ಹಣ ಮಾಡಲು ಬಾಲಿವುಡ್ ಖಾನ್ಗಳ ಹೊಸ ತಂತ್ರ; ನಿರ್ಮಾಪಕರಿಗೂ ಇದೆ ಲಾಭ
Bollywood salaries: ಬಾಲಿವುಡ್‌ನಲ್ಲಿ ಖಾನ್‌ಗಳು ಹಾಗೂ ಪ್ರಮುಖ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ಹಿರಿಯ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಬಹಿರಂಗಪಡಿಸಿದ್ದಾರೆ. ಚಿತ್ರದ ಬಜೆಟ್‌ನ 30-40% ವರೆಗೆ ನಟರ ಸಂಭಾವನೆಗೆ ಮೀಸಲಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಈಗ ಹೊಸ ಮಾದರಿಯಲ್ಲಿ ನಟರು ಕಡಿಮೆ ಸಂಭಾವನೆಗೆ ಒಪ್ಪಿ ಲಾಭದಲ್ಲಿ ಷೇರು ಪಡೆಯುವ ವ್ಯವಸ್ಥೆ ಜಾರಿಯಲ್ಲಿದೆ.

ಬಾಲಿವುಡ್‌ನಲ್ಲಿ (Bollywood) ಖಾನ್‌ಗಳು ಭರ್ಜರಿ ಸಂಭಾವನೆ ಪಡೆಯುತ್ತಾರೆ ಎನ್ನುವ ವಿಷಯ ಬಹುತೇಕರಿಗೆ ಗೊತ್ತಿದೆ. ಅನೇಕ ನಿರ್ಮಾಪಕರು ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಅವರು ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬುದು ಗೊತ್ತೇ? ಈ ವಿಚಾರವನ್ನು ಹಿರಿಯ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ರಿವೀಲ್ ಮಾಡಿದ್ದಾರೆ. ಈ ಮೊದಲು ‘ಬರ್ಫಿ’, ‘ದಂಗಲ್’ ರೀತಿಯ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಅವರು ಬಾಲಿವುಡ್ ಖಾನ್ಗಳ ಸಂಭಾವನೆ ರಿವೀಲ್ ಮಾಡಿದ್ದಾರೆ. ಇದರ ಜೊತೆ ಹೊಸ ಮಾಡ್ಯೂಲ್ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಹೀರೋಗಳು ಹೆಚ್ಚು ಸಂಭಾವನೆ ನಿರೀಕ್ಷೆ ಮಾಡುತ್ತಾರೆ. ಹೆಚ್ಚು ಸಂಭಾವನೆ ಕೊಟ್ಟರೆ ಉಳಿದವರಿಗೆ ಕಡಿಮೆ ಕೊಡಲೇಬೇಕಾಗುತ್ತದೆ. ಅಲ್ಲದೆ ನಿರ್ಮಾಪಕರು ಹಲವು ವಿಚಾರಗಳಲ್ಲಿ ರಾಜಿ ಆಗಬೇಕಾಗುವ ಪರಿಸ್ಥಿತಿ ಬರುತ್ತದೆ. ಸದ್ಯ ಸಿದ್ದಾರ್ಥ್ ರಾಯ್ ಕಪೂರ್ ಹೇಳಿರುವ ಮಾಹಿತಿ ಪ್ರಕಾರ, ಸಿನಿಮಾದ ಬಜೆಟ್‌ನ ಶೇ.30-40 ಸಂಭಾವನೆ ಹೀರೋಗಳ ಕೈ ಸೇರುತ್ತಿದೆ. ಆದರೆ, ಇತ್ತೀಚೆಗೆ ಬಳಕೆ ಆಗುತ್ತಿರುವ ತಂತ್ರ ನಿರ್ಮಾಪಕರಿಗೆ ಸಹಾಯ ಮಾಡಿದೆ.
‘ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್ ಹಾಗೂ ಹೃತಿಕ್ ರೋಷನ್ ಅವರಂಥ ಹೀರೋಗಳು ದೊಡ್ಡ ಸಂಭಾವನೆಗೆ ಬೇಡಿಕೆ ಇಡುತ್ತಾರೆ. ಅವರು ಅಷ್ಟೇ ಜನರನ್ನು ಥಿಯೇಟರ್ಗೆ ಕರೆತರುವ ಶಕ್ತಿ ಹೊಂದಿದ್ದಾರೆ. ಆದರೆ, ಈಗ ಕಡಿಮೆ ಸಂಭಾವನೆ ಪಡೆದು ಆ ಬಳಿಕ ಬಂದ ಲಾಭದಲ್ಲಿ ಷೇರು ಪಡೆಯುತ್ತಾ ಇದ್ದಾರೆ. ಸಿನಿಮಾ ಒಳ್ಳೆಯ ಗಳಿಕೆ ಮಾಡಿದರೆ ಅವರಿಗೆ ಲಾಭ ಜಾಸ್ತಿ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಬಾಲಿವುಡ್ ಬಳಿಕ ತಮಿಳು ಸಿನಿಮಾರಂಗದ ಬಗ್ಗೆ ಅನುರಾಗ್ ಟೀಕೆ
ಮುಂದಿನ ದಿನಗಳಲ್ಲಿ ಈ ರೀತಿಯ ಆಯ್ಕೆಗೆ ಹೀರೋಗಳು ಹೆಚ್ಚು ಆಸಕ್ತಿ ತೋರಿಸುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ. ಹೀಗಾದಲ್ಲಿ ನಿರ್ಮಾಪಕರಿಗೆ ಕೊಂಚ ಹೊರೆ ಕಡಿಮೆ ಆಗಬಹುದು ಎಂಬುದು ಅವರ ಅಭಿಪ್ರಾಯ. ಏಕೆಂದರೆ ಓರ್ವ ಹೀರೋ ಕಡಿಮೆ ಸಂಭಾವನೆ ಪಡೆದರೆ ನಿರ್ಮಾಪಕರಿಗೆ ಲಾಭ. ಒಂದೊಮ್ಮೆ ಸಿನಿಮಾ ಹಿಟ್ ಆದರೆ ಅದರಲ್ಲಿ ಷೇರು ಕೊಡಲು ಯಾವುದೇ ತೊಂದರೆ ಇಲ್ಲ. ಆದರೆ, ಸಿನಿಮಾ ಹಿಟ್ ಆಗದೇ ಇದ್ದರೆ ಷೇರು ಕೊಡುವ ವಿವಚಾರವೇ ಬರೋದಿಲ್ಲ.
ಅಕ್ಷಯ್ ಕುಮಾರ್ ಅವರು ಸದ್ಯ ಇದೇ ತಂತ್ರವನ್ನು ಉಪಯೋಗಿಸುತ್ತಿದ್ದಾರೆ. ಅವರ ಸಿನಿಮಾಗಳು ಸಾಲು ಸಾಲು ಸೋಲುತ್ತಿವೆ. ಈ ಸಂದರ್ಭದಲ್ಲಿ ಅವರು ಸಿನಿಮಾ ಗೆದ್ದರೆ ಮಾತ್ರ ಹಣ ನೀಡಿ ಎನ್ನುವ ಬೇಡಿಕೆ ಇಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



