ಪತ್ನಿಯ ಗುಣ ಹೇಗಿರಬೇಕು? ಮದುವೆ ಬಗ್ಗೆ ಮೌನ ಮುರಿದ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಡೇಟಿಂಗ್ ಮಾಡುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಈಗ ವಿಜಯ್ ದೇವರಕೊಂಡ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನ ಮದುವೆ ಆಗುವ ಹುಡುಗಿಗೆ ಯಾವ ಗುಣ ಇರಬೇಕು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ನಟ ವಿಜಯ್ ದೇವರಕೊಂಡ (Vijay Deverakonda) ಅವರ ಸಿನಿಮಾಗಳ ರೀತಿಯೇ ಅವರ ವೈಯಕ್ತಿಕ ವಿಷಯ ಕೂಡ ಹೆಚ್ಚು ಸುದ್ದಿ ಆಗುತ್ತದೆ. ಒಂದಷ್ಟು ವರ್ಷಗಳಿಂದ ಅವರು ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಗೊತ್ತಿರುವ ವಿಷಯ. ಆದರೆ ತಮ್ಮ ಪ್ರೀತಿಯ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೊಂಡಿಲ್ಲ. ಹಾಗಿದ್ದರೂ ಕೂಡ ಅನೇಕ ಫೋಟೋಗಳು ಅವರ ಆತ್ಮೀಯತೆಯನ್ನು ಸಾರಿ ಹೇಳುತ್ತಿವೆ. ಈಗ ವಿಜಯ್ ದೇವರಕೊಂಡ ಅವರು ಮದುವೆ (Marriage) ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಪತ್ನಿ ಆಗುವ ಹುಡುಗಿಗೆ ಯಾವ ಗುಣ ಇರಬೇಕು ಎಂಬುದನ್ನು ಅವರು ವಿವರಿಸಿದ್ದಾರೆ.
ಕೂಡಲೇ ಮದುವೆ ಆಗಲು ವಿಜಯ್ ದೇವರಕೊಂಡ ಸಿದ್ಧರಿಲ್ಲ. ಆದರೆ ಒಂದಲ್ಲಾ ಒಂದು ದಿನ ತಾವು ಮದುವೆ ಆಗುವುದಾಗಿ ಅವರು ಹೇಳಿದ್ದಾರೆ. ‘ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ಪತ್ನಿ ಆಗುವ ಗುಣ ಇದೆಯೇ?’ ಎಂದು ಕೇಳಿದ್ದಕ್ಕೆ, ‘ಒಳ್ಳೆಯ ಮನಸ್ಸು ಇರುವ ಯಾವುದೇ ಒಳ್ಳೆಯ ಹುಡುಗಿ ಆದರೂ ಸರಿ’ ಎಂದು ವಿಜಯ್ ದೇವರಕೊಂಡ ಅವರು ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಕೂಡ ವಿಜಯ್ ದೇವರಕೊಂಡ ಅವರು ಮಾತನಾಡಿದ್ದಾರೆ. ‘ರಶ್ಮಿಕಾ ಮಂದಣ್ಣ ಅವರು ತುಂಬ ಕಷ್ಟಪಡುವ ಹುಡುಗಿ. ತಮ್ಮ ಇಚ್ಛಾಶಕ್ತಿಯಿಂದ ಅವರು ಏನನ್ನೂ ಬೇಕಾದರೂ ಸಾಧಿಸಲಬಲ್ಲರು. ತಮಗಿಂತಲೂ ಮುಖ್ಯವಾಗಿ ಬೇರೆಯವರ ಖುಷಿಗೆ ಅವರು ಆದ್ಯತೆ ನೀಡುತ್ತಾರೆ. ಇದನ್ನು ಅವರು ಬ್ಯಾಲೆನ್ಸ್ ಮಾಡಲು ಕಲಿಯಬೇಕು’ ಎಂದು ವಿಜಯ್ ದೇವರಕೊಂಡ ಅವರು ರಶ್ಮಿಕಾಗೆ ಇರುವ ಗುಣಗಳನ್ನು ತಿಳಿಸಿದ್ದಾರೆ.
2018ರಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ‘ಗೀತ ಗೋವಿಂದಂ’ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ 2019ರಲ್ಲಿ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಕೂಡ ತೆರೆ ಹಂಚಿಕೊಂಡರು. ಆ ದಿನಗಳಿಂದಲೇ ಅವರು ಒಟ್ಟಾಗಿ ಸುತ್ತಾಡಲು ಆರಂಭಿಸಿದರು. ಅನೇಕ ಹಬ್ಬಗಳನ್ನು ರಶ್ಮಿಕಾ ಅವರು ವಿಜಯ್ ದೇವರಕೊಂಡ ಕುಟುಂಬದ ಜೊತೆ ಆಚರಿಸಿದ್ದುಂಟು.
ಇದನ್ನೂ ಓದಿ: ಭಾವಿ ಮೈದುನನಿಗಾಗಿ ಉಚಿತವಾಗಿ ಕೆಲಸ ಮಾಡಿಕೊಟ್ಟ ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ ಅವರ ಕುಟುಂಬದ ಜೊತೆ ರಶ್ಮಿಕಾ ಮಂದಣ್ಣ ಅವರಿಗೆ ಆಪ್ತತೆ ಇದೆ. ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ನಟನೆಯ ಸಿನಿಮಾಗಳಿಗೆ ರಶ್ಮಿಕಾ ಅವರು ಬೆಂಬಲ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








