- Kannada News Photo gallery Tech Tips Hers is the simple tips and tricks to Increase Instagram Followers Latest Technology News in Kannada
Tech Tips: ನಿಮಗೆ ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಸ್ ಕಡಿಮೆಯಿದ್ದರೆ ಈ ಟ್ರಿಕ್ ಫಾಲೋ ಮಾಡಿ ನೋಡಿ
Instagram Tricks: ಇನ್ಸ್ಟಾಗ್ರಾಮ್ನಲ್ಲಿ ನಿಮ್ಮನ್ನು ಫಾಲೋ ಮಾಡುವವರು ಯಾರೂ ಇರುವುದಿಲ್ಲ. ಹಾಗಂತ ಇದಕ್ಕೆ ನೀವು ಬೇಸರ ಪಡಬೇಕಿಲ್ಲ. ಯಾಕೆಂದರೆ ಕೆಲವೊಂದು ಟ್ರಿಕ್ಗಳ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ನೀವು ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಬಹುದು.
Updated on: Nov 26, 2022 | 2:51 PM

ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾaಮ್ (Instagram) ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ಸೆಲೆಬ್ರಿಟಿಗಳ ಖಾತೆ ತೆರೆದರೆ ಸಾಕು ಅವರನ್ನು ಫಾಲೋ ಮಾಡುವವ ಸಂಖ್ಯೆ ಮಿಲಿಯನ್ನಲ್ಲಿ ಇರುತ್ತದೆ. ಅಲ್ಲದೆ ಈಗ ಕೇವಲ ಫೋಟೋಗ್ರಫಿ ಮಾಡುವವರು, ರೀಲ್ಸ್ ಮಾಡುವವರು ಕೂಡ ಲಕ್ಷ ಲಕ್ಷ ಫಾಲೋವರ್ಸ್ ಹೊಂದಿರುತ್ತಾರೆ. ಇದನ್ನು ನೋಡಿದಾಗ ನಮಗೂ ಕೂಡ ಹೆಚ್ಚು ಫಾಲೋವರ್ಸ್ ಇರಬೇಕು ಎಂಬ ಆಸೆ ಹುಟ್ಟುತ್ತದೆ.

ಆದರೆ, ನಿಮ್ಮನ್ನು ಫಾಲೋ ಮಾಡುವವರು ಯಾರೂ ಇರುವುದಿಲ್ಲ. ಹಾಗಂತ ಇದಕ್ಕೆ ನೀವು ಬೇಸರ ಪಡಬೇಕಿಲ್ಲ. ಯಾಕೆಂದರೆ ಕೆಲವೊಂದು ಟ್ರಿಕ್ಗಳ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ನೀವು ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಬಹುದು.

ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಗಳ ಸಂಖ್ಯೆಯನ್ನು ಹೆಚ್ಚಿಸಲು ಅನೇಕ ಥರ್ಡ್ ಪಾರ್ಟಿ ಆ್ಯಪ್ಗಳು ಇವೆ. ಆ ಪೈಕಿ ಸಾಕಷ್ಟು ಜನರು ಉಪಯೋಗಿಸುತ್ತಿರುವ ಅಪ್ಲಿಕೇಶನ್ ಎಂದರೆ ಅದು ಗೆಟ್ಇನ್ಸ್ಟಾ (GetInsta) ಎಂಬ ಆ್ಯಪ್. ಈ ಆ್ಯಪ್ ಅನ್ನು ಬಳಸಿಕೊಂಡು ನೀವು ಫಾಲೋವರ್ಸ್ ಅಧಿಕ ಮಾಡಬಹುದು. ಅಷ್ಟೇ ಅಲ್ಲದೆ ನಿಮ್ಮ ಪೋಸ್ಟ್ಗಳಿಗೆ ಹೆಚ್ಚು ಲೈಕ್ಸ್ ಬರುವಂತೆಯೂ ಮಾಡಬಹುದು.

ಇನ್ನು ಫಾಲೋವರ್ಸ್ ಗ್ಯಾಲರಿ (Followers Gallery) ಎಂಬ ಮತ್ತೊಂದು ಆ್ಯಪ್ ಕೂಡ ಇದೆ. ಇದರಲ್ಲಿ ಕೂಡ ಕಾಯಿನ್ ಮೂಲಕ ಫಾಲೋವರ್ಸ್, ಲೈಕ್ಸ್ ಪಡೆಯಬಹುದಾಗದೆ. ಇದೊಂದು ಉಚಿತ ಆ್ಯಪ್ ಆಗಿದ್ದು ಉಪಯೋಗಿಸಲು ಯಾವುದೇ ಹಣ ನೀಡಬೇಕಾದ ಅಗತ್ಯವಿಲ್ಲ.

ಇನ್ಸ್ಟಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಲು ವೆಬ್‌ಸೈಟ್‌ಗಳು ಇವೆ. www.Skfollowerspro.in ಹಾಗೂ https://locationary.org ವೆಬ್‌ಸೈಟ್‌ಗಳ ಮೂಲಕ ನೀವು ಫಾಲೋವರ್ಸ್ನ ಖರೀದಿಸಬಹುದು. ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಬ್ಲಾಗಿಂಗ್, ಇನ್ಫುಯೆನ್ಸರ್ ಮಾರ್ಕೆಟಿಂಗ್, ಸರ್ಚ್ ಮೀಡಿಯಾ ಆಪ್ಟಿಮೈಸೇಶನ್, ಇತ್ಯಾದಿಗಳು ನಿಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಕೇವಲ ಥರ್ಡ್ ಪಾರ್ಟಿ ಆ್ಯಪ್ ಮೂಲಕ ಮಾತ್ರವಲ್ಲ ಸ್ವತಃ ಇನ್ಸ್ಟಾಗ್ರಾಮ್ ಮೂಲಕವೂ ಕೆಲವೊಂದಿಷ್ಟು ಟ್ರಿಕ್ ಉಪಯೋಗಿಸಿ ಫಾಲೋವರ್ಸ್ ಹೆಚ್ಚಿಸಬಹುದು. ಇದರಲ್ಲಿ ಟ್ಯಾಗ್‌ಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿವೆ. ನೀವು ಯಾವುದಾದರು ಫೋಟೋ, ರೀಲ್ಸ್ ಹಂಚಿಕೊಳ್ಳುವ ಮೊದಲು ನಿಮ್ಮ ಪೋಸ್ಟ್ನಲ್ಲಿನ ಶೀರ್ಷಿಕೆಯ ನಂತರ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೆ, ನಿಮ್ಮ ಪೋಸ್ಟ್ ಆ ಹ್ಯಾಶ್‌ಟ್ಯಾಗ್‌ನ ಟ್ರೆಂಡಿಂಗ್ ಪೋಸ್ಟ್ಗಳಲ್ಲಿ ಕಾಣಿಸಿಕೊಳ್ಳಬಹುದು.

ನೀವು ಒಂದು ಫೋಟೋ ಅಥವಾ ರೀಲ್ಸ್ ಅನ್ನು ಪೋಸ್ಟ್ ಮಾಡುವಾಗ ಅದಕ್ಕೆ ನೀಡುವ ಶೀರ್ಷಿಕೆ ಕೂಡ ನಿಮ್ಮ ಫಾಲೋವರ್ಗಳನ್ನು ಹೆಚ್ಚಿಸಬಹುದು. ಒಂದು ಸಂಶೋಧನೆಯ ಪ್ರಕಾರ ಇನ್ಸ್ಟಾಗ್ರಾಮ್ನಲ್ಲಿ 1 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜನರು ಅವರ ಪೋಸ್ಟ್ಗಳು ಶೀರ್ಷಿಕೆಗಳಿಲ್ಲದೆ ಹೆಚ್ಚು ಇಷ್ಟವಾಗುತ್ತವೆ.

ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಸ್ ಹೆಚ್ಚಿಸಲು, ಫಾಂಟ್ ಸ್ಟೈಲಿಶ್ ಆಗಿ ಕಾಣಲು, ಲೈಕ್ಸ್ ಬರಲು, ಕಮೆಂಟ್ ಮಾಡಲೆಂದು ಅನೇಕ ಥರ್ಡ್ ಪಾರ್ಟಿ ಆ್ಯಪ್ಗಳಿವೆ. ಆದರೆ, ಇದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈರೀತಿಯ ಆ್ಯಪ್ಗಳಿಗೆ ಜನರು ಮರಳಾಗುತ್ತಾರೆ ಎಂದು ತಿಳಿದು ಹ್ಯಾಕರ್ಗಳು ಫೇಕ್ ಆ್ಯಪ್ ಕ್ರಿಯೆಟ್ ಮಾಡಿ ಇಟ್ಟಿರುತ್ತಾರೆ. ಇದರಿಂದ ಎಚ್ಚರ ವಹಿಸಿಕೊಳ್ಳಿ.









