AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Galaxy M14 5G: ಅತಿ ಕಡಿಮೆ ಬೆಲೆಗೆ 5G ಫೋನ್ ಬೇಕೆ?: ಇಂದಿನಿಂದ ಮಾರಾಟ ಕಾಣುತ್ತಿದೆ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌

ಕಳೆದ ವಾರವಷ್ಟೆ ದಕ್ಷಿಣ ಕೊರಿಯಾ ಮೂಲದ ಕಂಪನಿ ತನ್ನ M ಸರಣಿಯಲ್ಲಿ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್14 5ಜಿ (Galaxy M14 5G) ಫೋನನ್ನು ಭಾರತದಲ್ಲಿ ರಿಲೀಸ್ ಮಾಡಿತ್ತು. ಇದೀಗ ಇಂದಿನಿಂದ ಈ ಸ್ಮಾರ್ಟ್​ಫೋನ್ ಖರೀದಿಗೆ ಸಿಗುತ್ತಿದೆ.

Galaxy M14 5G: ಅತಿ ಕಡಿಮೆ ಬೆಲೆಗೆ 5G ಫೋನ್ ಬೇಕೆ?: ಇಂದಿನಿಂದ ಮಾರಾಟ ಕಾಣುತ್ತಿದೆ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌
Galaxy M14 5G
Vinay Bhat
|

Updated on:Apr 21, 2023 | 12:52 PM

Share

ಸ್ಯಾಮ್​ಸಂಗ್ (Samsung) ಕಂಪನಿ ಹೆಚ್ಚಾಗಿ ಬಿಡುಗಡೆ ಮಾಡುವ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್​ಫೋನ್​ಗಳಿಗೆ ಭರ್ಜರಿ ಬೇಡಿಕೆ ಇದೆ. ಈ ಸರಣಿಯ ಫೋನ್​ಗಳು ಬೊಂಬಾಟ್ ಆಗಿ ಸೇಲ್ ಕಾಣುತ್ತದೆ. ಇದಕ್ಕಾಗಿಯೆ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್​​ಫೋನ್​ಗಳ ಪೈಕಿ ಸ್ಯಾಮ್​ಸಂಗ್ ಎರಡನೇ ಸ್ಥಾನದಲ್ಲಿದೆ. ಕಳೆದ ವಾರವಷ್ಟೆ ದಕ್ಷಿಣ ಕೊರಿಯಾ ಮೂಲದ ಕಂಪನಿ ತನ್ನ M ಸರಣಿಯಲ್ಲಿ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್14 5ಜಿ (Samsung Galaxy M14 5G) ಫೋನನ್ನು ಭಾರತದಲ್ಲಿ ರಿಲೀಸ್ ಮಾಡಿತ್ತು. ಇದೀಗ ಇಂದಿನಿಂದ ಈ ಸ್ಮಾರ್ಟ್​ಫೋನ್ ಖರೀದಿಗೆ ಸಿಗುತ್ತಿದೆ. ಇದೊಂದು ಮಧ್ಯಮ ಬೆಲೆ ಸ್ಮಾರ್ಟ್​ಫೋನ್ ಆಗಿದ್ದು, ಬಲಿಷ್ಠ ಬ್ಯಾಟರ್ ಲೈಫ್, ಅತ್ಯುತ್ತಮ ಪ್ರೊಸೆಸರ್, ಕ್ಯಾಮೆರಾವನ್ನು ಒಳಗೊಂಡಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 4GB RAM + 128GB ರೂಪಾಂತರದ ಆಯ್ಕೆಗೆ 13,490 ರೂ. ಇದೆ. ಅಂತೆಯೆ 6GB RAM + 128GB ಆಯ್ಕೆಗೆ 14,990 ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೊನ್‌ ಬ್ಲೂ, ಡಾರ್ಕ್ ಬ್ಲೂ ಮತ್ತು ಸಿಲ್ವರ್ ಬಣ್ಣಗಳ ರೂಪಾಂತರದ ಆಯ್ಕೆಗಳಲ್ಲಿ ಅನಾವರಣವಾಗಿದೆ. ಏಪ್ರಿಲ್ 21 ಇಂದಿನಿಂದ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ ಮತ್ತು ಆಯ್ದ ರಿಟೇಲ್‌ ಸ್ಟೋರ್‌ಗಳಲ್ಲಿ ಮಾರಾಟ ಆರಂಭವಾಗಿದೆ.

ಇದನ್ನೂ ಓದಿ
Image
Twitter Blue Tick: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯ
Image
APPLE Store: ದೇಶದ ಮೊದಲ ಮುಂಬೈ ಸ್ಟೋರ್​​ಗೆ ಆ್ಯಪಲ್ ಸಿಇಒ ಟಿಮ್ ಕುಕ್ ಚಾಲನೆ
Image
Tech Tips: ಫೇಸ್​ಬುಕ್​ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್​ಗೆ ವರ್ಗಾಹಿಸುವುದು ಹೇಗೆ?
Image
PM Modi Tim Cook: ಪ್ರಧಾನಿ ಮೋದಿ ಭೇಟಿ ಮಾಡಿದ ಆ್ಯಪಲ್ ಸಿಇಒ ಟಿಮ್ ಕುಕ್

ಚಾಟ್‌ಜಿಪಿಟಿ ವಿದ್ಯಾರ್ಥಿಗೆ ಯಾವುದೇ ತರಗತಿಗೆ ಹಾಜರಾಗದೆ ಪರೀಕ್ಷೆಯಲ್ಲಿ ಶೇ.94 ಗಳಿಸಲು ಸಹಾಯ ಮಾಡಿದೆ

ಫೀಚರ್ಸ್ ಏನಿದೆ?:

ಈ ಸ್ಮಾರ್ಟ್​ಫೋನ್ M14 5G ಸ್ಮಾರ್ಟ್‌ಫೋನ್ 2408×1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ ಹೆಚ್‌ಡಿ PLS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಆಕ್ಟಾ-ಕೋರ್ Exynos 1330 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್​ನ ಪ್ರಮುಖ ಹೈಲೇಟ್ ಆಗಿರುವ ಬ್ಯಾಟರಿಯು 6000mAh ಸಾಮರ್ಥ್ಯದಿಂದ ಕೂಡಿದೆ. 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದ್ದು, 5G, 4G, Wi-Fi, ಬ್ಲೂಟೂತ್ 5.2, NFC ಮತ್ತು GPS ಕನೆಕ್ಟಿವಿಟಿ ಆಯ್ಕೆಯನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Fri, 21 April 23

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ