ವಿಜಯ್ ದೇವರಕೊಂಡ ಪಕ್ಕದಲ್ಲಿ ಹೊಸ ಹುಡುಗಿ; ಅಭಿಮಾನಿಗಳಿಗೆ ಹೆಚ್ಚಿತು ಕುತೂಹಲ
‘ಕಿಂಗ್ಡಮ್’ ಸಿನಿಮಾದ ಪೋಸ್ಟರ್ನಲ್ಲಿ ಈ ದೃಶ್ಯ ಇದೆ. ರೈಲ್ವೇ ನಿಲ್ದಾಣದಲ್ಲಿ ಹೊಸ ನಟಿಯ ಜೊತೆ ವಿಜಯ್ ದೇವರಕೊಂಡ ಕುಳಿತಿದ್ದಾರೆ. ಆಕೆ ಯಾರು ಎಂಬುದನ್ನು ಪತ್ತೆ ಹಚ್ಚಲು ಅಭಿಮಾನಿಗಳು ಎಐ ಸಹಾಯ ಕೇಳಿದ್ದಾರೆ. ಮಾಸ್ ಆಗಿ ಮೂಡಿಬರುತ್ತಿರುವ ‘ಕಿಂಗ್ಡಮ್’ ಸಿನಿಮಾದ ಪ್ರಚಾರಕ್ಕೆ ಈಗಲೇ ಚಾಲನೆ ನೀಡಲಾಗಿದೆ.

ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ಅವರಿಗೆ ಸಖತ್ ಜನಪ್ರಿಯತೆ ಇದೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಅದಕ್ಕೆ ತಕ್ಕಂತಹ ಫಲಿತಾಂಶ ಸಿಗುತ್ತಿಲ್ಲ. ವಿಜಯ್ ದೇವರಕೊಂಡ ಇತ್ತೀಚಿನ ವರ್ಷಗಳಲ್ಲಿ ನಟಿಸಿದ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಂಡಿಲ್ಲ. ‘ಲೈಗರ್’, ‘ಫ್ಯಾಮಿಲಿ ಸ್ಟಾರ್’, ‘ಖುಷಿ’ ಸಿನಿಮಾಗಳು ಸೋತಿವೆ. ಆದರೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಈಗ ವಿಜಯ್ ದೇವರಕೊಂಡ ಅವರು ‘ಕಿಂಗ್ಡಮ್’ (Kingdom) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಆದರೆ ಹೀರೋಯಿನ್ (Kingdom Movie Heroine) ಯಾರು ಎಂಬುದು ಇನ್ನೂ ಖಚಿತ ಆಗಿಲ್ಲ. ಅದಕ್ಕಾಗಿ ಅಭಿಮಾನಿಗಳು ಹುಡುಕಾಟ ನಡೆಸುತ್ತಿದ್ದಾರೆ.
‘ಕಿಂಗ್ಡಮ್’ ಸಿನಿಮಾದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಅದನ್ನು ತಿಳಿಸುವ ಸಲುವಾಗಿ ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ. ಇದರಲ್ಲಿ ನಟಿಯೊಬ್ಬರ ಫೋಟೋ ಇದೆ. ಆದರೆ ಅವರ ಮುಖ ಕಾಣಿಸಿಲ್ಲ. ರೈಲ್ವೇ ಸ್ಟೇಷನ್ನಲ್ಲಿ ವಿಜಯ್ ದೇವರಕೊಂಡ ಜೊತೆ ಕುಳಿತಿರುವ ನಟಿ ಯಾರು ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಮೂಡಿದೆ.
ಏಪ್ರಿಲ್ 30ರಂದು ‘ಕಿಂಗ್ಡಮ್’ ಸಿನಿಮಾದ ಮೊದಲ ಹಾಡು ರಿಲೀಸ್ ಆಗಲಿದೆ. ಅದನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಹಾಡಿನಲ್ಲಿ ಹೀರೋಯಿನ್ ಮುಖ ಬಹಿರಂಗ ಆಗಲಿದೆ. ಅಲ್ಲಿಯವರೆಗೂ ಕಾಯುವ ತಾಳ್ಮೆ ಅಭಿಮಾನಿಗಳಿಗೆ ಇಲ್ಲ. ಹಾಗಾಗಿ ಎಐ ಸಹಾಯ ಪಡೆದು ಹೀರೋಯಿನ್ ಹೆಸರು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
‘ಮಿಸ್ಟರ್ ಬಚ್ಚನ್’ ಖ್ಯಾತಿಯ ನಟಿ ಭಾಗ್ಯಶ್ರೀ ಅವರು ‘ಕಿಂಗ್ಡಮ್’ ಸಿನಿಮಾಗೆ ನಾಯಕಿ ಎನ್ನಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದು ಮಾಸ್ ಕಮರ್ಷಿಯಲ್ ಸಿನಿಮಾ ಆಗಿರಲಿದ್ದು, ಗೌತಮ್ ತಿನ್ನನೂರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ.
ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಯುದ್ಧ ಮಾಡುವ ಅಗತ್ಯ ಇಲ್ಲ: ವಿಜಯ್ ದೇವರಕೊಂಡ ಹೀಗೆ ಹೇಳಿದ್ದು ಯಾಕೆ?
ವಿಜಯ್ ದೇವರಕೊಂಡ ಅವರು ‘ಕಿಂಗ್ಡಮ್’ ಸಿನಿಮಾಗಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಬಾಡಿ ಟ್ರಾನ್ಸ್ಫರ್ಮೇಷನ್ ಕೂಡ ಮಾಡಿಕೊಂಡಿದ್ದಾರೆ. ಸಂಭಾವನೆ ವಿಚಾರದಲ್ಲೂ ಅವರು ರಾಜಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








