Realme GT Neo 5: 240W ಫಾಸ್ಟ್ ಚಾರ್ಜಿಂಗ್: ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ದಂಗಾಗಿಸಿದ ರಿಯಲ್ GT ನಿಯೋ 5
240W Fast Charging Phone: ತನ್ನ ಒಂದೊಂದು ಸ್ಮಾರ್ಟ್ಫೋನ್ನಲ್ಲಿ ಸದಾ ಹೊಸತನವನ್ನು ಬಿಡುಗಡೆ ಮಾಡುವ ರಿಯಲ್ ಮಿ ಇದೀಗ ವಿಶ್ವದ ಮೊದಲ 240W ವೇಗದ ಚಾರ್ಜಿಂಗ್ ಬೆಂಬಲಿಸುವ ರಿಯಲ್ ಮಿ ಜಿಟಿ ನಿಯೋ 5 ಎಂಬ ಹೊಸ ಫೋನ್ ಅನಾವರಣ ಮಾಡಿದೆ.
ಟೆಕ್ ಮಾರ್ಕೆಟ್ನಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ಪ್ರಸಿದ್ಧ ರಿಯಲ್ ಮಿ (Realme GT) ಕಂಪನಿ ಈಗ ಹಿಂದಿನ ರೀತಿಯಿಲ್ಲ. ಸಾಕಷ್ಟು ಬೆಳವಣಿಗೆ ಕಂಡಿದೆ. ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಸಮಯ ತೆಗೆದುಕೊಂಡು ಆಕರ್ಷಕವಾದ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ತನ್ನ ಒಂದೊಂದು ಸ್ಮಾರ್ಟ್ಫೋನ್ನಲ್ಲಿ ಸದಾ ಹೊಸತನವನ್ನು ಬಿಡುಗಡೆ ಮಾಡುವ ರಿಯಲ್ ಮಿ ಇದೀಗ ವಿಶ್ವದ ಮೊದಲ 240W ವೇಗದ ಚಾರ್ಜಿಂಗ್ ಬೆಂಬಲಿಸುವ ರಿಯಲ್ ಮಿ ಜಿಟಿ ನಿಯೋ 5 (Realme GT Neo 5) ಎಂಬ ಹೊಸ ಫೋನ್ ಅನಾವರಣ ಮಾಡಿದೆ. ಇದರ ವೇಗದ ಚಾರ್ಜಿಂಗ್ಗೆ ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಕೇವಲ ಫಾಸ್ಟ್ ಚಾರ್ಜರ್ ಮಾತ್ರವಲ್ಲದೆ ಈ ಸ್ಮಾರ್ಟ್ಫೋನ್ನಲ್ಲಿ (Smartphone) ಬ್ಯಾಟರಿ, ಕ್ಯಾಮೆರಾ, ಪ್ರೊಸೆಸರ್ ಕೂಡ ಆಕರ್ಷಕವಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆಗಳಿವೆ? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ರಿಯಲ್ ಮಿ GT ನಿಯೋ 5 ಸ್ಮಾರ್ಟ್‌ಫೋನ್ ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದೆ. ಇದು 150W ಮತ್ತು 240W ಹೀಗೆ ಎರಡು ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 150W ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್‌ಫೋನ್ 8GB + 256GB ಆಯ್ಕೆಗೆ CNY 2,499, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 30,500ರೂ. ಎನ್ನಬಹುದು. ಅಂತೆಯೆ 240W ವೇಗದ ಚಾರ್ಜಿಂಗ್ ಆಯ್ಕೆಯ ಸ್ಮಾರ್ಟ್‌ಫೋನ್ 16GB + 256GB ರೂಪಾಂತರದ ಆಯ್ಕೆಗೆ CNY 3,199, ಭಾರತದಲ್ಲಿ ಅಂದಾಜು 39,000 ರೂ. ಇರಬಹುದು.
ಏನು ಫೀಚರ್ಸ್?:
ರಿಯಲ್ ಮಿ GT ನಿಯೋ 5 ಸ್ಮಾರ್ಟ್ಫೋನ್ನಲ್ಲಿ 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿರುವ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ನೀಡಲಾಗಿದೆ. ಈ ಡಿಸ್‌ಪ್ಲೇ 1.5K ರೆಸಲ್ಯೂಶನ್, 1400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1SoC ಪ್ರೊಸೆಸರ್ ವೇಗವನ್ನು ಹೊಂದಿದ್ದು ಹೊಸ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
OnePlus 11 5G: 2023ರ ಮೊದಲ ಸ್ಮಾರ್ಟ್‌ಫೋನ್ ಪರಿಚಯಿಸಿದ ಒನ್ಪ್ಲಸ್: ಇದರ ಬೆಲೆ 61,999 ರೂ.: ಏನಿದೆ ಫೀಚರ್ಸ್?
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್ ಅನ್ನು ಒಳಗೊಂಡಿದೆ. ಇದು ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ ಮುಂಭಾಗ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈಗಾಗಲೇ ತಿಳಿಸಿರುವಂತೆ ರಿಯಲ್ ಮಿ GT ನಿಯೋ 5 ಸ್ಮಾರ್ಟ್‌ಫೋನ್ ಎರಡು ವಿಭಿನ್ನ ಆಯ್ಕೆಯ ಬ್ಯಾಟರಿ ಬ್ಯಾಕ್‌ಅಪ್‌ನಲ್ಲಿ ಬಿಡುಗಡೆ ಆಗಿದೆ. ಇದರಲ್ಲಿ ವಿಶ್ವದ ಮೊದಲ 240W ವೇಗದ ಚಾರ್ಜಿಂಗ್ ಟೆಕ್ನಾಲಜಿ ಬೆಂಬಲಿಸುವ ಸ್ಮಾರ್ಟ್‌ಫೋನ್ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನೊಂದು 150W ವೇಗದ ಚಾರ್ಜಿಂಗ್ಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Fri, 10 February 23