Tech Tips: ಮೊಬೈಲ್​ನಲ್ಲಿ ನಂಬರ್ ಸೇವ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ?: ಇಲ್ಲಿದೆ ಟ್ರಿಕ್

WhatsApp tips and tricks: ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡದೇ ಆ ಸಂಖ್ಯೆಗೆ ಸಂದೇಶವನ್ನು ಕಳುಹಿಸಲು ವಾಟ್ಸ್​ಆ್ಯಪ್​ನಲ್ಲಿ ಇತರೆ ಆಯ್ಕೆಗಳಿಲ್ಲ. ಆದರೆ, ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆಯೂ ಯಾರೊಂದಿಗೆ ಬೇಕಾದರೂ ಚಾಟ್ ಮಾಡಬಹುದು.

Tech Tips: ಮೊಬೈಲ್​ನಲ್ಲಿ ನಂಬರ್ ಸೇವ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ?: ಇಲ್ಲಿದೆ ಟ್ರಿಕ್
WhatsApp Tricks
Follow us
|

Updated on:Feb 10, 2023 | 11:37 AM

ವಾಟ್ಸ್​ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಇಂದು ಉಪಯೋಗಿಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಯೂಸರ್ಸ್​ಗೆ ಕಾಲಕ್ಕೆ ತಕ್ಕಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸ್​ಆ್ಯಪ್​ (WhatsApp) ಮುಂದಿನ ದಿನಗಳಲ್ಲಿ ಸಾಲು ಸಾಲು ಹೊಸ ಫೀಚರ್​ಗಳನ್ನು ತರಲು ಕಾದುಕುಳಿತಿದೆ. ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವಂತೆ ವಾಟ್ಸ್​ಆ್ಯಪ್​​ನಲ್ಲಿ ಯಾರಿಗಾದರೂ ಮೆಸೇಜ್ (WhatsApp Message) ಕಳುಹಿಸ ಬೇಕು ಎಂದಾದರೆ ಅವರ ನಂಬರ್ ಸೇವ್ ಮಾಡುವುದು ಅವಶ್ಯಕ. ಯಾಕಂದ್ರೆ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡದೇ ಆ ಸಂಖ್ಯೆಗೆ ಸಂದೇಶವನ್ನು ಕಳುಹಿಸಲು ವಾಟ್ಸ್​ಆ್ಯಪ್​ನಲ್ಲಿ ಇತರೆ ಆಯ್ಕೆಗಳಿಲ್ಲ. ಆದರೆ, ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆಯೂ, ಬಳಕೆದಾರರು ಸಂಪರ್ಕವನ್ನು ಉಳಿಸದೆ ಯಾರೊಂದಿಗೆ ಬೇಕಾದರೂ ಚಾಟ್ (Chat) ಮಾಡಬಹುದು.

ಹೌದು, ವಾಸ್ತವವಾಗಿ ಯಾರಿಗಾದರೂ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕಿದ್ದರೆ, ಮೊದಲನೆಯ ಮಾನದಂಡ ಎಂದರೆ ಅವರು ಕೂಡ ವಾಟ್ಸ್ಆ್ಯಪ್ ಖಾತೆ ಹೊಂದಿರಬೇಕು. ಮೂಲತಃ ಅವರ ಫೋನ್ ಸಂಖ್ಯೆಯನ್ನು ನಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಂಡರಬೇಕು. ಇದು ಮೆಸೇಜ್ ಕಳಿಸುವ ತುಂಬಾ ಸುಲಭ ಮತ್ತು ಸರಳ ವಿಧಾನ. ಆದರೆ ಈ ಸರಳ ವಿಧಾನ ಕಠಿಣವಾಗುವುದು ಮತ್ತು ಕಾಂಟ್ಯಾಕ್ಟ್​ನಲ್ಲಿ ಅನವಶ್ಯಕ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಯಾವಾಗವೆಂದರೆ, ಯಾರಿಗೂ ಅಪರಿಚಿತ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪರಿಚಿತವಾಗಿ ಯಾವುದೋ ಪ್ರಮುಖ ಮೆಸೇಜ್ ಒಂದನ್ನು ಕಳುಹಿಸಬೇಕು ಎಂದಾಗ. ಆಗ ಏನು ಮಾಡಬೇಕು.

Tech Tips: ವಾಟ್ಸ್​ಆ್ಯಪ್ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

ಇದನ್ನೂ ಓದಿ
Image
Oppo Reno 8T 5G: ಇಂದಿನಿಂದ 108MP ಕ್ಯಾಮೆರಾದ ಒಪ್ಪೋ ರೆನೋ 8T 5G ಸ್ಮಾರ್ಟ್​ಫೋನ್ ಮಾರಾಟ ಆರಂಭ: ಬೆಲೆ ಎಷ್ಟು?
Image
Flipkart Valentines Day Sale: ಫ್ಲಿಪ್​ಕಾರ್ಟ್​ನಲ್ಲಿ ವಾಲೆಂಟೈನ್ಸ್​ ಡೇ ಸೇಲ್: ಈ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್
Image
Moto E13: ಈ ಸ್ಮಾರ್ಟ್​ಫೋನ್ ಬೆಲೆ ಕೇವಲ 6,999 ರೂ.: ಭಾರತದಲ್ಲಿ ಹೊಸ ಮೋಟೋ E13 ಫೋನ್ ಬಿಡುಗಡೆ
Image
OnePlus 11 5G: 2023ರ ಮೊದಲ ಸ್ಮಾರ್ಟ್​ಫೋನ್ ಪರಿಚಯಿಸಿದ ಒನ್​ಪ್ಲಸ್: ಇದರ ಬೆಲೆ 61,999 ರೂ.: ಏನಿದೆ ಫೀಚರ್ಸ್?

ವ್ಯಕ್ತಿಯೊಬ್ಬರ ನಂಬರ್ ನಮಗೆ ಮುಂದೆಂದೂ ಅಗತ್ಯ ಬೀಳುವುದಿಲ್ಲ ಅಥವಾ ಅನಗತ್ಯ ಎಂದಾದರೆ, ಆ ಸಂಖ್ಯೆಯನ್ನು ಫೋನ್‌ನಲ್ಲಿ ಸೇವ್ ಮಾಡದೆಯೇ ಅವರಿಗೆ ಸಂದೇಶ ಕಳುಹಿಸಬಹುದು. ಇದು ತೀರಾ ಸುಲಭವಿದೆ.

ಇದಕ್ಕಾಗಿ ಮೊದಲು ನೀವು ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ (ಡೇಟಾ) ಆನ್ ಮಾಡಿ. ಅದರಲ್ಲಿರುವ ಬ್ರೌಸರ್ ಆ್ಯಪ್‌ನ (ಉದಾ. ಕ್ರೋಮ್) ಅಡ್ರೆಸ್ ಬಾರ್‌ನಲ್ಲಿ https://wa.me/91 ಅಂತ ಬರೆದು, ಬಳಿಕ ಆ ವ್ಯಕ್ತಿಯ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು (ಸ್ಪೇಸ್ ಇಲ್ಲದೆ) ದಾಖಲಿಸಬೇಕು.

ಇದಾಗಿ ಎಂಟರ್ ಕೊಟ್ಟ ನಂತರ ನೇರವಾಗಿ ಫೋನ್‌ನಲ್ಲಿರುವ ವಾಟ್ಸ್ಆ್ಯಪ್‌ಗೆ ಸಂಪರ್ಕಗೊಳ್ಳುತ್ತದೆ ಮತ್ತು ಈ ನಂಬರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕೇ ಅಂತ ಕೇಳುತ್ತದೆ. ‘ಮೆಸೇಜ್’ ಎಂಬುದನ್ನು ಕ್ಲಿಕ್ ಮಾಡಿದರೆ ವಾಟ್ಸ್ಆ್ಯಪ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಸಂದೇಶವನ್ನು ಅಲ್ಲೇ ಟೈಪ್ ಮಾಡಿ ಕಳುಹಿಸಬಹುದು ಇಲ್ಲವೇ ಯಾವುದೇ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಶೇರ್ ಮಾಡಬಹುದು.

ನಂಬರ್ ಸೇವ್ ಮಾಡದೆ ವಾಟ್ಸ್​ಆ್ಯಪ್​​ ಗ್ರೂಪ್‌ಗೆ ಇನ್​ವೈಟ್ ಮಾಡುವುದುದು ಹೇಗೆ?

  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್​ಆ್ಯಪ್​​ ತೆರೆಯಿರಿ.
  • ನೀವು ಲಿಂಕ್ ರಚಿಸಲು ಬಯಸುವ ಗುಂಪಿನ ಮೇಲೆ ಟ್ಯಾಪ್ ಮಾಡಿ.
  • ಪುಟದ ಮೇಲ್ಭಾಗದಲ್ಲಿರುವ ಗುಂಪಿನ ಹೆಸರಿನ ಮೇಲೆ ಟ್ಯಾಪ್ ಮಾಡಿ.
  • ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಲಿಂಕ್ ಮೂಲಕ ಗುಂಪಿಗೆ ಆಹ್ವಾನಿಸಿ” ಆಯ್ಕೆಯನ್ನು ಟ್ಯಾಪ್ ಮಾಡಿ.
  • ನಿಮ್ಮ ವಾಟ್ಸ್​ಆ್ಯಪ್​​ ಗುಂಪಿಗೆ ಲಿಂಕ್ ಅನ್ನು ಹಂಚಿಕೊಳ್ಳಲು ನೀವು ಈಗ ವಿವಿಧ ಆಯ್ಕೆಗಳನ್ನು ಗುರುತಿಸಲು. ಸಾಧ್ಯವಾಗುತ್ತದೆ. ನಿಮ್ಮ ವಾಟ್ಸ್​ಆ್ಯಪ್​​ ಗ್ರೂಪ್‌ಗಾಗಿ ನೀವು QR ಕೋಡ್ ಅನ್ನು ಸಹ ರಚಿಸಬಹುದು.
  • ಗುಂಪಿಗೆ ಸೇರಲು ಬಯಸುವ ಯಾರಾದರೂ, ಲಿಂಕ್ ಅನ್ನು ಟ್ಯಾಪ್ ಮಾಡುವ ಮೂಲಕ ಹಾಗೆ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Fri, 10 February 23

ತಾಜಾ ಸುದ್ದಿ
ಘಟಪ್ರಭಾ ‌ನದಿಗೆ ನೀರು ಬಿಡುಗಡೆ; ಸುರಕ್ಷಿತ ಸ್ಥಳಕ್ಕೆ ತೆರಳಲು ಡಂಗುರ
ಘಟಪ್ರಭಾ ‌ನದಿಗೆ ನೀರು ಬಿಡುಗಡೆ; ಸುರಕ್ಷಿತ ಸ್ಥಳಕ್ಕೆ ತೆರಳಲು ಡಂಗುರ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ