Google India: ಭಾರತದ 453 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಗೂಗಲ್

Google Layoffs: ಗೂಗಲ್ ಇಂಡಿಯಾದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ (Sanjay Gupta) ಉದ್ಯೋಗಿಗಳಿಗೆ ಮೇಲ್ ಕಳುಹಿಸಿದ್ದಾರೆ. ಕಳೆದ ತಿಂಗಳು ಗೂಗಲ್‌ನ ಮೂಲ ಕಂಪನಿ Alphabet Inc 12,000 ಉದ್ಯೋಗಿಗಳನ್ನು ಜಾಗತಿಕವಾಗಿ ವಜಾಗೊಳಿಸಿತ್ತು.

Google India: ಭಾರತದ 453 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಗೂಗಲ್
ಗೂಗಲ್ ಕಚೇರಿ
Follow us
TV9 Web
| Updated By: Vinay Bhat

Updated on:Feb 17, 2023 | 9:55 AM

ಗೂಗಲ್ ಇಂಡಿಯಾ (Google India) ಗುರುವಾರ ತಡರಾತ್ರಿ ವಿವಿಧ ಇಲಾಖೆಗಳಲ್ಲಿನ 453 ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಉದ್ಯೋಗಿಗಳಿಗೆ ಮೇಲ್ ಕಳಹಿಸಿ ಸೂಚಿಸಲಾಗಿದೆಯಂತೆ. ಬ್ಯುಸಿನೆಸ್‌ಲೈನ್‌ನ ವರದಿಯ ಪ್ರಕಾರ, ಗೂಗಲ್ ಇಂಡಿಯಾದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ (Sanjay Gupta) ಉದ್ಯೋಗಿಗಳಿಗೆ ಮೇಲ್ ಕಳುಹಿಸಿದ್ದಾರೆ. ಕಳೆದ ತಿಂಗಳು ಗೂಗಲ್‌ನ ಮೂಲ ಕಂಪನಿ Alphabet Inc 12,000 ಉದ್ಯೋಗಿಗಳನ್ನು ಜಾಗತಿಕವಾಗಿ ವಜಾಗೊಳಿಸಿತ್ತು. ಇದರಲ್ಲಿ ವಾರ್ಷಿಕ 8 ರಿಂದ 10 ಕೋಟಿ ರೂ. ವೇತನ ಪಡೆಯುತ್ತಿದ್ದವರೂ ಸೇರಿದ್ದಾರೆ.

ಗೂಗಲ್ ಕಂಪನಿಯು 2023 ರಲ್ಲಿ ಉದ್ಯೋಗ ಕಡಿತ ಮಾಡಲಿದೆ ಎಂಬ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಊಹಾಪೋಹಗಳು ಹರಿದಾಡಿದ್ದವು. ಬಳಿಕ 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಇದೀಗ ಭಾರತದಲ್ಲಿ 453 ಉದ್ಯೋಗಿಗಳನ್ನು ವಜಾ ಮಾಡಿದೆ. ಹಲವು ವರ್ಷಗಳ ಉದ್ಯಮ ಬೆಳವಣಿಗೆ, ನೇಮಕಾತಿಗಳ ಬಳಿಕ ಮೊದಲ ಬಾರಿಗೆ ಗೂಗಲ್ ಇಂಥ ಕ್ರಮ ಕೈಗೊಂಡಿದೆ. ಈ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರಂತೆ.

ಸುಂದರ್ ಪಿಚೈ ಅವರು ಗೂಗಲ್​ನ ಕೆಲವೊಂದು ಉನ್ನತ ಹುದ್ದೆಗಳನ್ನೂ ಕಡಿತಗೊಳಿಸಿದ್ದು, ವಾರ್ಷಿಕ 5 ಲಕ್ಷ ಡಾಲರ್​ನಿಂದ 10 ಲಕ್ಷ ಡಾಲರ್ ವರೆಗೆ ಪಡೆಯುತ್ತಿದ್ದ ವ್ಯವಸ್ಥಾಪಕ ಸ್ಥಾನಗಳಲ್ಲಿದ್ದ ಉದ್ಯೋಗಿಗಳೂ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಾರ್ಯಕ್ಷಮತೆ ಪರಾಮರ್ಶೆಯ ಸಂದರ್ಭದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ಕಳಪೆ ಕಾರ್ಯನಿರ್ವಹಣೆ ಪಟ್ಟಿಗೆ ಸೇರಿಸುವಂತೆ ಮ್ಯಾನೇಜರ್​ಗಳಿಗೆ ಗೂಗಲ್ ಸೂಚಿಸಿತ್ತು. ಉದ್ಯೋಗ ಕಡಿತಕ್ಕೆ ಉದ್ಯೋಗಿಗಳನ್ನು ಆಯ್ಕೆ ಮಾಡುವುದನ್ನು ಸುಲಭಗೊಳಿಸುವುದಕ್ಕಾಗಿ ಕಂಪನಿಯು ಈ ಸೂಚನೆ ನೀಡಿತ್ತು.

ಇದನ್ನೂ ಓದಿ
Image
Lava Blaze 5G: ವಿದೇಶಿ ಮೊಬೈಲ್ ಕಂಪನಿಗಳ ಹುಟ್ಟಡಗಿಸಿದ ಭಾರತದ ಲಾವಾ ಬ್ಲೇಜ್ ಈಗ ಖರೀದಿಗೆ ಲಭ್ಯ
Image
Tech Tips: ಪವರ್ ಬ್ಯಾಂಕ್ ಅಲ್ಲ: ಕರೆಂಟ್ ಇಲ್ಲದೆಯೂ ನಿಮ್ಮ ಮೊಬೈಲ್ ಚಾರ್ಜ್ ಮಾಡಬಹುದು: ಹೇಗೆ ಗೊತ್ತೇ?
Image
Tech Tips: ನಿಮಗೆ ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಬೇಕೇ?: ವೇರಿಫೈಡ್‌ ಬ್ಯಾಡ್ಜ್ ಪಡೆಯಲು ಇಲ್ಲಿದೆ ಹೊಸ ಟ್ರಿಕ್
Image
Galaxy S23: ಸ್ಯಾಮ್​ಸಂಗ್ ಹೊಸ ಸ್ಮಾರ್ಟ್​ಫೋನ್​ ಬುಕಿಂಗ್​ಗೆ ಭರ್ಜರಿ ಆಫರ್

Vivo Y100: ಇದು ಬಣ್ಣ ಬದಲಾಯಿಸುವ ಸ್ಮಾರ್ಟ್​ಫೋನ್: ವಿವೋದಿಂದ ಭಾರತದಲ್ಲಿ ವಿಶಿಷ್ಠ ಮೊಬೈಲ್ ರಿಲೀಸ್: ಬೆಲೆ ಎಷ್ಟು?

ಉದ್ಯೋಗ ಕಡಿತಕ್ಕೆ ಮೆಟಾ ಚಿಂತನೆ:

ಕಳೆದ ವರ್ಷ ಜಾಗತಿಕವಾಗಿ 11,000 ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿಯಾಗಿದ್ದ ಟೆಕ್ ದೈತ್ಯ ಮೆಟಾ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಫೇಸ್​​ಬುಕ್ ಮಾಲೀಕತ್ವ ಹೊಂದಿರುವ ಕಂಪನಿಯು ಅನೇಕ ತಂಡಗಳ ಬಜೆಟ್​ ಅನ್ನು ಅಂತಿಮಗೊಳಿಸಿಲ್ಲ. ಬಜೆಟ್ ಅನ್ನು ಮುಂದೂಡಿಕೆ ಮಾಡಿದ್ದು, ಮತ್ತೊಂದು ಸುತ್ತಿನ ಉದ್ಯೋಗ ಕಡಿತದ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಬ್ರಿಟನ್​ನ ಮಾಧ್ಯಮವೊಂದು ವರದಿ ಮಾಡಿದೆ. ಮುಂದಿನ ಕೆಲವೇ ವಾರಗಳಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭವಾಗಬಹುದು. ಬಜೆಟ್​ ವಿಳಂಬಕ್ಕೆ ಇದುವೇ ಕಾರಣ ಎಂದು ಇಬ್ಬರು ಅಧಿಕೃತ ಮೂಲಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

2023ರಲ್ಲಿ ಕಂಪನಿಯ ವೆಚ್ಚಗಳು 89 ಶತಕೋಟಿ ಡಾಲರ್​​ಗಳಿಂದ 95 ಶತಕೋಟಿ ಡಾಲರ್ ಮಧ್ಯೆ ಇರಲಿದೆ ಎಂದು ಕೆಲವು ದಿನಗಳ ಹಿಂದೆ ಮೆಟಾ ಮಾಹಿತಿ ನೀಡಿತ್ತು. 2023 ದಕ್ಷತೆಯ ವರ್ಷವಾಗಿರಲಿದೆ ಎಂದು ಸಿಇಒ ಮಾರ್ಕ್ ಝುಕರ್​ಬರ್ಗ್ ಘೋಷಿಸಿದ್ದರು. ಉದ್ಯೋಗ ಕಡಿತದ ವರದಿ ನಿಜವಾದಲ್ಲಿ ಮೆಟಾ ಮತ್ತೆ ಸಾವಿರಾರು ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:54 am, Fri, 17 February 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ