Galaxy S23: ಸ್ಯಾಮ್​ಸಂಗ್ ಹೊಸ ಸ್ಮಾರ್ಟ್​ಫೋನ್​ ಬುಕಿಂಗ್​ಗೆ ಭರ್ಜರಿ ಆಫರ್

ಸ್ಯಾಮ್​ಸಂಗ್​ ಪ್ರೀಮಿಯಂ ಎಸ್ ಸರಣಿಯಲ್ಲಿ ಹೊಸದಾಗಿ ಮೂರು ಮಾದರಿಗಳನ್ನು ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಮಾರ್ಟ್​ಫೋನ್​ಗಳಿಗೆ ಪ್ರಿಬುಕಿಂಗ್ ಆಫರ್ ಘೋಷಿಸಿದ್ದು, ಭರ್ಜರಿ ಕೊಡುಗೆಗಳನ್ನು ಕೂಡ ನೀಡುತ್ತಿದೆ.

Galaxy S23: ಸ್ಯಾಮ್​ಸಂಗ್ ಹೊಸ ಸ್ಮಾರ್ಟ್​ಫೋನ್​ ಬುಕಿಂಗ್​ಗೆ ಭರ್ಜರಿ ಆಫರ್
ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23
Follow us
ಕಿರಣ್​ ಐಜಿ
|

Updated on:Feb 16, 2023 | 4:16 PM

ಗ್ಯಾಜೆಟ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಸ್ಯಾಮ್​ಸಂಗ್(Samsung), ಪ್ರೀಮಿಯಂ ಎಸ್ ಸರಣಿಯಲ್ಲಿ ಪರಿಚಯಿಸಿರುವ ಗ್ಯಾಲಕ್ಸಿ ಎಸ್ 23 ಸ್ಮಾರ್ಟ್​ಫೋನ್​ಗಳು ದಾಖಲೆ ಸಂಖ್ಯೆಯ ಬುಕಿಂಗ್ ಕಂಡಿವೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23 (Samsung Galaxy S23) ಸರಣಿಯಲ್ಲಿ ಮೂರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಗ್ಯಾಲಕ್ಸಿ ಎಸ್23, ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ ಆವೃತ್ತಿಗಳು ಬೇಡಿಕೆ ಪಡೆದುಕೊಂಡಿವೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23 (8 ಜಿಬಿ /128 ಜಿಬಿ) ಆರಂಭಿಕ ಆವೃತ್ತಿ ದರ ₹74,999 ರಿಂದ ಆರಂಭವಾಗುತ್ತದೆ. ಅದೇ ರೀತಿ ಗ್ಯಾಲಕ್ಸಿ ಎಸ್23 ಅಲ್ಟ್ರಾ (12 ಜಿಬಿ /1ಟಿಬಿ) ಟಾಪ್​ ಎಂಡ್ ಮಾದರಿಗೆ ₹1,54,999 ದರವಿದೆ.

ಗ್ಯಾಲಕ್ಸಿ S ಸರಣಿಯಲ್ಲಿ ಪ್ರೀಮಿಯಂ ಮಾದರಿ ಪರಿಚಯಿಸಿದ ಸ್ಯಾಮ್​ಸಂಗ್ ಮೊದಲ 24 ಗಂಟೆಗಳಲ್ಲಿ, 1.4 ಲಕ್ಷಕ್ಕೂ ಅಧಿಕ ಯುನಿಟ್ ಮುಂಗಡ ಬುಕ್ಕಿಂಗ್ ಪಡೆದುಕೊಂಡಿದೆ. ಹೊಸ ಸರಣಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ S23, ಗ್ಯಾಲಕ್ಸಿ S23+ ಮತ್ತು ಗ್ಯಾಲಕ್ಸಿ S23 ಅಲ್ಟ್ರಾ (Galaxy S23 Ultra) ಬಿಡುಗಡೆಯಾಗಿದೆ. ಅದರಲ್ಲಿ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್​ಫೋನ್​ನಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು, ಫೋಟೊಗ್ರಫಿ ಪ್ರಿಯರಿಗೆ ನೆಚ್ಚಿನ ಆಯ್ಕೆಗಳು ಇವೆ. ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಆರಂಭಿಕ ಆವೃತ್ತಿ ದರ ₹74,999 ಇದ್ದರೆ, ಗ್ಯಾಲಕ್ಸಿ ಎಸ್23 ಅಲ್ಟ್ರಾ 12GB/1TB ಟಾಪ್​ ಎಂಡ್ ₹1,54,999 ದರ ಹೊಂದಿದೆ.

ಗ್ಯಾಲಕ್ಸಿ ಎಸ್23 ಸರಣಿ ಖರೀದಿಯ ಮೇಲೆ 24 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವಿದೆ. ಅಲ್ಲದೆ, ಸ್ಮಾರ್ಟ್​ಫೋನ್ ಕಾರ್ಯಕ್ಷಮತೆ ಹೆಚ್ಚಿಸಲು ಸ್ನ್ಯಾಪ್​ಡ್ರ್ಯಾಗನ್ 8 GEN 2 ಪ್ರೊಸೆಸರ್ ಬೆಂಬಲ ಹೊಂದಿದೆ. ಎಲ್ಲ ಮಾದರಿಗಳಿಗೂ 4 ವರ್ಷದವರೆಗೆ ಓಎಸ್ ಅಪ್​ಗ್ರೇಡ್ ಮತ್ತು 5 ವರ್ಷ ಭದ್ರತಾ ಅಪ್​ಡೇಟ್ ಲಭ್ಯವಾಗುತ್ತದೆ ಎಂದು ಸ್ಯಾಮ್​ಸಂಗ್ ಭರವಸೆ ನೀಡಿದೆ. ಜತೆಗೆ, ಎಸ್​23 ಸರಣಿ ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ಗ್ಯಾಲಕ್ಸಿ ಸ್ಮಾರ್ಟ್​ವಾಚ್ ಆಫರ್ ದೊರೆಯಲಿದೆ.

ಬೆಲೆ ವಿವರ

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​ಫೋನ್ ಫ್ಯಾಂಟಮ್ ಬ್ಲ್ಯಾಕ್, ಕ್ರೀಂ, ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಸ್23 (8/256 ಜಿಬಿ) ₹79,999 ಗ್ಯಾಲಕ್ಸಿ ಎಸ್23 (8/128 ಜಿಬಿ) ₹74,999.

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23+ ಸ್ಮಾರ್ಟ್​ಫೋನ್ ಫ್ಯಾಂಟಮ್ ಬ್ಲ್ಯಾಕ್ ಮತ್ತು ಕ್ರೀಂ ಬಣ್ಣಗಳಲ್ಲಿ ದೊರೆಯುತ್ತದೆ. ಗ್ಯಾಲಕ್ಸಿ ಎಸ್23+ (8/512 ಜಿಬಿ) ₹1,04,999 ಗ್ಯಾಲಕ್ಸಿ ಎಸ್23+ (8/256 ಜಿಬಿ) ₹94,999

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್ ಫ್ಯಾಂಟಮ್ ಬ್ಲ್ಯಾಕ್, ಗ್ರೀನ್ ಮತ್ತು ಕ್ರೀಂ ಬಣ್ಣಗಳಲ್ಲಿ ದೊರೆಯುತ್ತದೆ. ಗ್ಯಾಲಕ್ಸಿ ಎಸ್23 ಅಲ್ಟ್ರಾ (12/1ಟಿಬಿ) ₹1,54,999 ಗ್ಯಾಲಕ್ಸಿ ಎಸ್23 ಅಲ್ಟ್ರಾ (12/512 ಜಿಬಿ) ₹1,34,999 ಗ್ಯಾಲಕ್ಸಿ ಎಸ್23 ಅಲ್ಟ್ರಾ (12/256 ಜಿಬಿ) ₹1,24,999

ಬುಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಗ್ಯಾಲಕ್ಸಿ ವಾಚ್4 LTE ಕ್ಲಾಸಿಕ್ ಮತ್ತು ಗ್ಯಾಲಕ್ಸಿ ಬಡ್ಸ್2 ₹4999ಗೆ ದೊರೆಯಲಿದೆ. ಅದೇ ರೀತಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23+ ಮುಂಗಡ ಬುಕ್ಕಿಂಗ್ ಮಾಡಿದರೆ, ಗ್ಯಾಲಕ್ಸಿ ವಾಚ್4 BT ₹4999ಕ್ಕೆ ಲಭ್ಯವಾಗಲಿದೆ. ಪ್ರೀಮಿಯಂ ಸರಣಿಯ ಗ್ಯಾಲಕ್ಸಿ ಎಸ್23 ಬುಕ್ಕಿಂಗ್ ಮಾಡಿದರೆ ಗ್ರಾಹಕರು ₹5000 ಮೌಲ್ಯದ ಸ್ಟೋರೇಜ್ ಅಪ್​ಗ್ರೇಡ್ ಪಡೆಯಬಹುದು. ಅಲ್ಲದೆ ಗ್ರಾಹಕರಿಗೆ ಗ್ಯಾಲಕ್ಸಿ ಎಸ್23 ಸರಣಿ ಖರೀದಿಯ ಮೇಲೆ 24 ತಿಂಗಳ ನೋ ಕಾಸ್ಟ್ ಇಎಂಐ ಕೊಡುಗೆ ಲಭ್ಯವಿದೆ ಎಂದು ಸ್ಯಾಮ್​ಸಂಗ್ ಹೇಳಿದೆ.

Published On - 4:16 pm, Thu, 16 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ