Flipkart Valentines Day Sale: ಫ್ಲಿಪ್​ಕಾರ್ಟ್​ನಲ್ಲಿ ವಾಲೆಂಟೈನ್ಸ್​ ಡೇ ಸೇಲ್: ಈ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

Flip Heart Days Sale: ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ 'ಫ್ಲಿಪ್ ಹಾರ್ಟ್ ಡೇಸ್' (Flip Heart Days) ಎಂಬ ವಿಶೇಷ ಮೇಳವನ್ನ ಶುರು ಮಾಡಿದೆ. ಈಗಾಗಲೇ ಲೈವ್ ಆಗಿರುವ ಈ ಸೇಲ್ ಫೆಬ್ರವರಿ 12 ರ ವರೆಗೆ ನಡೆಯಲಿದೆ.

Flipkart Valentines Day Sale: ಫ್ಲಿಪ್​ಕಾರ್ಟ್​ನಲ್ಲಿ ವಾಲೆಂಟೈನ್ಸ್​ ಡೇ ಸೇಲ್: ಈ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್
flip heart days sale
Follow us
Vinay Bhat
|

Updated on: Feb 09, 2023 | 2:54 PM

ವಾಲೆಂಟೈನ್ಸ್​ ಡೇ (Valentines Day) ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಂದರ್ಭ ನೀವು ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ವಿಶೇಷ ಉಡುಗೊರೆಯನ್ನೂ ನೀಡಿದರೆ ನಿಮ್ಮನ್ನು ಪ್ರೀತಿಸುವವರು ಮತ್ತಷ್ಟು ಖುಷಿ ಪಡಬಹುದು. ಇದಕ್ಕಾಗಿಯೇ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ‘ಫ್ಲಿಪ್ ಹಾರ್ಟ್ ಡೇಸ್’ (Flip Heart Days) ಎಂಬ ವಿಶೇಷ ಮೇಳವನ್ನ ಶುರು ಮಾಡಿದೆ. ಈಗಾಗಲೇ ಲೈವ್ ಆಗಿರುವ ಈ ಸೇಲ್ ಫೆಬ್ರವರಿ 12 ರ ವರೆಗೆ ನಡೆಯಲಿದೆ. ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಒನ್​ಪ್ಲಸ್, ಶವೋಮಿ, ರಿಯಲ್ ಮಿ, ಸ್ಯಾಮ್​ಸಂಗ್ (Samsung) ಕಂಪನಿಯ ಫೋನುಗಳು ಮಾತ್ರವಲ್ಲದೆ ದುಬಾರಿ ಬೆಲೆಯ ಐಫೋನ್​ಗಳನ್ನು ಕೂಡ ಕಡಿಮೆ ದರಕ್ಕೆ ಖರೀದಿಸಬಹುದು. ಹಾಗಾದರೆ ಫ್ಲಿಪ್ ಹಾರ್ಟ್ ಡೇಸ್ ಸೇಲ್​ನಲ್ಲಿ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿರುವ ಪ್ರಸಿದ್ಧ ಸ್ಮಾರ್ಟ್​ಫೋನ್​ಗಳು ಯಾವುವು ಎಂಬುದನ್ನು ನೋಡೋಣ.

ಆ್ಯಪಲ್ ಐಫೋನ್ 14: ಕಳೆದ ವರ್ಷ ಬಿಡುಗಡೆ ಆಗಿ ಭರ್ಜರಿ ಸೇಲ್ ಕಂಡ ಆ್ಯಪಲ್ ಕಂಪನಿಯ ಐಫೋನ್ 14 ಅನ್ನು ನೀವು ಕೇವಲ 66,999 ರೂ. ಗೆ ಖರೀದಿಸಬಹುದು. ಇದರ ಮೇಲೆ ಶೇ. 16 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಜೊತೆಗೆ 20,000 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ.

ಮೋಟೋರೊಲಾ G52: ಶೇ. 35 ರಷ್ಟು ರಿಯಾಯಿತಿ ಪಡೆದುಕೊಂಡಿರುವ ಮೋಟೋ G52 ಸ್ಮಾರ್ಟ್​ಫೋನನ್ನು ನೀವು ಈಗ 12,999 ರೂ. ಗೆ ಖರೀದಿಸಬಹುದು. ಇದರಲ್ಲಿ 50 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ನೀಡಲಾಗಿದೆ.

ಇದನ್ನೂ ಓದಿ
Image
Moto E13: ಈ ಸ್ಮಾರ್ಟ್​ಫೋನ್ ಬೆಲೆ ಕೇವಲ 6,999 ರೂ.: ಭಾರತದಲ್ಲಿ ಹೊಸ ಮೋಟೋ E13 ಫೋನ್ ಬಿಡುಗಡೆ
Image
OnePlus 11 5G: 2023ರ ಮೊದಲ ಸ್ಮಾರ್ಟ್​ಫೋನ್ ಪರಿಚಯಿಸಿದ ಒನ್​ಪ್ಲಸ್: ಇದರ ಬೆಲೆ 61,999 ರೂ.: ಏನಿದೆ ಫೀಚರ್ಸ್?
Image
Tech Tips: ವಾಟ್ಸ್​ಆ್ಯಪ್ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Image
Server Down: ಏಕಕಾಲದಲ್ಲಿ ಫೇಸ್​ಬುಕ್, ಯೂಟ್ಯೂಬ್, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಡೌನ್

WhatsApp: ವಾಟ್ಸ್​ಆ್ಯಪ್​ನ ಈ ಹೊಸ ಫೀಚರ್​ಗಾಗಿ ಕಾದು ಕುಳಿತ ಬಳಕೆದಾರರು: ಬರುತ್ತಿದೆ ಬಹುಬೇಡಿಕೆಯ ಆಯ್ಕೆ

ಐಫೋನ್ 13: ಆ್ಯಪಲ್ ಕಂಪನಿಯ ಐಫೋನ್ 13 ಖರೀದಿಗೆ ಕೂಡ ಇದೇ ಉತ್ತಮ ಸಮಯ ಎನ್ನಬಹುದು. ಯಾಕೆಂದರೆ ಫ್ಲಿಪ್ ಹಾರ್ಟ್ ಡೇಸ್ ಸೇಲ್​ನಲ್ಲಿ ಈ ಫೋನ್ ಮೇಲೆ ಶೇ. 11 ರಷ್ಟು ರಿಯಾಯಿತಿ ನೀಡಲಾಗಿದ್ದು 62,049 ರೂ. ಗೆ ಸೇಲ್ ಕಾಣುತ್ತಿದೆ. 23,000 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಇದರ ಜೊತೆಗೆ ಫ್ಲಿಪ್​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಡಿಸ್ಕೌಂಟ್ ಸಿಗುತ್ತದೆ. ಹೆಚ್​ಡಿಎಫ್​ಸಿ ಕಾರ್ಡ್ ದಾರರಿಗೆ 2000 ರೂ. ಗಳ ರಿಯಾಯಿತಿ ಇದೆ.

ರಿಯಲ್ ಮಿ GT ನಿಯೋ 3T: 34,999 ರೂ. ಮೂಲಬೆಲೆ ಹೊಂದಿರುವ ಈ ಸ್ಮಾರ್ಟ್​ಫೋನ್ ಈಗ ಕೇವಲ 24,999 ರೂ. ಗೆ ಸೇಲ್ ಆಗುತ್ತಿದೆ. ರಿಯಲ್ ಮಿ GT ನಿಯೋ 3T ಫೋನ್ ಮೇಲೆ ಶೇ. 28 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ 64 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ನೀಡಲಾಗಿದೆ.

ಗ್ಯಾಲಕ್ಸಿ A23: ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ A23 ಸ್ಮಾರ್ಟ್​ಫೋನನ್ನು ಈಗ 19,499 ರೂ. ಗೆ ಖರೀದಿಸಬಹುದು. ಇದು ಶೇ. 18 ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. 18.500 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ. ಈ ಫೋನ್ 50 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ರಿಯರ್ ಕ್ಯಾಮೆರಾ ಹೊಂದಿದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ