Vivo Y100: ಇದು ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್: ವಿವೋದಿಂದ ಭಾರತದಲ್ಲಿ ವಿಶಿಷ್ಠ ಮೊಬೈಲ್ ರಿಲೀಸ್: ಬೆಲೆ ಎಷ್ಟು?
ಭಾರತದಲ್ಲಿ ವಿವೋ ತನ್ನ ಹೊಸ ವಿವೋ ವೈ100 (Vivo Y100) ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಿದೆ. ಈ ಫೊನಿನ ಪ್ರಮುಖ ವಿಶೇಷತೆ ಡಿಸೈನ್. ಈ ಫೋನಿನ ಹಿಂಭಾಗದ ಪ್ಯಾನೆಲ್ನ ಬಣ್ಣ ಬದಲಾಗುತ್ತಾ ಇರುತ್ತದೆ.
ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳು (Smartphone) ಬಿಡುಗಡೆ ಆಗುತ್ತಿದೆ. ಸಾಧಾರಣ ಕ್ಯಾಮೆರಾ (Camera), ಬ್ಯಾಟರಿ, ಪ್ರೊಸೆಸರ್ ಇರುವ ಮೊಬೈಲ್ಗಳು ಹೇಳ ಹೆಸರಿಲ್ಲದಂತೆ ಹೋದರೆ ಹೊಸ ತನದಿಂದ ಕೂಡಿರುವ ಫೋನ್ ಭರ್ಜರಿ ಸೇಲ್ ಆಗುತ್ತಿದೆ. ಈಗ ಕೇವಲ ಡಿಸೈನ್ಗೆ ಮನಸೋತು ಸ್ಮಾರ್ಟ್‌ಫೋನ್ ಕೊಂಡುಕೊಳ್ಳುವವರು ಕೂಡ ಇದ್ದಾರೆ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ವಿವೋ (Vivo) ಸಂಸ್ಥೆ ವಿಶೇಷವಾದ ಮೊಬೈಲ್ ಒಂದನ್ನು ಮಾರುಕಟ್ಟೆಯಲ್ಲಿ ಅನಾವರಣ ಮಾಡಿದೆ.
ಇದೀಗ ಭಾರತದಲ್ಲಿ ವಿವೋ ತನ್ನ ಹೊಸ ವಿವೋ ವೈ100 (Vivo Y100) ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಿದೆ. ಈ ಫೊನಿನ ಪ್ರಮುಖ ವಿಶೇಷತೆ ಡಿಸೈನ್. ಈ ಫೋನಿನ ಹಿಂಭಾಗದ ಪ್ಯಾನೆಲ್ನ ಬಣ್ಣ ಬದಲಾಗುತ್ತಾ ಇರುತ್ತದೆ. ಇದರ ಜೊತೆಗೆ ಪ್ರೊಸೆಸರ್, ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾಗಳನ್ನು ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನು ಫೀಚರ್ಗಳಿವೆ? ಎಂಬುದನ್ನು ನೋಡೋಣ.
Make way for the latest style sensation! The all new vivo Y100 is available now. Buy today! To buy, visit https://t.co/ETfHFrw4dv#ColorMyStyle #vivoY100 #ItsMyStyle #5G #BuyNow pic.twitter.com/t9knVj4Wsd
— vivo India (@Vivo_India) February 16, 2023
ವಿವೋ Y100 ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB RAM + 128GB ಮಾದರಿಗೆ 24,999ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಇಂದಿನಿಂದಲೇ ಈ ಫೋನ್ ಖರೀದಿಗೆ ಸಿಗುತ್ತಿದೆ. ಹೆಚ್ಡಿಎಫ್ಸಿ, ICICI ಬ್ಯಾಂಕ್, ಎಸ್ಬಿಐ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ 1500ರೂ. ರಿಯಾಯತಿ ಪಡೆಯಬಹುದು.
Tech Tips: ನಿಮ್ಮ ಫೇಸ್ಬುಕ್ ಪ್ರೊಫೈಲ್ ಯಾರು ನೋಡುತ್ತಿದ್ದಾರೆಂದು ತಿಳಿಯಬೇಕೆ?: ಇಲ್ಲಿದೆ ಸಿಂಪಲ್ ಟ್ರಿಕ್
ವಿವೋ Y100 ಸ್ಮಾರ್ಟ್‌ಫೋನ್ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.38 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ರೇಟ್ನಿಂದ ಕೂಡಿದ್ದು, ಸೂರ್ಯನ ಕಿರಣದ ಆಧಾರದ ಮೇಲೆ ಫೋನಿನ ಹಿಂಭಾಗ ಬಣ್ಣ ಬದಲಾಗುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಮೂಲದ ಫನ್ಟಚ್ OS 13 ಬೆಂಬಲದೊಂದಿಗೆ ರನ್ ಆಗಲಿದೆ. ಮೆಮೊರಿ ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ.
ಈ ಸ್ಮಾರ್ಟ್ಫೋನ್ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 64ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ. ಹಿಂಭಾಗದ ಕ್ಯಾಮೆರಾಗಳು ನೈಟ್ ಮೋಡ್, ಪೋರ್ಟ್ರೇಟ್, ಸೂಪರ್ ಮ್ಯಾಕ್ರೋ, ಹೈ ರೆಸಲ್ಯೂಶನ್, ಪನೋರಮಾ, ಲೈವ್ ಫೋಟೋ, ಸ್ಲೋ ಮೋಷನ್ ಸೇರಿದಂತೆ ನೂತನವಾದ ಆಯ್ಕೆಗಳಿವೆ. 16 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ವಿವೋ V25 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 2.4GHz / 5HGz, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ