Tech Tips: ವಾಟ್ಸ್ಆ್ಯಪ್​ನಲ್ಲಿ ನಂಬರ್ ಬದಲಾಯಿಸುವಾಗ ಚಾಟ್ ಡಿಲೀಟ್ ಆಗದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ನಂಬರ್ ಬದಲಾಯಿಸಿ ಮೊಬೈಲ್​ನಲ್ಲಿರುವ ಮತ್ತೊಂದು ಸಿಮ್​ನ ಖಾತೆ ತೆರೆಯುವ ಅವಕಾಶ ಇದೆ. ಆದರೆ ಈ ಸಂದರ್ಭ ವಾಟ್ಸ್ಆ್ಯಪ್ ಖಾತೆಯ ಎಲ್ಲಾ ಚಾಟ್​ಗಳು ಮತ್ತು ಡೇಟಾವನ್ನು ಕಳೆದುಕೊಳ್ಳುವ ಭಯ ಅನೇಕರಿಗೆ ಇದೆ.

Tech Tips: ವಾಟ್ಸ್ಆ್ಯಪ್​ನಲ್ಲಿ ನಂಬರ್ ಬದಲಾಯಿಸುವಾಗ ಚಾಟ್ ಡಿಲೀಟ್ ಆಗದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
WhatsApp Tricks
Follow us
Vinay Bhat
|

Updated on: Feb 17, 2023 | 7:00 PM

ನಿಮ್ಮ ಸ್ಮಾರ್ಟ್​ಪೋನ್​ನಲ್ಲಿ (Smartphonee) ಎರಡು ಸಿಮ್​ಗಳಿದ್ದರೂ ಆ ಫೋನ್​ನಲ್ಲಿ ಒಂದು ನಂಬರ್​ನ ವಾಟ್ಸ್​ಆ್ಯಪ್ ಖಾತೆ ಹೊಂದಲು ಮಾತ್ರ ಸಾಧ್ಯ. ಒಂದೇ ಮೊಬೈಲ್​ನಲ್ಲಿ ಎರಡು ನಂಬರ್​ಗಳ ವಾಟ್ಸ್​ಆ್ಯಪ್ (WhatsApp) ಅಕೌಂಟ್ ರಚಿಸುವ ಆಯ್ಕೆ ಕಂಪನಿ ಇನ್ನೂ ನೀಡಿಲ್ಲ. ಹೀಗಾಗಿ ಒಂದು ಮೊಬೈಲ್ ನಂಬರ್​ನಿಂದ ಖಾತೆ ರಚಿಸಿರುತ್ತೀರಿ. ಹಾಗೆಯೆ ಆ ನಂಬರ್ ಬದಲಾಯಿಸಿ ಮೊಬೈಲ್​ನಲ್ಲಿರುವ ಮತ್ತೊಂದು ಸಿಮ್​ನ ವಾಟ್ಸ್​ಆ್ಯಪ್ ಖಾತೆ ತೆರೆಯುವ ಅವಕಾಶ ಕೂಡ ಇದೆ. ಆದರೆ ಈ ಸಂದರ್ಭ ವಾಟ್ಸ್ಆ್ಯಪ್ ಖಾತೆಯ ಎಲ್ಲಾ ಚಾಟ್​ಗಳು (Chat) ಮತ್ತು ಡೇಟಾವನ್ನು ಕಳೆದುಕೊಳ್ಳುವ ಭಯ ಅನೇಕರಿಗೆ ಇದೆ. ಹಾಗಾದರೆ, ಹಳೆಯ ಚಾಟ್, ಗ್ರೂಪ್ ಮತ್ತು ಸಂಪರ್ಕಗಳನ್ನು ಉಳಿಸಿಕೊಂಡೇ ಹೊಸ ನಂಬರ್​ಗೆ ವಾಟ್ಸ್ಆ್ಯಪ್ ಬದಲಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.

ಮೊದಲಿಗೆ ನೀವು ಮೊದಲು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ತೆರೆಯಿರಿ. ನಿಮ್ಮ ಪ್ರೊಫೈಲ್​ಗೆ ಹೋಗಿ. ಸೆಟ್ಟಿಂಗ್ ಮೆನು ತೆರೆಯಿರಿ. ನಂತರ ಖಾತೆ ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ. ಹಲವು ಆಯ್ಕೆಗಳು ಲಭ್ಯವಿರುತ್ತವೆ, ಬದಲಾವಣೆ ಸಂಖ್ಯೆ ಕ್ಲಿಕ್ ಮಾಡಿ. ನಂತರ ನೆಕ್ಸ್ಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಹಳೆಯ ಮತ್ತು ಹೊಸ ಮೊಬೈಲ್ ಸಂಖ್ಯೆಯನ್ನು ಸೇರಿಸಿ. ವಾಟ್ಸ್ಆ್ಯಪ್ ನಂತರ ನಿಮ್ಮ ಹೊಸ ಸಂಖ್ಯೆಯನ್ನು ಪರಿಶೀಲಿಸುತ್ತದೆ ಮತ್ತು ಅದನ್ನು ಬದಲಾಯಿಸುತ್ತದೆ.

Tech Tips: ಪವರ್ ಬ್ಯಾಂಕ್ ಅಲ್ಲ: ಕರೆಂಟ್ ಇಲ್ಲದೆಯೂ ನಿಮ್ಮ ಮೊಬೈಲ್ ಚಾರ್ಜ್ ಮಾಡಬಹುದು: ಹೇಗೆ ಗೊತ್ತೇ?

ಇದನ್ನೂ ಓದಿ
Image
WhatsApp: ಕೂಡಲೇ ವಾಟ್ಸ್​ಆ್ಯಪ್​ ಅಪ್ಡೇಟ್ ಮಾಡಿ: ನೂತನ ಫೀಚರ್ ಕಂಡು ಬಳಕೆದಾರರು ಫುಲ್ ಖುಷ್
Image
Airtel 5G: 80ಕ್ಕೂ ಅಧಿಕ ನಗರಗಳಲ್ಲಿ ಏರ್ಟೆಲ್ 5G ಲಾಂಚ್: ಪ್ಲಾನ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Image
Google India: ಭಾರತದ 453 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಗೂಗಲ್
Image
Tech Tips: ನಿಮಗೆ ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಬೇಕೇ?: ವೇರಿಫೈಡ್‌ ಬ್ಯಾಡ್ಜ್ ಪಡೆಯಲು ಇಲ್ಲಿದೆ ಹೊಸ ಟ್ರಿಕ್

ಇದಾದ ಬಳಿಕ ನೋಟಿಫೈ ಕಾಂಟ್ಯಾಕ್ಟ್ಸ್ ಆಪ್ಶನ್ ಅನ್ನು ಸಕ್ರೀಯಗೊಳಿಸಿ. ಇದರಿಂದ ನಿಮ್ಮ ಎಲ್ಲ ಕಾಂಟಾಕ್ಟ್ ನಲ್ಲಿರುವ ಎಲ್ಲರಿಗೂ ಕೂಡ ನಿಮ್ಮ ಹೊಸ ನಂಬರ್ ಬಗ್ಗೆ ಸಂದೇಶ ರವಾನೆಯಾಗಲಿದೆ. ನೀವು ಖುದ್ದಾಗಿ ಕೂಡ ನಿಮ್ಮ ಕಾಂಟಾಕ್ಟ್ ನಲ್ಲಿರುವವರಿಗೆ ನಂಬರ್ ಬದಲಾವಣೆಯ ಕುರಿತು ಮಾಹಿತಿ ನೀಡಬಹುದಾಗಿದೆ. ವೈಯಕ್ತಿಕ ಸಂಪರ್ಕಗಳು ಮಾತ್ರವಲ್ಲದೆ ಗುಂಪುಗಳೂ ಸಹ, ನಿಮ್ಮ ಭಾಗವಾಗಿರುವ ಹೊಸ ವಾಟ್ಸ್ಆ್ಯಪ್ ಸಂಖ್ಯೆಯ ಬಗ್ಗೆ ತಿಳಿಸಲಾಗುವುದು. ಈ ವೈಶಿಷ್ಟ್ಯದೊಂದಿಗೆ, ನಿಮ್ಮ ಎಲ್ಲಾ ಚಾಟ್​ಗಳು, ಮೀಡಿಯಾ ಫೈಲ್​ಗಳು ಮತ್ತು ವಾಟ್ಸ್ಆ್ಯಪ್​ನಲ್ಲಿ ಹಂಚಿಕೊಂಡಿರುವ ಎಲ್ಲಾ ಇತರ ಡೇಟಾಗಳು ಉಳಿಯುತ್ತವೆ ಮತ್ತು ಅಳಿಸಲಾಗುವುದಿಲ್ಲ.

ಇನ್ನು ಒಂದು ವೇಳೆ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ವಾಟ್ಸ್ಆ್ಯಪ್ ಖಾತೆಗಳಿದ್ದು, ಹಳೆ ಖಾತೆಯನ್ನು ನೀವು ಬಂದ್ ಮಾಡಲು ಬಯಸುತ್ತಿದ್ದರೆ, ಇದಕ್ಕಾಗಿ ಸಿಂಪಲ್ ಸ್ಟೆಪ್ಸ್ ಇದೆ. ವಾಟ್ಸ್ಆ್ಯಪ್ ಸೆಟ್ಟಿಂಗ್ಸ್ ವಿಭಾಗದಲ್ಲಿನ ಅಕೌಂಟ್ಸ್ ಸೆಕ್ಷನ್​ನಲ್ಲಿ ಡಿಲೀಟ್ ಮೈ ಅಕೌಂಟ್ ಮೇಲೆ ಕ್ಲಿಕ್ ಮಾಡಿದರೆ ಪ್ರೊಫೈಲ್ ಡಿಲೀಟ್ ಆಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!