AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ದೇವರಕೊಂಡಗೆ ಇದೆ ಬಣ್ಣದ ಲೋಕದ ಹಿನ್ನೆಲೆ; ತಂದೆಯ ವೃತ್ತಿ ಏನಾಗಿತ್ತು?

Vijay Deverakonda: ವಿಜಯ್ ದೇವರಕೊಂಡ ಅವರು ತೆಲುಗು ಟಿವಿ ನಿರ್ದೇಶಕರ ಮಗ. ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು, ಶಿಕ್ಷಣ ಪೂರ್ಣಗೊಳಿಸಿ ನಂತರ ರಂಗಭೂಮಿಯ ಮೂಲಕ ನಟನೆಯನ್ನು ಕಲಿತರು. 'ಅರ್ಜುನ್ ರೆಡ್ಡಿ' ಮತ್ತು 'ಗೀತ ಗೋವಿಂದಂ' ಚಿತ್ರಗಳು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. ಅವರು ಯಶಸ್ವಿ ನಟರಾಗಿ ಮಾತ್ರವಲ್ಲ, ಉತ್ತಮ ದಾನಿ ಮತ್ತು ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇಂದು ಅವರ ಜನ್ಮದಿನ.

ವಿಜಯ್ ದೇವರಕೊಂಡಗೆ ಇದೆ ಬಣ್ಣದ ಲೋಕದ ಹಿನ್ನೆಲೆ; ತಂದೆಯ ವೃತ್ತಿ ಏನಾಗಿತ್ತು?
Vijay Deverakonda
 ಶ್ರೀಲಕ್ಷ್ಮೀ ಎಚ್
| Edited By: |

Updated on: May 09, 2025 | 3:48 PM

Share

ನಟ ವಿಜಯ್ ದೇವರಕೊಂಡ (Vijay Deverakonda) ಅವರು ತೆಲುಗು ಟಿವಿ ನಿರ್ದೇಶಕ ದೇವರಕೊಂಡ ಗೋವರ್ಧನ್ ರಾವ್ ಅವರ ಮಗ. ವಿಜಯ್ ಅವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದ ಕಡೆ ಆಸಕ್ತಿ ಬೆಳೆಸಿಕೊಂಡರು. ಆದರೆ, ಅವರಿಗೆ ಶಿಕ್ಷಣವನ್ನು ಮೊದಲು ಪಡೆದು ನಂತರ ನಟನೆಗೆ ಬರಬೇಕು ಎಂನ ಧ್ಯೇಯ ಇತ್ತು. ಅವರು ಹಾಗೆಯೇ ಮಾಡಿದರು ಕೂಡ. ಅವರು ಚಿತ್ರರಂಗಕ್ಕೆ ಬರೋದಕ್ಕೂ ಮೊದಲು ‘ಸುತ್ರಧಾರ’ ಹೆಸರಿನ ರಂಗ ತಂಡ ಸೇರಿಕೊಂಡರು. ಇದರಿಂದ ಅವರು ನಟನೆ ಕಲಿತರು. ಇಂದು (ಮೇ 9) ವಿಜಯ್​ಗೆ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಾ ಇದ್ದಾರೆ.

ವಿಜಯ್ ದೇವರಕೊಂಡ ನಟನೆಯ ‘ಪೆಲ್ಲಿ ಚೂಪುಲು’ ಸಿನಿಮಾ ನ್ಯಾಷನಲ್ ಅವಾರ್ಡ್ ಪಡೆಯಿತು. ಇದು ಅವರ ವೃತ್ತಿ ಜೀವನಕ್ಕೆ ಮೈಲೇಜ್ ಕೊಟ್ಟಿತು. ವಿಜಯ್ ದೇವರಕೊಂಡ ಇನ್​ಸ್ಟಾಗ್ರಾಮ್​ನಲ್ಲಿ 2 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ ಅನ್ನೋದು ವಿಶೇಷ.

ವಿಜಯ್ ದೇವರಕೊಂಡ ಅವರ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾ ಸೂಪರ್ ಹಿಟಟ್ ಆಯಿತು. ಇದು ಅವರ ವೃತ್ತಿ ಜೀವನವನ್ನೇ ಬದಲಿಸಿ ಬಿಟ್ಟಿರು. ಅವರ ನಟನೆಯ ಈ ಚಿತ್ರ ಅನೇಕರಿಂದ ಮೆಚ್ಚುಗೆ ಪಡೆಯಿತು. ಸಂದೀಪ್ ರೆಡ್ಡಿ ವಂಗ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ವಿಜಯ್ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾ ನಟನೆಗೆ ಫಿಲ್ಮ್​ಫೇರ್ ಅವಾರ್ಡ್ ಪಡೆದರು. ಆ ಬಳಿಕ ಇದನ್ನು ಮಾರಿ ಅದರಿಂದ ಬಂದ 25 ಲಕ್ಷ ರೂಪಾಯಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟರು.

ಇದನ್ನೂ ಓದಿ:ಮತ್ತೆ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ, ಖಾತ್ರಿಯಾಯ್ತು ಸುದ್ದಿ

ವಿಜಯ್ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಸಿನಿಮಾ ಗೆಲುವು ಕಂಡಿತು. ಈ ಚಿತ್ರದ ಮೂಲಕ ಅವರ ಬಾಳಲ್ಲಿ ರಶ್ಮಿಕಾ ಮಂದಣ್ಣ ಬಂದರು. ಈ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದರು. ಈ ಚಿತ್ರದ ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿತು ಎಂದು ಹೇಳಲಾಗಿದೆ. ಇವರು ಈಗ ಒಟ್ಟಾಗಿ ಇದ್ದಾರೆ. ಆದರೆ, ಎಲ್ಲಿಯೂ ಹೇಳಿಕೊಂಡಿಲ್ಲ.

ವಿಜಯ್ ದೇವರಕೊಂಡ ಅವರು ‘ಏಷ್ಯನ್​ ಸಿನಿಮಾಸ್​’ನ ಕೋ ಓನರ್ ಆಗಿದ್ದಾರೆ. ಅವರು ‘ಏಷ್ಯನ್ ವಿಜಯ್ ದೇವರಕೊಂಡ ಸಿನಿಮಾಸ್’ ಹೊಂದಿದ್ದಾರೆ. ಇದು ತೆಲಂಗಾಣದಲ್ಲಿ ಇದೆ.  ‘ದಿ ದೇವರಕೊಂಡ ಫೌಂಡೇಷನ್’ ಹೆಸರಿನ ಎನ್​ಜಿಓನ ಇವರು 2019ರಲ್ಲಿ ಆರಂಭಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್