Whatsapp New Feature: ವಾಟ್ಸ್​ಆ್ಯಪ್ ಪರಿಚಯಿಸುತ್ತಿರುವ ಹೊಸ ಅಪ್ಡೇಟ್ ಕಂಡು ಸ್ಮಾರ್ಟ್​ಫೋನ್ ಕಂಪನಿಗಳು ಶಾಕ್: ಯಾಕೆ ಗೊತ್ತೇ?

Whatsapp Schedule Call: ಯಾವುದೇ ಸ್ಮಾರ್ಟ್​ಫೋನ್​ನಲ್ಲೂ ಈರೀತಿಯ ಆಯ್ಕೆ ಇಲ್ಲ. ಆದರೆ, ವಾಟ್ಸ್​ಆ್ಯಪ್ ಇದೇ ಮೊದಲ ಬಾರಿಗೆ ಕರೆಯನ್ನು ಶೆಡ್ಯುಲ್‌ ಮಾಡಿಕೊಳ್ಳಬಹುದಾದ ಉಪಯುಕ್ತ ಫೀಚರ್ ನೀಡಲು ಮುಂದಾಗಿದೆ.

Whatsapp New Feature: ವಾಟ್ಸ್​ಆ್ಯಪ್ ಪರಿಚಯಿಸುತ್ತಿರುವ ಹೊಸ ಅಪ್ಡೇಟ್ ಕಂಡು ಸ್ಮಾರ್ಟ್​ಫೋನ್ ಕಂಪನಿಗಳು ಶಾಕ್: ಯಾಕೆ ಗೊತ್ತೇ?
Whatsapp Schedule Call
Follow us
TV9 Web
| Updated By: Vinay Bhat

Updated on: Feb 11, 2023 | 1:14 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಕಳೆದ ವರ್ಷದಂತೆ ಈ ವರ್ಷ ಕೂಡ ಕುತೂಹಲಕಾರಿ ನೂತನ ಆಯ್ಕೆಗಳನ್ನು ಪರಿಚಯಿಸಲು ಶುರು ಮಾಡಿಕೊಂಡಿದೆ. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. 2023 ವರ್ಷದ ಮೊದಲ ತಿಂಗಳಲ್ಲೇ ಕೆಲ ಅಪ್ಡೇಟ್​ಗಳನ್ನು ನೀಡಿರುವ ವಾಟ್ಸ್​ಆ್ಯಪ್​ನಲ್ಲಿ ಈ ತಿಂಗಳು ಕೆಲ ಹೊಸ ಫೀಚರ್​ಗಳು ಬರಲಿಕ್ಕಿವೆ. ವರಿಜಿನಲ್ ಕ್ವಾಲಿಟಿಯಲ್ಲಿ ಫೋಟೋ ಕಳುಹಿಸುವ ಆಯ್ಕೆಯನ್ನು ಪರಿಚಯಿಸುವುದಾಗಿ ಇತ್ತೀಚೆಗಷ್ಟೆ ಘೋಷಿಸಿದ್ದ ಕಂಪನಿ ಇದೀಗ ವಾಟ್ಸ್​ಆ್ಯಪ್ ಕರೆಯನ್ನು ಶೆಡ್ಯುಲ್‌ (Schedule Call) ಮಾಡಿಕೊಳ್ಳಬಹುದಾದ ಉಪಯುಕ್ತ ಫೀಚರ್ ನೀಡಲು ಮುಂದಾಗಿದೆ.

ಹೌದು, ಯಾವುದೇ ಸ್ಮಾರ್ಟ್​ಫೋನ್​ನಲ್ಲೂ ಈರೀತಿಯ ಆಯ್ಕೆ ಇಲ್ಲ. ಆದರೆ, ವಾಟ್ಸ್​ಆ್ಯಪ್ ಇದೇ ಮೊದಲ ಬಾರಿಗೆ ತನ್ನ ಕರೆಗಳನ್ನು ಶೆಡ್ಯುಲ್‌ ಮಾಡುವ ಆಯ್ಕೆ ನೀಡುತ್ತಿದೆ. ಅಂದರೆ ವಾಟ್ಸ್​ಆ್ಯಪ್​ನಲ್ಲಿ ಬಳಕೆದಾರರು ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಸಮಯಕ್ಕೆ ಮಾಡಬಹುದಾಗಿದೆ. ಈ ಮೂಲಕ ಪ್ರಮುಖ ಸಂಭಾಷಣೆಯನ್ನು ಯಾರೂ ಸಹ ಮಿಸ್‌ ಮಾಡಿಕೊಳ್ಳುವ ಸಂಭವ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ ಯಾರನ್ನಾದರೂ ಕೆಲಸಕ್ಕೆ ನೇಮಿಸಿಕೊಳ್ಳಲು ಸಂದರ್ಶನ ಮಾಡಬೇಕು ಎಂದಿದ್ದರೆ, ಈ ವೇಳೆ ಸಂದರ್ಶಕರು ಸಂದರ್ಶನಕ್ಕೆ ಹಾಜರಾಗುವ ವ್ಯಕ್ತಿ ಜೊತೆ ಯಾವ ಸಮಯದಲ್ಲಿ ಮಾತನಾಡಬೇಕು ಎಂಬುದನ್ನು ಶೆಡ್ಯುಲ್‌ ಮಾಡಬಹುದು.

Tech Tips: ಮೊಬೈಲ್​ನಲ್ಲಿ ನಂಬರ್ ಸೇವ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ?: ಇಲ್ಲಿದೆ ಟ್ರಿಕ್

ಇದನ್ನೂ ಓದಿ
Image
Valentine’s Day: ವಾಲೆಂಟೈನ್ಸ್​ ಡೇಗೆ ಐಫೋನ್ ಗಿಫ್ಟ್ ಕೊಡಿ: ಫ್ಲಿಪ್​ಕಾರ್ಟ್​ನಿಂದ ಹಿಂದೆಂದೂ ನೀಡದ ಆಫರ್
Image
Lava Blaze 5G: ವಿದೇಶಿ ಮೊಬೈಲ್ ಕಂಪನಿಗಳ ಹುಟ್ಟಡಗಿಸಿದ ಭಾರತದ ಲಾವಾ ಬ್ಲೇಜ್ ಹೊಸ ಸ್ಟೋರೇಜ್​ನಲ್ಲಿ ಬಿಡುಗಡೆ
Image
Realme 10 Pro Coca-Cola: ಭಾರತದಲ್ಲಿ ಕೋಕಾ-ಕೋಲಾ ಸಂಸ್ಥೆಯ ಚೊಚ್ಚಲ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Image
Realme GT Neo 5: 240W ಫಾಸ್ಟ್ ಚಾರ್ಜಿಂಗ್‌: ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ದಂಗಾಗಿಸಿದ ರಿಯಲ್ GT ನಿಯೋ 5

ಮೊದಲಿಗೆ ಈ ಶೆಡ್ಯುಲ್‌ ಕರೆ ಸೌಲಭ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದ್ದು, ನಂತರದಲ್ಲಿ ಐಒಎಸ್ ಬಳಕೆದಾರರಿಗೂ ಸಿಗಲಿದೆ. ಕರೆಗಳನ್ನು ಶೆಡ್ಯುಲ್‌ ಮಾಡುವ ಸಂದರ್ಭ ಬಳಕೆದಾರರಿಗೆ ಶೀರ್ಷಿಕೆ, ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ. ಹಾಗೆಯೇ ಗ್ರೂಪ್‌ ಕರೆ ವಿಚಾರದಲ್ಲೂ ನಿಗದಿತ ಕರೆಯನ್ನು ಯಾವಾಗ ಮಾಡಲಾಗುತ್ತದೆ ಎಂಬುದರ ಕುರಿತು ಗುಂಪಿನಲ್ಲಿರುವ ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ವಾಟ್ಸ್​ಆ್ಯಪ್​ನ 2.23.4.4 ಅಪ್ಡೇಟ್​ನಲ್ಲಿ ಈ ಆಯ್ಕೆ ಸಿಗಲಿದೆ ಎಂದು ಹೇಳಲಾಗಿದೆ.

ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್:

ಸದ್ಯದಲ್ಲೇ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದು. ವಾಯ್ಸ್ ನೋಟ್ ಅನ್ನು ಸ್ಟೇಟಸ್​ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಈಗಾಗಲೇ ಇದು ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಲಭ್ಯವಾಗಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್​ಗಳ ಕಾಲ ಇದು ಇರಲಿದೆ.

ಒರಿಜಿನಲ್ ಕ್ವಾಲಿಟಿಯಲ್ಲಿ ಫೋಟೋ ಕಳುಹಿಸಿ:

ವಾಟ್ಸ್​ಆ್ಯಪ್​ನಲ್ಲಿ ಈಗ ಒಂದು ಫೋಟೋ ಕಳುಹಿಸಿದರೆ ಅದು ರಿಸೀವ್ ಮಾಡಿಕೊಂಡ ಬಳಕೆದಾರನಿಗೆ ಒರಿಜಿನಲ್ ಕ್ವಾಲಿಟಿಯಲ್ಲಿ ಸಿಗುವುದಿಲ್ಲ. ತನ್ನ ನೈಜ್ಯ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಇದಕ್ಕಾಗಿ ವಾಟ್ಸ್​ಆ್ಯಪ್​ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್‌ ಮಾಡಲು ಅನುಮತಿಸುವ ಹೊಸ ಫೀಚರ್ಸ್‌ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ವಾಟ್ಸ್​ಆ್ಯಪ್​ಪರಿಚಯಿಸಲಿರುವ ಹೊಸ ಫೀಚರ್ಸ್‌ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್‌ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ