AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು

ಬುಡಕಟ್ಟು ಜನರನ್ನು ಪಾಕಿಸ್ತಾನದವರಿಗೆ ಹೋಲಿಸಿದ ವಿಜಯ್ ದೇವರಕೊಂಡ ಅವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ‘ರೆಟ್ರೋ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ವಿಜಯ್ ದೇವರಕೊಂಡ ಈ ರೀತಿ ಮಾತನಾಡಿದ್ದರು. ಈಗಾಗಲೇ ತಮ್ಮ ಹೇಳಿಕೆಗೆ ಅವರು ವಿಷಾದ ವ್ಯಕ್ತಪಡಿಸಿದ್ದರೂ ಕೂಡ ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ದೂರು ನೀಡಲಾಗಿದೆ.

ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು
Vijay Deverakonda
ಮದನ್​ ಕುಮಾರ್​
|

Updated on: Jun 22, 2025 | 8:55 PM

Share

ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುಡಕಟ್ಟು ಜನರ ಬಗ್ಗೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಅವರ ವಿರುದ್ಧ ದೂರು ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. ಸಾರ್ವಜನಿಕವಾಗಿ ನೀಡಿದ ಒಂದು ಹೇಳಿಕೆಯಿಂದಾಗಿ ವಿಜಯ್ ದೇವರಕೊಂಡ ಅವರು ಸಂಕಷ್ಟ ಎದುರಿಸುವಂತಾಗಿದೆ.

ವಿಜಯ್ ದೇವರಕೊಂಡ ಅವರು ಹೇಳಿಕೆ ನೀಡಿದ್ದು ಏಪ್ರಿಲ್ ತಿಂಗಳಲ್ಲಿ. ಆದರೆ ಅವರ ಮೇಲೆ ಕೇಸ್ ದಾಖಲಾಗಿತ್ತು ಜೂನ್ 17ರಂದು. ಏಪ್ರಿಲ್ ತಿಂಗಳಲ್ಲಿ ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಜಯ್ ದೇವರಕೊಂಡ ಭಾಗಿ ಆಗಿದ್ದರು. ಅದೇ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಡೆಯುತ್ತಿತ್ತು. ವೇದಿಕೆಯಲ್ಲಿ ಮಾತನಾಡುವಾಗ, ಪಾಕಿಸ್ತಾನದ ವರ್ತನೆಯನ್ನು ಬುಡಕಟ್ಟು ಸಂಘರ್ಷಕ್ಕೆ ವಿಜಯ್ ದೇವರಕೊಂಡ ಹೋಲಿಸಿದ್ದರು.

‘500 ವರ್ಷಗಳ ಹಿಂದೆ ಬುಡಕಟ್ಟು ಜನರು ಯುದ್ಧ ಮಾಡಿದ ರೀತಿಯಲ್ಲಿ ಪಾಕಿಸ್ತಾನಿಗಳು ವರ್ತಿಸುತ್ತಿದ್ದಾರೆ’ ಎಂದು ವಿಜಯ್ ದೇವರಕೊಂಡ ಹೇಳಿದ್ದರು. ಈ ಹೇಳಿಕೆಯಿಂದ ಬುಡಕಟ್ಟು ಜನಾಂಗದ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಬುಡಕಟ್ಟು ಜನರನ್ನು ಪಾಕಿಸ್ತಾನದವರಿಗೆ ಹೋಲಿಸಿದ್ದರಿಂದ ವಿವಾದ ಸೃಷ್ಟಿ ಆಗಿದೆ.

ಇದನ್ನೂ ಓದಿ
Image
ಮುಚ್ಚುಮರೆ ಇಲ್ಲ; ಒಂದೇ ಕಾರಲ್ಲಿ ರಶ್ಮಿಕಾ-ವಿಜಯ್ ಜಾಲಿ ರೈಡ್
Image
ವಿಜಯ್ ದೇವರಕೊಂಡಗೆ ಇದೆ ಬಣ್ಣದ ಲೋಕದ ಹಿನ್ನೆಲೆ; ತಂದೆಯ ವೃತ್ತಿ ಏನಾಗಿತ್ತು?
Image
ವಿಜಯ್ ದೇವರಕೊಂಡ ಪಕ್ಕದಲ್ಲಿ ಹೊಸ ಹುಡುಗಿ; ಅಭಿಮಾನಿಗಳಿಗೆ ಹೆಚ್ಚಿತು ಕುತೂಹಲ
Image
ವಿಜಯ್ ದೇವರಕೊಂಡ ಅನ್ನು ತುಳಿಯಲು ಯತ್ನಿಸಿದ್ದರೇ ಆ ಸ್ಟಾರ್ ನಟ?

‘ರೆಟ್ರೋ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರು ಈ ರೀತಿ ಮಾತನಾಡುತ್ತಿದ್​ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಕಮೆಂಟ್​ಗಳ ಮೂಲಕ ಜನರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು.

ಇದನ್ನೂ ಓದಿ: ಪತ್ನಿಯ ಗುಣ ಹೇಗಿರಬೇಕು? ಮದುವೆ ಬಗ್ಗೆ ಮೌನ ಮುರಿದ ವಿಜಯ್ ದೇವರಕೊಂಡ

ತಮ್ಮ ಹೇಳಿಕೆ ಸಂಬಂಧಿಸಿದಂತೆ ವಿಜಯ್ ದೇವರಕೊಂಡ ಅವರು ಈ ಮೊದಲೇ ಸ್ಪಷ್ಟನೆ ನೀಡಿದ್ದರು. ‘ಪರಿಶಿಷ್ಟ ವರ್ಗದವರನ್ನು ನೋವಿಸುವ ಉದ್ದೇಶ ನನಗೆ ಇರಲಿಲ್ಲ. ಅವರ ಬಗ್ಗೆ ನನಗೆ ಗೌರವ ಇದೆ. ನನ್ನ ಹೇಳಿಕೆಯ ಯಾವುದೇ ಭಾಗವನ್ನು ತಪ್ಪಾಗಿ ಅರ್ಥೈಸಲಾಗಿದ್ದರೆ ಅಥವಾ ಅದರಿಂದ ನೋವುಂಟಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.