Nokia X30 5G: ಭಾರತದಲ್ಲಿ ಫೆಬ್ರವರಿ 20ರಿಂದ ಸೇಲ್ ಆರಂಭ; ದರ ಎಷ್ಟು?

ಎಚ್​ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಕಂಪನಿ, ಭಾರತದಲ್ಲಿ ನೂತನ 5G ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಸ್ಮಾರ್ಟ್​ಫೋನ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.

Nokia X30 5G: ಭಾರತದಲ್ಲಿ ಫೆಬ್ರವರಿ 20ರಿಂದ ಸೇಲ್ ಆರಂಭ; ದರ ಎಷ್ಟು?
ನೋಕಿಯಾ X30 5G ಸ್ಮಾರ್ಟ್​ಫೋನ್​
Follow us
|

Updated on: Feb 15, 2023 | 4:32 PM

ಬೇಸಿಕ್ ಫೀಚರ್ ಫೋನ್​ಗಳ ಮೂಲಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ನೋಕಿಯಾ (Nokia), ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲೂ ಹೊಸ ಮಾದರಿಗಳನ್ನು ಪರಿಚಯಿಸಿ, ಗ್ರಾಹಕರ ಮನ ಗೆಲ್ಲಲು ಕಸರತ್ತು ನಡೆಸುತ್ತಿದೆ. ಬಜೆಟ್ ದರಕ್ಕೆ ಹೆಚ್ಚಿನ ಫೀಚರ್​ಗಳುಳ್ಳ ಸ್ಮಾರ್ಟ್​ಫೋನ್​ಗಳನ್ನು ಒದಗಿಸುವುದು ನೋಕಿಯಾ ಗುರಿಯಾಗಿದೆ.

ನೋಕಿಯಾ ಎಕ್ಸ್ ಸರಣಿಯಲ್ಲಿ ಹೊಸದಾಗಿ ಪರಿಚಯಿಸಿದ್ದ ನೋಕಿಯಾ X30 5G (Nokia x30 5G) ಸ್ಮಾರ್ಟ್​ಫೋನ್ ಫೆಬ್ರವರಿ 20ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ನೂತನ ಸ್ಮಾರ್ಟ್​ಫೋನ್ ನಮ್ಮ ದೇಶದಲ್ಲಿ ಬಿಡುಗಡೆಯಾಗುತ್ತಿರುವುದನ್ನು ನೋಕಿಯಾ ಕಂಪನಿ ಟ್ವೀಟ್ ಮಾಡಿ ದೃಢಪಡಿಸಿದೆ.

ಹೊಸ ನೋಕಿಯಾ ಫೋನ್​ನಲ್ಲಿ ಏನಿದೆ? 

ನೂತನ ನೋಕಿಯಾ X30 5G ಸ್ಮಾರ್ಟ್​ಫೋನ್​ನಲ್ಲಿ ಕ್ವಾಲ್ಕಂ ಸ್ನ್ಯಾಪ್​​ಡ್ರ್ಯಾಗನ್ 695 5G ಪ್ರೊಸೆಸರ್, 8 GB RAM ಆಯ್ಕೆ ಇದೆ. ಅಲ್ಲದೆ, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮರಾ ಹಾಗೂ 4,200mAh ಬ್ಯಾಟರಿ ಜತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ ಎಂದು ಕಂಪನಿ ಹೇಳಿದೆ. ನೋಕಿಯಾ X30 5G ಸ್ಮಾರ್ಟ್​ಫೋನ್​ಗೆ ಮೂರು ವರ್ಷಗಳವರೆಗೆ ಆ್ಯಂಡ್ರಾಯ್ಡ್ ಮತ್ತು ಭದ್ರತಾ ಅಪ್​ಡೇಟ್ ಲಭ್ಯವಾಗಲಿದೆ.

ನೋಕಿಯಾ X30 5G ಸ್ಮಾರ್ಟ್​ಫೋನ್​ ವಿಶೇಷತೆಗಳು

ಹೊಸ ಸ್ಮಾರ್ಟ್​ಫೋನ್​ನಲ್ಲಿ ಆ್ಯಂಡ್ರಾಯ್ಡ್ 12 ಓಎಸ್, 6.43 ಇಂಚಿನ ಫುಲ್​ ಎಚ್​ಡಿ+ ಡಿಸ್​ಪ್ಲೇ, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮರಾ ಜತೆಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದರ ವಿಶೇಷತೆಯಾಗಿದೆ.

ಬೆಲೆ ಮತ್ತು ಆಫರ್ ವಿವರ 

ಹೊಸ ನೋಕಿಯಾ X30 5G ಸ್ಮಾರ್ಟ್​ಫೋನ್​ ದರ ಭಾರತದಲ್ಲಿ ಎಷ್ಟು ಮತ್ತು ಕೊಡುಗೆಗಳು ಯಾವುವು ಎಂದು ಕಂಪನಿ ಬಹಿರಂಗಪಡಿಸಿದೆ. ಕ್ಲೌಡಿ ಬ್ಲೂ ಐಸ್ ವೈಟ್ ಎನ್ನುವ ಎರಡು ಬಣ್ಣಗಳಲ್ಲಿ ನೋಕಿಯಾ ನೂತನ ಸ್ಮಾರ್ಟ್​ಫೋನ್ ದೊರೆಯಲಿದೆ. 8 GB RAM + 256 GB ಆವೃತ್ತಿಗೆ ಭಾರತದಲ್ಲಿ ₹49,999 ದರವನ್ನು ನೋಕಿಯಾ ನಿಗದಿಪಡಿಸಿದೆ. ಆರಂಭಿಕ ಕೊಡುಗೆಯಾಗಿ, ₹1,000 ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ, ₹2,799 ಮೌಲ್ಯದ ನೋಕಿಯಾ ಕಂಫರ್ಟ್ ಇಯರ್​ಬಡ್ಸ್ ಹಾಗೂ ₹2,999 ಮೌಲ್ಯದ 33W ಫಾಸ್ಟ್ ಚಾರ್ಜರ್ ಉಚಿತವಾಗಿ ದೊರೆಯಲಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಪ್ರಿಬುಕಿಂಗ್ ಮಾಡುವ ಗ್ರಾಹಕರಿಗೆ ಒಟ್ಟಾರೆ ₹6,500 ಮೌಲ್ಯದ ಆಫರ್ ಪ್ರಯೋಜನ ಲಭ್ಯವಾಗಲಿದೆ.

ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು