- Kannada News Photo gallery Bellary Auto Driver Anantharaju marries Belgian Jean Philippe Camille at Hampi
ಆಟೋ ರಾಜ ಅನಂತರಾಜು ಬೆಲ್ಜಿಯಂ ಕನ್ಯೆಯ ಕೈಹಿಡಿದರು! ಮದುವೆಯ ಸಂತಸದ ದೃಶ್ಯಾವಳಿಗಳು ಇಲ್ಲಿವೆ ನೋಡಿ!
ಹಿಂದೂ ಸಂಪ್ರದಾಯದಂತೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, ಕೆಮಿಲ್ ಕುಟುಂಬಸ್ಥರು 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಅಳಿಯ ಅನಂತರಾಜು, ಪುತ್ರಿ ಕೆಮಿಲ್ ಗೆ ಆಶೀರ್ವದಿಸಿದ್ದಾರೆ.
Updated on: Nov 26, 2022 | 4:05 PM

1. ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹವಾಗಬೇಕಿದ್ದ ಈ ಜೋಡಿಗೆ ಕೊರೊನಾ ಮಹಾಮಾರಿ ತಡೆಯೊಡ್ಡಿತ್ತು. ಹಿಂದೂ ಸಂಪ್ರದಾಯದಂತೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, ಕೆಮಿಲ್ ಕುಟುಂಬಸ್ಥರು 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಅಳಿಯ ಅನಂತರಾಜು, ಪುತ್ರಿ ಕೆಮಿಲ್ ಗೆ ಆಶೀರ್ವದಿಸಿದ್ದಾರೆ.

2. ಹಂಪಿ ಆಟೋ ರಾಜ ಅನಂತರಾಜು ಕೈಹಿಡಿದ ಬೆಲ್ಜಿಯಂ ಕನ್ಯೆ! ಹಿಂದೂ ಸಂಪ್ರದಾಯದಂತೆ ಮಾದುವೆಯಾದರು!

3. ಮದುವೆ ಸ್ವರ್ಗದಲ್ಲೆ ನಿಶ್ಚಿತವಾಗಿಬಿಟ್ಟಿರುತ್ತೆ ಅನ್ನೋ ಮಾತಿದೆ. ಯೆಸ್ ಅದರಂತೆ ಎತ್ತಣ ಮಾಮರ.. ಎತ್ತಣ ಕೋಗಿಲೆ, ಎತ್ತಿಂದೆತ್ತ ಸಂಬಂಧವಯ್ಯ ಅನ್ನೋ ಹಾಗೆ ಇಲ್ಲೊಂದು ಮದುವೆ ವಿಶೇಷವಾಗಿ ನಡೆದಿದೆ. ಬೆಲ್ಜಿಯಂ ಯುವತಿ ಮತ್ತು ವಿಶ್ವವಿಖ್ಯಾತ ಹಂಪಿಯ ಯುವಕ ಅನಂತರಾಜು ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಆಟೋ ಚಾಲಕನ ಕೈ ಹಿಡಿದಿರೋ ವಿದೇಶಿ ಕನ್ಯೆ ಕೆಮಿಲ್ ಅವರ ಮದುವೆಗೆ ಇಡೀ ಕುಟುಂಬಸ್ಥರು ಸಾಕ್ಷಿಯಾಗಿದ್ದು, ಹಿಂದೂ ಸಂಪ್ರದಾಯದಂತೆ ಪರಸ್ಪರ ಹಾರ ಬದಲಿಸಿ, ಸಪ್ತಪದಿ ತುಳಿಸಿದ್ದಾರೆ.

4. ಚಿತ್ರದಲ್ಲಿರುವ ಮುದ್ದು ಮುಖದ ಚೆಲುವೆ ಹೆಸರು ಕೆಮಿಲ್. ಇನ್ನು, ಆಟೋ ಚಾಲಕನ ಹೆಸರು ಅನಂತರಾಜು. ಕೆಮಿಲ್ ಬೆಲ್ಜಿಯಂ ದೇಶದವಳಾದ್ರೆ, ಅನಂತರಾಜು ಹಂಪಿಯ ನಿವಾಸಿ. ಇಬ್ಬರೂ ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಪಡೆದು ಸಪ್ತಪದಿ ತುಳಿದಿದ್ದಾರೆ. ಗುರುವಾರ ಸಂಜೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಈ ಜೋಡಿ ಶುಕ್ರವಾರ ಶುಭ ಕುಂಭ ಮುಹೂರ್ತದಲ್ಲಿ ಹಂಪಿಯ ವಿರೂಪಾಕ್ಷೇಶ್ವರನ ಸನ್ನಧಿಯಲ್ಲಿ ಉಭಯ ಕುಟುಂಬಸ್ಥರ ಸಮಕ್ಷಮದಲ್ಲಿ ಮದುವೆ ಆಗಿದ್ದಾರೆ.

5. ಅನಂತರಾಜು ಆಟೋ ಚಾಲಕ ಹಾಗೂ ಹಂಪಿ ಮಾರ್ಗದರ್ಶಿಯಾಗಿ (ಟೂರ್ ಗೈಡ್) ವಿಜಯನಗರದ ಗತವೈಭವವನ್ನು ಪ್ರವಾಸಿಗರಿಗೆ ಉಣಬಡಿಸ್ತಾನೆ. ಇತ್ತ ಬೆಲ್ಜಿಯಂ ಕನ್ಯೆ ಕೆಮಿಲ್ ಸೋಷಿಯಲ್ ವರ್ಕರ್. ಕಳೆದ ನಾಲ್ಕೈದು ವರ್ಷದ ಹಿಂದೆ ಜೀಪ್ ಫಿಲಿಪ್ಪೆ ಕುಟುಂಬ ಸಮೇತ ಹಂಪಿ ಗತವೈಭವ ಅರಿಯಲು ಬಂದಿರುತ್ತಾರೆ. ಜೀಮ್ ಫಿಲಿಪ್ಪೆ ಪರಿವಾರಕ್ಕೆ ಹಂಪಿಯಲ್ಲಿ ಆಟೋ ಚಾಲಕ ಅನಂತರಾಜುವಿನ ಪರಿಚಯ ಆಗುತ್ತೆ.

6. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕ ಆಗಿಯೂ ಅವರ ಮನಗೆದ್ದಿದ್ದಾನೆ. ಮರಿಯನ್ನೇ ಜೀಮ್ ಫಿಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದಾರೆ. ದಿನ ಕಳೆದಂತೆ ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾರ್ಗದರ್ಶಕ ಅನಂತರಾಜುವಿನ ಮೇಲೆ ಯುವತಿ ಕೆಮಿಲ್ ಗೆ ಪ್ರೇಮ ಅರಳಿದೆ. ಈ ಮಧ್ಯೆ ಇಬ್ಬರೂ ಬೇರೆ ಬೇರೆ ದೇಶದಲ್ಲಿದ್ರೂ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಅದರಂತೆ ಇಂದು ಮದುವೆ ಆಗಿ ಎಲ್ಲ ಗಮನ ಸೆಳೆದಿದ್ದಾರೆ.

7. ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹವಾಗಬೇಕಿದ್ದ ಈ ಜೋಡಿಗೆ ಕೊರೊನಾ ಮಹಾಮಾರಿ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾವಹನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿಯಾಗಿ, ವೈಭವದಿಂದ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, ಕೆಮಿಲ್ ಕುಟುಂಬಸ್ಥರು 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಅಳಿಯ ಅನಂತರಾಜು, ಪುತ್ರಿ ಕೆಮಿಲ್ ಗೆ ಆಶೀರ್ವದಿಸಿದ್ದಾರೆ.

ಕೆಮಿಲ್ ಕುಟುಂಬಸ್ಥರು 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಅಳಿಯ ಅನಂತರಾಜು, ಪುತ್ರಿ ಕೆಮಿಲ್ ಗೆ ಆಶೀರ್ವದಿಸಿದ್ದಾರೆ.

8. ಒಟ್ಟಿನಲ್ಲಿ, ಹಣೆ ಬರಹ ಕೂಡಿ ಬಂದ್ರೆ ಹಡೆದ ತಾಯಿಗೂ ಕೇಳಬೇಕಿಲ್ಲ ಅನ್ನೋ ಹಾಗೇ, ವಿದೇಶದಿಂದ ಬಂದು ಹಂಪಿಯ ಯುವಕನಿಗೆ ಮಗಳ ಇಚ್ಚೆಯಂತೆ ಕೆಮಿಲ್ ಳನ್ನ ಪೋಷಕರು ಧಾರೆ ಎರೆದು ಕೊಟ್ಟಿದ್ದಾರೆ! ಪ್ರೇಮಿಗಳ ಮದುವೆಗೆ ಆಗಮಿಸಿದ್ದ ನೂರಾರು ಜನ ಗ್ರಾಮಸ್ಥರು ಅಕ್ಷತೆ ಹಾಕಿ ನವ ಜೋಡಿಗೆ ಹರಸಿದ್ರೆ, ಇತ್ತ ಕೆಮಿಲ್ ಕುಟುಂಬಸ್ಥರು ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು, ಕೈಗೆ ಬಳೆ ತೊಟ್ಟು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿರುವುದು ವಿಶೇಷವಾಗಿದೆ. ಇದಕ್ಕೆ ಅಲ್ವೇ ಮದುವೆ ಅನ್ನೋದು ಸ್ವರ್ಗದಲ್ಲೆ ನಿಶ್ಚಿಯವಾಗರುತ್ತೆ ಅನ್ನೋದು. (ವರದಿ: ವೀರೇಶ ದಾನಿ, ಟಿ ವಿ9, ವಿಜಯನಗರ)




