Samsung Galaxy M14 5G: ಬರೋಬ್ಬರಿ 6000mAh ಬ್ಯಾಟರಿ: ಸ್ಯಾಮ್​ಸಂಗ್​ನಿಂದ ಹುಬ್ಬೇರಿಸುವಂತಹ ಫೋನ್ ಬಿಡುಗಡೆ: ಭರ್ಜರಿ ಮಾರಾಟ ಖಚಿತ

ದಕ್ಷಿಣ ಕೊರಿಯಾ ಮೂಲದ ಕಂಪನಿ ತನ್ನ M ಸರಣಿಯಲ್ಲಿ ಹೊಸ ಫೋನೊಂದನ್ನು ಭಾರತದಲ್ಲಿ ಅನಾವರಣ ಮಾಡಿದೆ. ಅದುವೇ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್14 5ಜಿ (Samsung Galaxy M14 5G).

Follow us
|

Updated on:Apr 18, 2023 | 1:23 PM

ಸ್ಯಾಮ್​ಸಂಗ್ (Samsung) ಕಂಪನಿ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್​ಫೋನ್​ಗಳಿಗೆ ಭರ್ಜರಿ ಬೇಡಿಕೆ ಇದೆ. ಈ ಸರಣಿಯ ಫೋನ್​ಗಳು ಬಿಡುಗಡೆ ಆಯಿತು ಎಂದಾದರೆ ಅದು ಬೊಂಬಾಟ್ ಆಗಿ ಸೇಲ್ ಕಾಣುತ್ತದೆ. ಇದಕ್ಕಾಗಿಯೆ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್​​ಫೋನ್​ಗಳ ಪೈಕಿ ಸ್ಯಾಮ್​ಸಂಗ್ ಎರಡನೇ ಸ್ಥಾನದಲ್ಲಿದೆ. ಇದೀಗ ದಕ್ಷಿಣ ಕೊರಿಯಾ ಮೂಲದ ಕಂಪನಿ ತನ್ನ M ಸರಣಿಯಲ್ಲಿ ಹೊಸ ಫೋನೊಂದನ್ನು ಭಾರತದಲ್ಲಿ ಅನಾವರಣ ಮಾಡಿದೆ. ಅದುವೇ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್14 5ಜಿ (Samsung Galaxy M14 5G). ಇದೊಂದು ಮಧ್ಯಮ ಬೆಲೆ ಸ್ಮಾರ್ಟ್​ಫೋನ್ ಆಗಿದ್ದು, ಬಲಿಷ್ಠ ಬ್ಯಾಟರ್ ಲೈಫ್, ಅತ್ಯುತ್ತಮ ಪ್ರೊಸೆಸರ್, ಕ್ಯಾಮೆರಾವನ್ನು ಒಳಗೊಂಡಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 4GB RAM + 128GB ರೂಪಾಂತರದ ಆಯ್ಕೆಗೆ 13,490 ರೂ. ಇದೆ. ಅಂತೆಯೆ 6GB RAM + 128GB ಆಯ್ಕೆಗೆ 14,990 ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೊನ್‌ ಬ್ಲೂ, ಡಾರ್ಕ್ ಬ್ಲೂ ಮತ್ತು ಸಿಲ್ವರ್ ಬಣ್ಣಗಳ ರೂಪಾಂತರದ ಆಯ್ಕೆಗಳಲ್ಲಿ ಅನಾವರಣವಾಗಿದೆ. ಇದೇ ಏಪ್ರಿಲ್ 21 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ ಮತ್ತು ಆಯ್ದ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಇದನ್ನೂ ಓದಿ
Image
UPI 123Pay: ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಯುಪಿಐ ಪೇಮೆಂಟ್ ಮಾಡುವುದು ಹೇಗೆ? ಇಲ್ಲಿದೆ 123ಪೇ ಡೀಟೇಲ್ಸ್
Image
Unlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?
Image
Xiaomi Robot Vacuum-Mop 2i: ಸ್ಮಾರ್ಟ್ ಆಗಿ ಮನೆ ಕ್ಲೀನ್ ಮಾಡಲು ಶಓಮಿ ರೊಬಾಟ್ ವಾಕ್ಯೂಮ್ ಮಾಪ್
Image
Asus ROG Phone 7: ಕ್ರೇಜಿ ಗೇಮಿಂಗ್ ಫೀಚರ್ಸ್ ₹74,999 ಏಸಸ್ ರಾಗ್ ಫೋನ್ 7

Tech Tips: ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಪಡೆಯಲು ಇರುವ ಸುಲಭ ದಾರಿ ಯಾವುದು?: ಇಲ್ಲಿದೆ ನೋಡಿ

ಏನು ಫೀಚರ್ಸ್?:

ಈ ಸ್ಮಾರ್ಟ್​ಫೋನ್ M14 5G ಸ್ಮಾರ್ಟ್‌ಫೋನ್ 2408×1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ ಹೆಚ್‌ಡಿ PLS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಆಕ್ಟಾ-ಕೋರ್ Exynos 1330 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್​ನ ಪ್ರಮುಖ ಹೈಲೇಟ್ ಆಗಿರುವ ಬ್ಯಾಟರಿಯು 6000mAh ಸಾಮರ್ಥ್ಯದಿಂದ ಕೂಡಿದೆ. 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದ್ದು, 5G, 4G, Wi-Fi, ಬ್ಲೂಟೂತ್ 5.2, NFC ಮತ್ತು GPS ಕನೆಕ್ಟಿವಿಟಿ ಆಯ್ಕೆಯನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Tue, 18 April 23