Realme 10 Pro Coca-Cola: ಭಾರತದಲ್ಲಿ ಕೋಕಾ-ಕೋಲಾ ಸಂಸ್ಥೆಯ ಚೊಚ್ಚಲ ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?
ಪಾನೀಯ ಸಂಸ್ಥೆ ಕೋಕಾ-ಕೋಲಾ ತನ್ನ ಚೊಚ್ಚಲ ಮೊಬೈಲ್ ಅನ್ನು ಪರಿಚಯಿಸಿದೆ. ರಿಯಲ್ ಮಿ ಜೊತೆ ಕೈಜೋಡಿಸಿರುವ ಕೋಲಾ ಇಂದು ರಿಯಲ್ ಮಿ 10 ಪ್ರೊ 5ಜಿ ಕೋಕಾ-ಕೋಲಾ ಎಡಿಷನ್ (Realme 10 Pro Coca-Cola Edition) ಅನ್ನು ಬಿಡುಗಡೆ ಮಾಡಿದೆ.
ಪ್ರಪಂಚದಲ್ಲಿ ಇಂದು ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಶಾಲವಾಗಿ ಬೆಳೆದು ನಿಂತಿದೆ. ವಾರಕ್ಕೆ ಕನಿಷ್ಠ ಎಂದರೂ ಮೂರರಿಂದ- ನಾಲ್ಕು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತದೆ. ಇದರ ಜೊತೆಗೆ ಹೊಸ ಹೊಸ ಕಂಪನಿಗಳು ಕೂಡ ಹುಟ್ಟಿಗೊಳ್ಳುತ್ತಿದೆ. ಕಳೆದ ವರ್ಷ ನಥಿಂಗ್ ಎಂಬ ಕಂಪನಿ ತನ್ನ ಮೊಟ್ಟ ಮೊದಲ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್‌ಫೋನ್ ಪರಿಚಯಿಸಿ ಮೋಡಿ ಮಾಡಿತ್ತು. ಇದೀಗ ಪ್ರಸಿದ್ಧ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ತನ್ನ ಚೊಚ್ಚಲ ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ರಿಯಲ್ ಮಿ ಜೊತೆ ಕೈಜೋಡಿಸಿರುವ ಕೋಲಾ ಇಂದು ರಿಯಲ್ ಮಿ 10 ಪ್ರೊ 5ಜಿ ಕೋಕಾ-ಕೋಲಾ ಎಡಿಷನ್ (Realme 10 Pro Coca-Cola Edition) ಅನ್ನು ಬಿಡುಗಡೆ ಮಾಡಿದೆ. ಈ ಫೋನಿನ ಬೆಲೆ, ಫೀಚರ್ಸ್, ಲಭ್ಯತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಲೆ ಎಷ್ಟು?:
ರಿಯಲ್ ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್ ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 8GB RAM + 128GB ಸ್ಟೋರೇಜ್ ಸಾಮರ್ಥ್ಯಕ್ಕೆ 20,999 ರೂ. ನಿಗದಿ ಮಾಡಲಾಗಿದೆ. ಕಪ್ಪು ಬಣ್ಣದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್ಫೋನ್ನ ಹಿಂಭಾಗ ಕೋಕಾ-ಕೋಲಾದ ಲೋಗೋ ಅಳವಡಿಸಲಾಗಿದೆ. ಈ ಫೋನ್ ಇದೇ ಫೆಬ್ರವರಿ 14 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಸಿಗಲಿದೆ.
And here you have it, the world’s first ever Coca-Cola smartphone. Presenting the #realme10Pro5GCocaColaEdition at 20,999/- The first sale goes live on 14th Feb, 12 PM. But wait, there’s a flash sale too! #CheersForReal
Join the livestream – https://t.co/aedgi4lUqD pic.twitter.com/k5LqUOxjFd
— realme (@realmeIndia) February 10, 2023
OnePlus 11 5G: 2023ರ ಮೊದಲ ಸ್ಮಾರ್ಟ್‌ಫೋನ್ ಪರಿಚಯಿಸಿದ ಒನ್ಪ್ಲಸ್: ಇದರ ಬೆಲೆ 61,999 ರೂ.: ಏನಿದೆ ಫೀಚರ್ಸ್?
ಫೀಚರ್ಸ್ ಏನು?:
ರಿಯಲ್ ಮಿ 10 ಪ್ರೊ ಕೋಕಾ-ಕೋಲಾ ಎಡಿಷನ್ ಸ್ಮಾರ್ಟ್‌ಫೋನ್ 1080*2400 ಪಿಕ್ಸೆಲ್ ರೆಸಲೋಷನ್ ಸಾಮರ್ಥ್ಯದ 6.72 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ನೀಡಲಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಕೋಕಾ-ಕೋಲಾ ಥೀಮ್ ಹೊಂದಿರುವ ಆಂಡ್ರಾಯ್ಡ್ 13 OS ಮೂಲಕ ರನ್ ಆಗುತ್ತದೆ.
ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, 108 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ HM6 ಪ್ರೈಮರಿ ಸೆನ್ಸಾರ್ನ ಮುಖ್ಯ ಕ್ಯಾಮೆರಾ ಅಳವಡಿಸಲಾಗಿದೆ. 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಸೆನ್ಸರ್ ಆಯ್ಕೆ ಇದೆ. ಮುಂಭಾಗ ಸೆಲ್ಫೀಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿರುವ ಕ್ಯಾಮೆರಾ ಅದ್ಭುತವಾಗಿದ್ದು ಉತ್ತಮ ಕ್ವಾಲಿಟಿಯಲ್ಲಿ ಫೋಟೋಗಳನ್ನು ಸೆರೆ ಹಿಡಿಯುತ್ತದೆ.
ರಿಯಲ್ ಮಿ 10 ಪ್ರೊ ಕೋಕಾ-ಕೋಲಾ ಎಡಿಷನ್ ಸ್ಮಾರ್ಟ್ಫೋನಿನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ನೀಡಲಾಗಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G ಬೆಂಬಲ ಪಡೆದುಕೊಂಡಿದೆ. ಉಳಿದಂತೆ 4G, Wi-Fi 6, ಬ್ಲೂಟೂತ್ 5.2, GPS ಮತ್ತು USB ಟೈಪ್-ಸಿ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Fri, 10 February 23