- Kannada News Photo gallery Rashmika Mandanna shares Photo of Oman dairies that clicked by Vijay Devarakonda
ವಿಜಯ್ ದೇವರಕೊಂಡ ಕ್ಲಿಕ್ಕಿಸಿದ ಸುಂದರ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡರು. ಒಮನ್ನಲ್ಲಿ ರಶ್ಮಿಕಾ ಅವರು ಇದ್ದರು. ಈ ವೇಳೆ ಅವರ ಜೊತೆ ವಿಜಯ್ ದೇವರಕೊಂಡ ಕೂಡ ಇದ್ದರು ಎನ್ನಲಾಗುತ್ತಿದೆ. ಈಗ ರಶ್ಮಿಕಾ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.
Updated on: Apr 12, 2025 | 8:34 AM

ರಶ್ಮಿಕಾ ಮಂದಣ್ಣ ಅವರು ತಮ್ಮ ಬರ್ತ್ಡೇನ ಒಮನ್ನಲ್ಲಿ ಆಚರಿಸಿಕೊಂಡರು. ಈ ವೇಳೆ ಅವರ ಜೊತೆ ಗೆಳೆಯ ವಿಜಯ್ ದೇವರಕೊಂಡ ಕೂಡ ಇದ್ದರು. ಈ ಸಂದರ್ಭದಲ್ಲಿ ವಿಜಯ್ ಕ್ಲಿಕ್ ಮಾಡಿದ ಸುಂದರ ಫೋಟೋಗಳನ್ನು ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ಪ್ರಕೃತಿ ಎಂದರೆ ಎಲ್ಲಿಲ್ಲದ ಖುಷಿ. ಅವರು ಸನ್ಸೆಟ್ಗಳನ್ನು ನೋಡಲು ಸಾಕಷ್ಟು ಇಷ್ಟಪಡುತ್ತಾರೆ. ಅದೇ ರೀತಿ ಒಮನ್ನಲ್ಲಿ ಅವರು ಸಮುದ್ರದಂಚಲ್ಲಿ ಕುಳಿತು ಸೂರ್ಯಾಸ್ತ ನೋಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಈ ಫೋಟೋಗಳನ್ನು ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಈ ಕಾರಣಕ್ಕೆ ಕಮೆಂಟ್ ಬಾಕ್ಸ್ನಲ್ಲಿ ‘ಫೋಟೋ ಕ್ರೆಡಿಟ್ನ ವಿಜಯ್ ದೇವರಕೊಂಡ ಅವರಿಗೆ ಕೊಡಿ’ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಾ ಇದ್ದಾರೆ.

ಈ ರೀತಿಯ ಟ್ರೋಲ್ಗಳಿಗೆ ರಶ್ಮಿಕಾ ಹೆದರುವವರಲ್ಲ. ರಶ್ಮಿಕಾ ಹಾಗೂ ವಿಜಯ್ ಹಲವು ವರ್ಷಗಳಿಂದ ಪ್ರೀತಿಸುತ್ತಾ ಇದ್ದಾರೆ. ಇಬ್ಬರೂ ಶೀಘ್ರವೇ ವಿವಾಹ ಆಗಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ. ಆದರೆ, ಸದ್ಯಕ್ಕೆ ಅದು ಈಡೇರುವುದು ಅನುಮಾನವೇ.

ರಶ್ಮಿಕಾ ಕೈಯಲ್ಲಿ ಹಲವು ಚಿತ್ರಗಳು ಇವೆ. ಅವರು ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ. ವಿಜಯ್ ದೇವರಕೊಂಡ ಅವರಿಗೆ ‘ಗೀತ ಗೋವಿಂದಂ’ ಬಳಿಕ ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಸಿಕ್ಕಿಲ್ಲ. ಅವರು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ.



















