ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ನಟ ದರ್ಶನ್ ಮತ್ತು ನಿರ್ದೇಶಕ ನಾಗಶೇಖರ್ ಅವರ ಮನೆಗಳು ಅಪ್ಪ-ಪಕ್ಕದಲ್ಲೇ ಇವೆ. ಆ ಬಗ್ಗೆ ನಾಗಶೇಖರ್ ಅವರು ಮಾತನಾಡಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಗ್ಗೆ ಮಾತನಾಡುತ್ತಾ ಮನೆ ಕುರಿತು ನಾಗಶೇಖರ್ ಈ ವಿಷಯ ಹಂಚಿಕೊಂಡರು. ಎಂದಿಗೂ ದರ್ಶನ್ ಮನೆಗೆ ತಾವು ಹೋಗಿಲ್ಲ ಎಂದಿದ್ದಾರೆ ನಾಗಶೇಖರ್.
ನಿರ್ದೇಶಕ ನಾಗಶೇಖರ್ ಮತ್ತು ನಟ ದರ್ಶನ್ (Darshan) ಅವರ ಮನೆಗಳು ಅಪ್ಪ-ಪಕ್ಕದಲ್ಲೇ ಇವೆ. ಆ ಬಗ್ಗೆ ನಾಗಶೇಖರ್ ಅವರು ಮಾತನಾಡಿದ್ದಾರೆ. ‘ಅಕ್ಕ-ಪಕ್ಕ ಇದ್ದೇವೆ. ಆದರೆ ನಾವು ಎಂದಿಗೂ ಭೇಟಿ ಮಾಡಿಲ್ಲ. ಇಡೀ ರಸ್ತೆಯಲ್ಲಿ ನಾನು ಯಾರಿಗೂ ಫೋಟೋ ಕೊಡಲ್ಲ. ಇಲ್ಲಿ ಒಂದೇ ಟೈಗರ್, ಅದು ದರ್ಶನ್ ಸರ್. ಅವರೇ ಸ್ಟಾರ್. ಇಂದಿನವರೆಗೂ ನಾನು ಅವರ ಮನೆಗೆ ಹೋಗಿಲ್ಲ. ಅವರು ನಮ್ಮ ಮನೆಗೆ ಬಂದಿಲ್ಲ. ನಾವು ಈ ರಸ್ತೆಯಲ್ಲಿ ಒಟ್ಟಿಗೆ ಸಿಕ್ಕೇ ಇಲ್ಲ. ಅವರ ಪಾಡಿಗೆ ಅವರು ಇರುತ್ತಾರೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ನಾನು ಹೆಚ್ಚಾಗಿ ಮನೆಯಲ್ಲಿ ಇರುವುದೇ ಇಲ್ಲ’ ಎಂದು ನಾಗಶೇಖರ್ (Nagashekar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.