AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ನಟನ ವಿರುದ್ಧ ಕ್ರಿಶ್ಚಿಯನ್ ಸಮುದಾಯ ಆಕ್ರೋಶ, ಬ್ಯಾನ್​ಗೆ ಒತ್ತಾಯ

Single Telugu movie: ತೆಲುಗು ನಟ ಶ್ರೀ ವಿಷ್ಣು ನಟನೆಯ ‘ಸಿಂಗಲ್’ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ತುಸು ವಿವಾದ ಉಂಟಾಗಿತ್ತು. ಆಗ ಶ್ರೀ ವಿಷ್ಣು ಕ್ಷಮೆ ಕೇಳಿದ್ದರು. ಇದೀಗ ಸಿನಿಮಾ ಬಿಡುಗಡೆ ಆಗಿ ಹಿಟ್ ಆದ ಮೇಲೆ ಕ್ರಿಶ್ಚಿಯನ್ ಸಮುದಾಯದ ಕೆಲ ಮುಖಂಡರು ಮತ್ತೆ ವಿವಾದ ಎಬ್ಬಿಸಿದ್ದು ಸಿನಿಮಾದ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ.

ತೆಲುಗು ನಟನ ವಿರುದ್ಧ ಕ್ರಿಶ್ಚಿಯನ್ ಸಮುದಾಯ ಆಕ್ರೋಶ, ಬ್ಯಾನ್​ಗೆ ಒತ್ತಾಯ
Single
ಮಂಜುನಾಥ ಸಿ.
|

Updated on: May 16, 2025 | 3:38 PM

Share

ಇತ್ತೀಚೆಗೆ ‘ಬ್ಯಾನ್’, ‘ಬಾಯ್​ಕಾಟ್’ ಪದಗಳು ಹೆಚ್ಚು ಟ್ರೆಂಡ್​ನಲ್ಲಿವೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಕ್ಕೂ ‘ಬ್ಯಾನ್’, ‘ಬಾಯ್​ಕಾಟ್’ ಪದಗಳು ಕೇಳಿ ಬರುತ್ತಿವೆ. ಅದರಲ್ಲೂ ಸಿನಿಮಾ ವಿಷಯದಲ್ಲಿ ತುಸು ಹೆಚ್ಚಾಗಿಯೇ ಇದೆ. ಬಹುತೇಕ ಸಿನಿಮಾಗಳ ವಿರುದ್ಧ ಬಾಯ್​ಕಾಟ್, ಬ್ಯಾನ್ ಘೋಷಣೆಗಳು ಆಗುತ್ತಲೇ ಇರುತ್ತವೆ. ಬಾಲಿವುಡ್ (Bollywood) ಅಂತೂ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಡುವಷ್ಟು ಸಾಮಾನ್ಯ ಆಗಿಬಿಟ್ಟಿದೆ ಈ ಬ್ಯಾನ್ ಮತ್ತು ಬಾಯ್​ಕಾಟ್. ಇದೀಗ ತೆಲುಗು ನಾಯಕ ನಟನೊಬ್ಬನ ವಿರುದ್ಧ ಕ್ರಿಶ್ಚಿಯನ್ ಸಮುದಾಯದ ಕೆಲವರು ಬ್ಯಾನ್ ಹೇರಲು ಮುಂದಾಗಿದ್ದಾರೆ.

ಹಾಸ್ಯಮಯ ಕೌಟುಂಬಿಕ ಸಿನಿಮಾಗಳನ್ನು ಮಾಡುತ್ತಾ ತಮ್ಮದೇ ಆದ ಅಭಿಮಾನಿ ವರ್ಗವನ್ನೇ ಸೃಷ್ಟಿಸಿಕೊಂಡಿರುವ ನಟ ಶ್ರೀ ವಿಷ್ಣು. ಪ್ರಚಲಿತದಲ್ಲಿರುವ ಮೀಮ್​ಗಳು, ವಿಷಯಗಳನ್ನು ಬಳಸಿಕೊಂಡು ಅವಕ್ಕೆ ಹಾಸ್ಯದ ಲೇಪ ನೀಡಿ ಸಿನಿಮಾಗಳಲ್ಲಿ ಪ್ರಸ್ತುತ ಪಡಿಸುತ್ತಾರೆ. ಭಿನ್ನ ರೀತಿಯ ಹಾಸ್ಯ ಮತ್ತು ಮ್ಯಾನರಿಸಂಗಳ ಮೂಲಕ ಶ್ರೀ ತೇಜ ಯುವಜನತೆಯ ಜೊತೆಗೆ ಕುಟುಂಬ ಪ್ರೇಕ್ಷಕರನ್ನೂ ಸೆಳೆದಿದ್ದಾರೆ. ಇತ್ತೀಚೆಗಷ್ಟೆ ಇವರ ನಟನೆಯ ‘ಸಿಂಗಲ್’ ಸಿನಿಮಾ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ಶ್ರೀ ತೇಜ ವಿರುದ್ಧ ಕ್ರಿಶ್ಚಿಯನ್ ಸಮುದಾಯದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾ ತಂಡದ ಕ್ಷಮೆ ಕೇಳಿದ ನಟ ಶ್ರೀ ವಿಷ್ಣು

ಶ್ರೀ ತೇಜ ನಟನೆಯ ‘ಸಿಂಗಲ್’ ಸಿನಿಮಾನಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ. ಏಸು ಬಗ್ಗೆ ಹಾಸ್ಯ ಮಾಡಲಾಗಿದೆ ಎಂಬ ಕಾರಣ ನೀಡಿ ಸಿನಿಮಾ ಅನ್ನು ನೋಡದಂತೆ ಮನವಿ ಮಾಡಿರುವ ಸಮುದಾಯದ ಮುಖಂಡರು, ಶ್ರೀ ತೇಜ ನಟನೆಯ ಎಲ್ಲ ಸಿನಿಮಾಗಳನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ಶ್ರೀ ತೇಜ ನಟನೆಯ ಈ ಹಿಂದಿನ ಸಿನಿಮಾ ‘ಸ್ವಾಗ್​’ನಲ್ಲಿಯೂ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಅವಹೇಳನ ಮಾಡಿದ್ದರು. ಅವರು ಉದ್ದೇಶಪೂರ್ವಕವಾಗಿ ಕ್ರಿಶ್ಚಿಯನ್ ಸಮುದಾಯವನ್ನು ಗುರಿಇಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಶ್ರೀ ತೇಜ ಅವರ ‘ಸಿಂಗಲ್’ ಸಿನಿಮಾನಲ್ಲಿ ನಟ ವೆನ್ನೆಲ ಕಿಶೋರ್ ನನ್ ರೀತಿ ವೇಷ ಧರಿಸುವ ದೃಶ್ಯವೊಂದಿದೆ ಅದು ಕೆಲ ಕ್ರಿಶ್ಚಿಯನ್ ಸಮುದಾಯದವರಿಗೆ ನೋವುಂಟು ಮಾಡಿದೆಯಂತೆ. ಅಂದಹಾಗೆ ಇದೇ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗಲೂ ವಿವಾದವಾಗಿತ್ತು. ಸಿನಿಮಾನಲ್ಲಿ ನಟ ಮಂಚು ವಿಷ್ಣು ಅವರ ‘ಕಣ್ಣಪ್ಪ’ ಸಿನಿಮಾದ ‘ಶಿವಯ್ಯ’ ಡೈಲಾಗ್ ಅನ್ನು ಬಳಸಲಾಗಿತ್ತು. ಅಲ್ಲದೆ ಅವರ ಕುಟುಂಬದ ಜಗಳದ ಸಂದರ್ಭದಲ್ಲಿ ಮೋಹನ್​ಬಾಬು ಆಡಿದ್ದ ಮಾತೊಂಡನ್ನು ಸಹ ಬಳಸಿಕೊಳ್ಳಲಾಗಿತ್ತು. ಆದರೆ ಆ ಬಗ್ಗೆ ಮಂಚು ವಿಷ್ಣು ಆಕ್ಷೇಪಣೆ ಎತ್ತುತ್ತಿದ್ದಂತೆ ಶ್ರೀ ವಿಷ್ಣು ಆ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಿದ್ದಲ್ಲದೆ, ತಮ್ಮ ಉದ್ದೇಶ ನೋವುಂಟು ಮಾಡುವುದಲ್ಲವೆಂದು ನಗಿಸುವುದು ಮಾತ್ರವೇ ಆಗಿದೆಯೆಂದು ಸ್ಪಷ್ಟನೆ ನೀಡಿದ್ದರು. ಈಗ ಸಿನಿಮಾ ಹಿಟ್ ಆದ ಮೇಲೆ ಕ್ರಿಶ್ಚಿಯನ್ ಸಮುದಾಯದ ಕೆಲವರು ಸಿನಿಮಾ ಬಗ್ಗೆ ಆಕ್ಷೇಪಣೆ ತೆಗೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ