AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಎಲ್ಲಿಯೂ, ಏನೂ ಇಲ್ಲ’; ದೇಹದ ಬಗ್ಗೆ ಬಂದ ಟೀಕೆ ಬಗ್ಗೆ ನೇರವಾಗಿ ಹೇಳಿದ್ದ ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಟೀಕೆ ಮತ್ತು ಬಾಡಿ ಶೇಮ್ ಬಗ್ಗೆ ತೆರೆದಿಟ್ಟಿದ್ದಾರೆ. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ನಂತರ ಅವರ ಸಿನಿಮಾಗಳು ಯಶಸ್ಸು ಕಾಣದಿರುವುದು ಮತ್ತು ಅವರ ದೇಹದ ಬಗ್ಗೆ ನಡೆದ ಟೀಕೆಗಳಿಂದ ಅವರು ಬಳಲುತ್ತಿದ್ದಾರೆ.

‘ನಿಮಗೆ ಎಲ್ಲಿಯೂ, ಏನೂ ಇಲ್ಲ’; ದೇಹದ ಬಗ್ಗೆ ಬಂದ ಟೀಕೆ ಬಗ್ಗೆ ನೇರವಾಗಿ ಹೇಳಿದ್ದ ಅನನ್ಯಾ ಪಾಂಡೆ
ಅನನ್ಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 17, 2025 | 8:05 AM

Share

ನಟಿ ಅನನ್ಯಾ ಪಾಂಡೆ (Ananya Pandey) ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನಟ ಚಂಕಿ ಪಾಂಡೆ ಮಗಳು ಎಂಬ ಕಾರಣಕ್ಕೆ ಅವರಿಗೆ ಸುಲಭದಲ್ಲಿ ಅವಕಾಶಗಳು ದೊರೆತವು. ಆದರೆ, ಯಶಸ್ಸು ಮಾತ್ರ ಅವರಿಗೆ ಸಿಕ್ಕೇ ಇಲ್ಲ ಅನ್ನೋದು ಬೇಸರದ ವಿಚಾರ. ಈ ಮಧ್ಯೆ ಅವರ ಹಳೆಯ ಸಂದರ್ಶನದ ಬಗ್ಗೆ ಚರ್ಚೆ ಆಗಿದೆ. ಅನನ್ಯಾ ಅವರ ಬಗ್ಗೆ ಎಲ್ಲರೂ ನಾನಾ ರೀತಿಯ ಕಮೆಂಟ್​ಗಳನ್ನು ಮಾಡುತ್ತಿದ್ದರಂತೆ. ಇದರಿಂದ ಅನನ್ಯಾ ಪಾಂಡೆ ಅವರು ಸಖತ್ ಬೇಸರ ಮಾಡಿಕೊಳ್ಳುತ್ತಿದ್ದರು.

ಅನನ್ಯಾ ಪಾಂಡೆ ಅವರು ‘ಸ್ಟುಡೆಂಟ್ ಆಫ್ ದಿ ಇಯರ್ ಸೀಸನ್ 2’ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ನಟಿಸಿ ಮೊದಲ ಸಿನಿಮಾ ಫ್ಲಾಪ್ ಆಯಿತು. ಮೊದಲ ಸಿನಿಮಾ ನೆಲಕಚ್ಚಿದರೆ ಏನಂತೆ, ಮತ್ತೆ ಸಿನಿಮಾ ಮಾಡಿ ಗೆದ್ದರಾಯಿತು ಬಿಡು ಎಂದು ಅವರು ಅಂದುಕೊಂಡರು. ಆದರೆ, ಅದೃಷ್ಟ ಅವರ ಪರವಾಗಿ ಇರಲಿಲ್ಲ ಎನ್ನಿ.

‘ಪತಿ ಪತ್ನಿ ಔರ್ ವೋ’, ‘ಖಾಲಿ ಪೀಲಿ’, ‘ಗೆಹರಾಯಿಯಾ’ ಹೀಗೆ ಎಲ್ಲಾ ಸಿನಿಮಾಗಳು ಸೋಲೋಕೆ ಆರಂಭ ಆದವು.  ಇತ್ತೀಚೆಗೆ ರಿಲೀಸ್ ಆದ ‘ಕೇಸರಿ ಚಾಪ್ಟರ್ 2’ ಸ್ವಲ್ಪ ಓಕೆ ಎಂಬ ರೀತಿಯಲ್ಲಿ ಪ್ರದರ್ಶನ ಕಂಡಿತು. ಸಾಮಾನ್ಯವಾಗಿ ಸಿನಿಮಾ ಗೆಲುವು ಕಂಡಿಲ್ಲ ಎಂದಾಗ, ಯಶಸ್ಸು ಸಿಕ್ಕಿಲ್ಲ ಎಂದಾಗ ಟ್ರೋಲ್ ಆಗೋದು ಸಾಮಾನ್ಯ. ಅನನ್ಯಾ ಪಾಂಡೆಗೂ ಹಾಗೆಯೇ ಆಗಿತ್ತು.

ಇದನ್ನೂ ಓದಿ
Image
ಅಮಿತಾಭ್​ಗೆ 200 ಜನರಿಂದ ರಕ್ತದಾನ; ಅವರ ಜೀವನವನ್ನೇ ನಾಶ ಮಾಡಿತು ಆ ಘಟನೆ
Image
ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಮಾಡ ಹೊರಟ ರಾಜಮೌಳಿಗೆ ಹಿನ್ನಡೆ
Image
ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈತ್ರಾ ಕುಂದಾಪುರ ತಂದೆ
Image
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?

‘ನನಗೆ 18 ಅಥವಾ 19 ವರ್ಷ ಇರಬಹುದು. ನಾನು ಹೊರಗೆ ಗುರುತಿಸಿಕೊಳ್ಳಲು ಆರಂಭಿಸಿದ್ದೆ. ನಾನು ತೆಳ್ಳಗಿದ್ದೆ. ನನ್ನ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದರು. ನಿಮ್ಮದು ಕೋಳಿ ಕಾಲು, ಬೆಂಕಿ ಕಡ್ಡಿ ರೀತಿ ಕಾಣುತ್ತೀಯಾ, ನಿಮಗೆ ಎದೆ ಭಾಗ, ಹಿಂಭಾಗದಲ್ಲಿ ಏನೂ ಇಲ್ಲ ಎನ್ನುತ್ತಿದ್ದರು’ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 26ನೇ ವಯಸ್ಸಿಗೆ ಅನನ್ಯಾ ಪಾಂಡೆ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?

ಅನನ್ಯಾ ಪಾಂಡೆ ಈಗಲೂ ಟೀಕೆ ಎದುರಿಸುತ್ತಾರೆ. ನೆಪೋ ಕಿಡ್ ಎಂಬ ಕಾರಣಕ್ಕೆ ಅನನ್ಯಾ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದು ಇದೆ. ಅವರ ಬಗ್ಗೆ ಒಂದಲ್ಲಾ ಒಂದು ಟೀಕೆಗಳು ಹೊರ ಬರುತ್ತಲೇ ಇರುತ್ತವೆ. ಅವರು ಈಗ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲು ಎಚ್ಚರಿಕೆ ವಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ