Tech Tips: ನಿಮಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲೂ ಟಿಕ್ ಬೇಕೇ?: ವೇರಿಫೈಡ್ ಬ್ಯಾಡ್ಜ್ ಪಡೆಯಲು ಇಲ್ಲಿದೆ ಹೊಸ ಟ್ರಿಕ್
Instagram Blue Tick: ಸಾಕಷ್ಟು ಪ್ರಸಿದ್ಧಿ ಪಡೆದಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರ ಅಕೌಂಟ್ ಬ್ಲೂ ಟಿಕ್ ಇದ್ದರೆ ಅದಕ್ಕೊಂದು ವಿಶೇಷ ಗೌರವ ಎಂದೇ ಹೇಳಬಹುದು. ಹಾಗಾದರೆ ಇನ್ಸ್ಟಾದಲ್ಲಿ ಬ್ಲೂ ಟಿಕ್ (Blue Tick) ಬ್ಯಾಡ್ಜ್ ಪಡೆಯುವುದು ಹೇಗೆ?.
ಸಾಮಾಜಿಕ ಜಾಲತಾಣಗಳು ಇಂದು ಸಾಕಷ್ಟು ಬದಲಾವಣೆ ಕಂಡಿದ್ದು ಈಗ ಮೊದಲಿನಂತಿಲ್ಲ. ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸ್ಆ್ಯಪ್ (WhatsApp) ಅನೇಕ ರೀತಿಯಲ್ಲಿ ಬಳಕೆದಾರರಿಗೆ ಸಹಾಯ ಮಾಡುತ್ತಿದೆ. ಇವುಗಳ ಜೊತೆಗೆ ಮತ್ತೊಂದು ಪ್ರಸಿದ್ಧ ಜಾಲತಾಣ ಇನ್‌ಸ್ಟಾಗ್ರಾಮ್ (Instagram) ಕೂಡ ಹಿಂದೆ ಬಿದ್ದಿಲ್ಲ. ತಿಂಗಳಿಗೆ ಬಿಲಿಯನ್ಗೂ ಅಧಿಕ ಆ್ಯಕ್ಟಿವ್ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಾಗ್ರಾಮ್ ಈಗ ಕೇವಲ ಫೋಟೋ- ವಿಡಿಯೋ ಹಂಚಿಕೊಳ್ಳಲು ಮಾತ್ರ ಉಳಿದಿಲ್ಲ. ಬದಲಾಗಿ ದೊಡ್ಡ ವ್ಯಾಪಾರದ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಹೀಗೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರ ಅಕೌಂಟ್ ಬ್ಲೂ ಟಿಕ್ ಇದ್ದರೆ ಅದಕ್ಕೊಂದು ವಿಶೇಷ ಗೌರವ ಎಂದೇ ಹೇಳಬಹುದು. ಹಾಗಾದರೆ ಇನ್ಸ್ಟಾದಲ್ಲಿ ಬ್ಲೂ ಟಿಕ್ (Blue Tick) ಬ್ಯಾಡ್ಜ್ ಪಡೆಯುವುದು ಹೇಗೆ?.
ಇನ್‌ಸ್ಟಾಗ್ರಾಮ್‌ನಲ್ಲಿ ಆಟೋಮ್ಯಾಟಿಕ್ ಆಗಿ ಬ್ಲೂ ಟಿಕ್ ಮಾರ್ಕ್ ಆಯ್ಕೆಗಳಿಲ್ಲ. ಬದಲಿಗೆ ಬಳಕೆದಾರರು ಕೆಲವು ವೈಯಕ್ತಿಕ ದಾಖಲೆಗಳ ವಿವರಗಳನ್ನು ನಮೋದಿಸಿ ಇದನ್ನು ಪಡೆದುಕೊಳ್ಳಬಹುದು. ಇದನ್ನೆಲ್ಲಾ ಪರಿಶೀಲಿಸಿದ ನಂತರ ಇನ್‌ಸ್ಟಾಗ್ರಾಮ್ ಬ್ಲೂ ಟಿಕ್ ನೀಡುತ್ತದೆ. ಇದನ್ನು ಪರಿಶೀಲನೆ ಬ್ಯಾಡ್ಜ್ ಎಂದು ಕರೆಯಲಾಗುತ್ತದೆ. ಹಾಗಾದರೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲನೆ ಬ್ಯಾಡ್ಜ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ.
Tech Tips: ನಿಮಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಕಡಿಮೆಯಿದ್ದರೆ ಈ ಟ್ರಿಕ್ ಫಾಲೋ ಮಾಡಿ ನೋಡಿ
- ಮೊದಲಿಗೆ ಇನ್‌ಸ್ಟಾಗ್ರಾಮ್ ಆ್ಯಪ್ ಅನ್ನು ತೆರೆದು ಸ್ಕ್ರೀನ್ ಕೆಳಗಿನ ಬಲಭಾಗದಲ್ಲಿರುವ ಪ್ರೊಫೈಲ್ ಚಿತ್ರದ ಐಕಾನ್ ಮೇಲೆ ಟ್ಯಾಪ್ ಮಾಡಿ.
- ಈಗ ಮೇಲಿನ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನುವನ್ನು ಸೆಲೆಕ್ಟ್ ಮಾಡಿ.
- ನಂತರ ಅಲ್ಲಿ ಕಾಣಿಸುವ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಬೇಕಾಗುತ್ತದೆ.
- ನೀವು ಈಗ ಮತ್ತೊಮ್ಮೆ ಖಾತೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ ಮತ್ತು ನಂತರ ವಿನಂತಿ ಪರಿಶೀಲನೆಯನ್ನು ಟ್ಯಾಪ್ ಮಾಡಿ.
- ಇಲ್ಲಿ ನಿಮ್ಮ ಪೂರ್ಣ ಹೆಸರು ಮತ್ತು ಫೋಟೋ ID ನೀಡಿ. ಉದಾಹರಣೆಗೆ, ನೀವು ಸರ್ಕಾರ ನೀಡಿದ ಫೋಟೋ ಐಡಿ ಅಥವಾ ಅಧಿಕೃತ ವ್ಯಾಪಾರ ದಾಖಲೆಗಳನ್ನು ಒದಗಿಸಬಹುದು.
- ಮುಂದಿನ ಹಂತಗಳನ್ನು ಪೂರ್ಣಗೊಳಿಸಲು ಪರದೆಯ ಮೇಲ್ಭಾಗದಲ್ಲಿರುವ ನಿರ್ದೇಶನಗಳನ್ನು ಅನುಸರಿಸಿ.
ಇನ್ಸ್ಟಾದಲ್ಲಿ ಬ್ಲೂಟಿಕ್‌ಗಾಗಿ ನೀವು ಈ ರೀತಿ ವಿನಂತಿಸಬಹುದು. ಹಾಗಂತ ನೀವು ಕೇಳುವಷ್ಟು ಬಾರಿ ನೀಲಿ ಟಿಕ್ ಬರುತ್ತದೆ ಎಂದು ಹೇಳುವುದು ಕಷ್ಟ. ಸಂಪೂರ್ಣ ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಂಡರೂ ಸಹ, ನಿಮ್ಮ ವಿನಂತಿಯ ರದ್ದತಿಗೆ ಇತರ ಕಾರಣಗಳೂ ಇರಬಹುದು. ಇದರ ಜೊತೆಗೆ ಬಳಕೆದಾರರು ಒಂದು ಸಮಯದಲ್ಲಿ ಒಂದು ವಿನಂತಿಯನ್ನು ಮಾತ್ರ ಸಲ್ಲಿಸಬಹುದು.
ನಿಮ್ಮ ಖಾತೆಯನ್ನು ಪರಿಶೀಲಿಸಿದರೆ, ಅಲೌಂಟ್ನಲ್ಲಿ ಬಳಕೆದಾರ ಹೆಸರನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ. ನೀವು ಅದನ್ನು ಮಾಡಿದರೂ, ಪರಿಶೀಲನೆ ಬ್ಯಾಡ್ಜ್ ಅನ್ನು ಬೇರೆ ಖಾತೆಗೆ ವರ್ಗಾಯಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಎಲ್ಲಾದರು ತಪ್ಪು ಮಾಹಿತಿಯೊಂದಿಗೆ ವೆರಿಫಿಕೇಶನ್ ಬ್ಯಾಡ್ಜ್ ಪಡೆದರೆ, ಇನ್‌ಸ್ಟಾಗ್ರಾಮ್ ಅದರ ಬಗ್ಗೆ ತಿಳಿದ ತಕ್ಷಣ ಬ್ಲೂಟಿಕ್ ಅನ್ನು ತೆಗೆದುಹಾಕಿ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಇನ್‌ಸ್ಟಾಗ್ರಾಮ್ ಬ್ಲೂ ಟಿಕ್ ನೀಡುವ ಮೊದಲು ನಿಮ್ಮ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಿದೆ. ನಿಮ್ಮ ಖಾತೆಯ ಹಿಂದಿನ ಹಿಸ್ಟರಿ, ಎಷ್ಟು ಫಾಲೋವರ್ಸ್ ಇದ್ದಾರೆ ಜೊತೆಗೆ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ ಖಾತೆ ಮತ್ತು ಸದಾ ಸಕ್ರೀಯವಾಗಿರುವ ಖಾತೆಗೆ ಮಾತ್ರ ಈ ಬ್ಲೂ ಟಿಕ್ ದೊರೆಯುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ