ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಹಗಲಿನ ವೇಳೆಯಲ್ಲಿ ಕಾರಿನ ಹಿಂಬದಿ ಗಾಜನ್ನು ಒಡೆದು ಒಂದು ಲಕ್ಷ ರೂಪಾಯಿಗಳನ್ನು ಕಳವು ಮಾಡಲಾಗಿದೆ. ಗುಬ್ಬಿ ತಾಲೂಕಿನ ಗಿರಿಪ್ರಸಾದ್ ಎಂಬುವರು ಬ್ಯಾಂಕ್‌ನಿಂದ ಹಣ ಪಡೆದು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.
ಹಾಡಹಗಲೇ ಕಾರಿನ ಗಾಜು ಒಡೆದು ಒಂದು ಲಕ್ಷ ರೂಪಾಯಿ ಕಳವು ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕು ಕಚೇರಿ ಬಳಿ ಶನಿವಾರ ಸಂಜೆ 4 ಗಂಟೆಗೆ ನಡೆದಿದೆ. ಗುಬ್ಬಿ ತಾಲೂಕಿನ ಹಗಲವಾಡಿಯ ಮಾರಲಪುರದ ನಿವಾಸಿ ಗಿರಿಪ್ರಸಾದ್ ಎಂಬುವರು ಖರೀದಿಸಿದ್ದ ಜಮೀನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಲು ಬುಕ್ಕಾ ಪಟ್ಟಣದಲ್ಲಿನ ಬ್ಯಾಂಕ್‌ವೊಂದರಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಬಂದಿದ್ದರು. ಕಾರಿನಲ್ಲಿದ್ದ ಹಣವನ್ನು ಹಿಂಬದಿ ಗಾಜು ಒಡೆದು ಕಳವು ಮಾಡಿದ್ದಾರೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Latest Videos