ಭಾವಿ ಮೈದುನನಿಗಾಗಿ ಉಚಿತವಾಗಿ ಕೆಲಸ ಮಾಡಿಕೊಟ್ಟ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಉಚಿತವಾಗಿ ಕ್ಲ್ಯಾಪ್ ಮಾಡುವ ಮೂಲಕ ಬೆಂಬಲ ನೀಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಣ ಪಡೆಯುವ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದರೆ ರಶ್ಮಿಕಾ ಅವರು ಆನಂದ್ ಅವರ ಸಿನಿಮಾಕ್ಕೆ ಉಚಿತವಾಗಿ ಕೆಲಸ ಮಾಡಿದ್ದು ವಿಶೇಷ.

ವಿಜಯ್ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ವಿಚಾರ ಈಗ ಗುಟ್ಟಾಗೇನು ಉಳಿದಿಲ್ಲ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಶೀಘ್ರವೇ ಇವರು ಮದುವೆ ಆಗುತ್ತಾರೆ ಎಂದೂ ಹೇಳಲಾಗುತ್ತಿದೆ. ಹೀಗಿರುವಾಗಲೇ ವಿಜಯ್ ಸಹೋದರ ಆನಂದ್ಗಾಗಿ ರಶ್ಮಿಕಾ ಉಚಿತವಾಗಿ ಒಂದು ಕೆಲಸ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಏನು ಅದು? ಆ ಬಗ್ಗೆ ಇಲ್ಲಿದೆ ವಿವರ.
ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ಯಾವುದೇ ಕೆಲಸವನ್ನು ಉಚಿತವಾಗಿ ಮಾಡಿ ಕೊಡೋದಿಲ್ಲ. ಬೇರೆ ಸಿನಿಮಾ ಪ್ರಮೋಷನ್ ಕೆಲಸಗಳಿಗೆ ಬರಬೇಕು ಎಂದರೆ ಹಣ ಪಡೆಯುತ್ತಾರೆ. ಆದರೆ, ರಶ್ಮಿಕಾ ಅವರು ಆ ರೀತಿ ಮಾಡಿಲ್ಲ. ಆನಂದ್ಗಾಗಿ ಅವರು ಉಚಿತವಾಗಿ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ವರದಿ ಆಗಿದೆ.
‘ಬೇಬಿ’ ಸಿನಿಮಾದಲ್ಲಿ ನಟಿಸಿದ್ದ ಆನಂದ್ ಹಾಗೂ ವೈಷ್ಣವಿ ಚೈತನ್ಯ ಅವರು ಮತ್ತೆ ಲವ್ಸ್ಟೋರಿ ಕಥೆಯ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರಕ್ಕೆ ‘ಪ್ರೊಡಕ್ಷನ್ ನಂಬರ್ 32’ ಎನ್ನುವ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈ ಚಿತ್ರ ಮೇ 15ರಂದು ಲಾಂಚ್ ಆಗಿದೆ. ಮುಹೂರ್ತಕ್ಕೆ ಆಗಮಿಸಿದ ರಶ್ಮಿಕಾ ಅವರು ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ.
And it begins for the MOST RELATABLE LOVE STORY 😍@SitharaEnts Production No. 32 takes off with a pooja ceremony full of love ❤️ & Regular shoot commences this June 🫶🏻
Clap by @iamRashmika Camera Switch On by @ActorSivaji Script handover by #VenkyAtluri & @kalyanshankar23… pic.twitter.com/POVPgdqhco
— Sithara Entertainments (@SitharaEnts) May 15, 2025
ಈ ಚಿತ್ರವನ್ನು ಸಿತಾರಾ ಎಂಟರ್ಟೇನ್ಮೆಂಟ್ ನಿರ್ಮಾಣ ಮಾಡುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಲಾಗಿದೆ. ತಂಡದವರು ರಶ್ಮಿಕಾಗೆ ಧನ್ಯವಾದ ಹೇಳಿದ್ದಾರೆ. ಆನಂದ್ ಇದ್ದಾನೆ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ರಶ್ಮಿಕಾ ಕ್ಲ್ಯಾಪ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ವಿಜಯ್ ದೇವರಕೊಂಡಗೆ ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಹಾಗೂ ಆನಂದ್ ಮಧ್ಯೆಯೂ ಒಳ್ಳೆಯ ಬಾಂಧವ್ಯ ಬೆಳೆದಿದೆ. ವಿಜಯ್ನ ರಶ್ಮಿಕಾ ಮದುವೆ ಆದರೆ ಆಗ ನಟಿಗೆ ಆನಂದ್ ಭಾಮೈದ ಆಗುತ್ತಾರೆ. ಈ ಕಾರಣಕ್ಕೆ ಆನಂದ್ ಅವರ ಅನೇಕ ಸಿನಿಮಾಗಳ ಪ್ರಚಾರ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗಿ ಆಗಿದ್ದರು. ಆದಿತ್ಯ ಹಸನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜನವರಿ 15ರಂದು ಸಿನಿಮಾ ಘೋಷಣೆ ಆಯಿತು. ಈಗ ಚಿತ್ರ ಸೆಟ್ಟೇರಿದೆ. ಹೇಶಮ್ ಅಬ್ದುಲ್ ವಹಾಬ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








