ ಕೇವಲ 7,799 ರೂ. ಗೆ ಖರೀದಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ