Tech Tips: ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಪಡೆಯಲು ಇರುವ ಸುಲಭ ದಾರಿ ಯಾವುದು?: ಇಲ್ಲಿದೆ ನೋಡಿ

Instagram Blue Tick: ಸಾಕಷ್ಟು ಪ್ರಸಿದ್ಧಿ ಪಡೆದಿರುವ ಇನ್​ಸ್ಟಾಗ್ರಾಮ್​ನಲ್ಲಿ ಒಬ್ಬರ ಅಕೌಂಟ್ ಬ್ಲೂ ಟಿಕ್ ಇದ್ದರೆ ಅದಕ್ಕೊಂದು ವಿಶೇಷ ಗೌರವ ಎಂದೇ ಹೇಳಬಹುದು. ಹಾಗಾದರೆ ಇನ್​​ಸ್ಟಾದಲ್ಲಿ ಬ್ಲೂ ಟಿಕ್‌ (Blue Tick) ಬ್ಯಾಡ್ಜ್ ಪಡೆಯಲು ಇರುವ ಸುಲಭ ಮಾರ್ಗ ಯಾವುದು?.

Tech Tips: ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಪಡೆಯಲು ಇರುವ ಸುಲಭ ದಾರಿ ಯಾವುದು?: ಇಲ್ಲಿದೆ ನೋಡಿ
Instagram
Follow us
Vinay Bhat
|

Updated on: Apr 16, 2023 | 8:15 PM

ಸಾಮಾಜಿಕ ಜಾಲತಾಣಗಳು ಇಂದು ಸಾಕಷ್ಟು ಬದಲಾವಣೆ ಕಂಡಿದ್ದು ಈಗ ಮೊದಲಿನಂತಿಲ್ಲ. ಫೇಸ್​ಬುಕ್, ಟ್ವಿಟರ್ ಹಾಗೂ ವಾಟ್ಸ್​ಆ್ಯಪ್ (WhatsApp) ಅನೇಕ ರೀತಿಯಲ್ಲಿ ಬಳಕೆದಾರರಿಗೆ ಸಹಾಯ ಮಾಡುತ್ತಿದೆ. ಇವುಗಳ ಜೊತೆಗೆ ಮತ್ತೊಂದು ಪ್ರಸಿದ್ಧ ಜಾಲತಾಣ ಇನ್​ಸ್ಟಾಗ್ರಾಮ್ (Instagram) ಕೂಡ ಹಿಂದೆ ಬಿದ್ದಿಲ್ಲ. ತಿಂಗಳಿಗೆ ಬಿಲಿಯನ್​ಗೂ ಅಧಿಕ ಆ್ಯಕ್ಟಿವ್ ಬಳಕೆದಾರರನ್ನು ಹೊಂದಿರುವ ಇನ್​ಸ್ಟಾಗ್ರಾಮ್​ ಈಗ ಕೇವಲ ಫೋಟೋ- ವಿಡಿಯೋ ಹಂಚಿಕೊಳ್ಳಲು ಮಾತ್ರ ಉಳಿದಿಲ್ಲ. ಬದಲಾಗಿ ದೊಡ್ಡ ವ್ಯಾಪಾರದ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಹೀಗೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಇನ್​ಸ್ಟಾಗ್ರಾಮ್​ನಲ್ಲಿ ಒಬ್ಬರ ಅಕೌಂಟ್ ಬ್ಲೂ ಟಿಕ್ ಇದ್ದರೆ ಅದಕ್ಕೊಂದು ವಿಶೇಷ ಗೌರವ ಎಂದೇ ಹೇಳಬಹುದು. ಹಾಗಾದರೆ ಇನ್​​ಸ್ಟಾದಲ್ಲಿ ಬ್ಲೂ ಟಿಕ್‌ (Blue Tick) ಬ್ಯಾಡ್ಜ್ ಪಡೆಯಲು ಇರುವ ಸುಲಭ ಮಾರ್ಗ ಯಾವುದು?.

ಇನ್​ಸ್ಟಾಗ್ರಾಮ್​ನಲ್ಲಿ ಆಟೋಮ್ಯಾಟಿಕ್ ಆಗಿ ಬ್ಲೂ ಟಿಕ್ ಮಾರ್ಕ್ ಆಯ್ಕೆಗಳಿಲ್ಲ. ಬದಲಿಗೆ ಬಳಕೆದಾರರು ಕೆಲವು ವೈಯಕ್ತಿಕ ದಾಖಲೆಗಳ ವಿವರಗಳನ್ನು ನಮೋದಿಸಿ ಇದನ್ನು ಪಡೆದುಕೊಳ್ಳಬಹುದು. ಇದನ್ನೆಲ್ಲಾ ಪರಿಶೀಲಿಸಿದ ನಂತರ ಇನ್​​ಸ್ಟಾಗ್ರಾಮ್ ಬ್ಲೂ ಟಿಕ್ ನೀಡುತ್ತದೆ. ಇದನ್ನು ಪರಿಶೀಲನೆ ಬ್ಯಾಡ್ಜ್ ಎಂದು ಕರೆಯಲಾಗುತ್ತದೆ. ಹಾಗಾದರೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲನೆ ಬ್ಯಾಡ್ಜ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ.

Realme Narzo N55: ಬೆಸ್ಟ್ ಫೋನ್, ಬಜೆಟ್ ದರಕ್ಕೆ ದೊರೆಯುತ್ತಿದೆ ರಿಯಲ್​ಮಿ ಫೋನ್

ಇದನ್ನೂ ಓದಿ
Image
Flipkart Summer Saver Days sale: ಐಫೋನ್ 13 ಮೇಲೆ ಬಂಪರ್ ಡಿಸ್ಕೌಂಟ್: ಫ್ಲಿಪ್​ಕಾರ್ಟ್​ ಸಮ್ಮರ್ ಸೇನ್​ನಲ್ಲಿ ಆಫರ್​ಗಳ ಸುರಿಮಳೆ
Image
Tech Tips: ಹ್ಯಾಂಗ್ ಆಗುತ್ತಿರುವ ಸ್ಮಾರ್ಟ್​ಫೋನ್​ ಅನ್ನು ಸೂಪರ್ ಸ್ಪೀಡ್ ಮಾಡಲು ಇಲ್ಲಿದೆ ಟ್ರಿಕ್
Image
Galaxy F54 5G: 6000mAh ಬ್ಯಾಟರಿ: ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ 108MP ಕ್ಯಾಮೆರಾದ ಹೊಚ್ಚ ಹೊಸ ಸ್ಮಾರ್ಟ್​ಫೋನ್
Image
OnePlus Nord 3: ಭಾರತಕ್ಕೆ ಬರುತ್ತಿದೆ ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್: ಫೀಚರ್ಸ್ ಏನಿದೆ ನೋಡಿ
  • ಮೊದಲಿಗೆ ಇನ್​ಸ್ಟಾಗ್ರಾಮ್ ಆ್ಯಪ್ ಅನ್ನು ತೆರೆದು ಸ್ಕ್ರೀನ್‌ ಕೆಳಗಿನ ಬಲಭಾಗದಲ್ಲಿರುವ ಪ್ರೊಫೈಲ್ ಚಿತ್ರದ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಈಗ ಮೇಲಿನ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನುವನ್ನು ಸೆಲೆಕ್ಟ್ ಮಾಡಿ.
  • ನಂತರ ಅಲ್ಲಿ ಕಾಣಿಸುವ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಬೇಕಾಗುತ್ತದೆ.
  • ನೀವು ಈಗ ಮತ್ತೊಮ್ಮೆ ಖಾತೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ ಮತ್ತು ನಂತರ ವಿನಂತಿ ಪರಿಶೀಲನೆಯನ್ನು ಟ್ಯಾಪ್ ಮಾಡಿ.
  • ಇಲ್ಲಿ ನಿಮ್ಮ ಪೂರ್ಣ ಹೆಸರು ಮತ್ತು ಫೋಟೋ ID ನೀಡಿ. ಉದಾಹರಣೆಗೆ, ನೀವು ಸರ್ಕಾರ ನೀಡಿದ ಫೋಟೋ ಐಡಿ ಅಥವಾ ಅಧಿಕೃತ ವ್ಯಾಪಾರ ದಾಖಲೆಗಳನ್ನು ಒದಗಿಸಬಹುದು.
  • ಮುಂದಿನ ಹಂತಗಳನ್ನು ಪೂರ್ಣಗೊಳಿಸಲು ಪರದೆಯ ಮೇಲ್ಭಾಗದಲ್ಲಿರುವ ನಿರ್ದೇಶನಗಳನ್ನು ಅನುಸರಿಸಿ.

ಇನ್​​ಸ್ಟಾದಲ್ಲಿ ಬ್ಲೂಟಿಕ್‌ಗಾಗಿ ನೀವು ಈ ರೀತಿ ವಿನಂತಿಸಬಹುದು. ಹಾಗಂತ ನೀವು ಕೇಳುವಷ್ಟು ಬಾರಿ ನೀಲಿ ಟಿಕ್ ಬರುತ್ತದೆ ಎಂದು ಹೇಳುವುದು ಕಷ್ಟ. ಸಂಪೂರ್ಣ ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಂಡರೂ ಸಹ, ನಿಮ್ಮ ವಿನಂತಿಯ ರದ್ದತಿಗೆ ಇತರ ಕಾರಣಗಳೂ ಇರಬಹುದು. ಇದರ ಜೊತೆಗೆ ಬಳಕೆದಾರರು ಒಂದು ಸಮಯದಲ್ಲಿ ಒಂದು ವಿನಂತಿಯನ್ನು ಮಾತ್ರ ಸಲ್ಲಿಸಬಹುದು.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ವಿಡಿಯೋ ಮೆಸೇಜ್ ಆಯ್ಕೆ: ಹೊಸ ಫೀಚರ್ ಕೇಳಿ ದಂಗಾದ ಬಳಕೆದಾರರು

ನಿಮ್ಮ ಖಾತೆಯನ್ನು ಪರಿಶೀಲಿಸಿದರೆ, ಅಲೌಂಟ್​ನಲ್ಲಿ ಬಳಕೆದಾರ ಹೆಸರನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ. ನೀವು ಅದನ್ನು ಮಾಡಿದರೂ, ಪರಿಶೀಲನೆ ಬ್ಯಾಡ್ಜ್ ಅನ್ನು ಬೇರೆ ಖಾತೆಗೆ ವರ್ಗಾಯಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಎಲ್ಲಾದರು ತಪ್ಪು ಮಾಹಿತಿಯೊಂದಿಗೆ ವೆರಿಫಿಕೇಶನ್ ಬ್ಯಾಡ್ಜ್ ಪಡೆದರೆ, ಇನ್‌ಸ್ಟಾಗ್ರಾಮ್ ಅದರ ಬಗ್ಗೆ ತಿಳಿದ ತಕ್ಷಣ ಬ್ಲೂಟಿಕ್ ಅನ್ನು ತೆಗೆದುಹಾಕಿ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.

ಇನ್ನೊಂದು ಪ್ರಮುಖ ಅಂಶವೆಂದರೆ, ಇನ್​ಸ್ಟಾಗ್ರಾಮ್ ಬ್ಲೂ ಟಿಕ್ ನೀಡುವ ಮೊದಲು ನಿಮ್ಮ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಿದೆ. ನಿಮ್ಮ ಖಾತೆಯ ಹಿಂದಿನ ಹಿಸ್ಟರಿ, ಎಷ್ಟು ಫಾಲೋವರ್ಸ್ ಇದ್ದಾರೆ ಜೊತೆಗೆ ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ ಖಾತೆ ಮತ್ತು ಸದಾ ಸಕ್ರೀಯವಾಗಿರುವ ಖಾತೆಗೆ ಮಾತ್ರ ಈ ಬ್ಲೂ ಟಿಕ್​ ದೊರೆಯುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್