Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Update: ಸರ್ಕಾರೇತರ ಸಂಘ ಸಂಸ್ಥೆಗಳಿಗೂ ಆಧಾರ್ ದೃಢೀಕರಣ ಅವಕಾಶ: ಸರ್ಕಾರ ಪ್ರಸ್ತಾವ

Aadhaar Authentication Rule: ಸದ್ಯ, ಸರ್ಕಾರದ ಸಚಿವಾಲಗಳು ಮತ್ತು ಇಲಾಖೆಗಳು ಮಾತ್ರ ಆಧಾರ್ ಅಥೆಂಟಿಕೇಷನ್ ಮಾಡಲು ಅವಕಾಶ ಇದೆ. ಸರ್ಕಾರದ ಪ್ರಸ್ತಾವ ಜಾರಿಯಾದರೆ ಬೇರೆ ಖಾಸಗಿ ಸಂಘ ಸಂಸ್ಥೆಗಳೂ ಅನುಮತಿ ಮೇರೆಗೆ ಆಧಾರ್ ಅಥೆಂಟಿಕೇಶನ್ ಕೈಗೊಳ್ಳುವ ಅವಕಾಶ ಪಡೆಯಲಿವೆ.

Aadhaar Update: ಸರ್ಕಾರೇತರ ಸಂಘ ಸಂಸ್ಥೆಗಳಿಗೂ ಆಧಾರ್ ದೃಢೀಕರಣ ಅವಕಾಶ: ಸರ್ಕಾರ ಪ್ರಸ್ತಾವ
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 21, 2023 | 3:42 PM

ನವದೆಹಲಿ: ಆಧಾರ್ ಕಾರ್ಡ್​ನ ಬಯೋಮೆಟ್ರಿಕ್ (Biometric) ಇತ್ಯಾದಿ ಮಾಹಿತಿಯನ್ನು ದೃಢೀಕರಣ ಪಡೆಯುವ ಅವಕಾಶವನ್ನು ಸರ್ಕಾರೇತರ ಸಂಘ ಸಂಸ್ಥೆಗಳಿಗೂ (Non Government Entities) ನೀಡುವ ಪ್ರಸ್ತಾವವೊಂದನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮುಂದಿಟ್ಟಿದೆ. ಜನಜೀವನ ಇನ್ನಷ್ಟು ಸುಗಮಗೊಳಿಸಲು ಮತ್ತು ಆಧಾರ್ ಯೋಜನೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿ. ಸದ್ಯ, ಸರ್ಕಾರದ ಸಚಿವಾಲಗಳು ಮತ್ತು ಇಲಾಖೆಗಳು ಮಾತ್ರ ಆಧಾರ್ ಅಥೆಂಟಿಕೇಷನ್ (Aadhaar Authentication) ಮಾಡಲು ಅವಕಾಶ ಇದೆ. ಸರ್ಕಾರದ ಪ್ರಸ್ತಾವ ಜಾರಿಯಾದರೆ ಬೇರೆ ಖಾಸಗಿ ಸಂಘ ಸಂಸ್ಥೆಗಳೂ ಆಧಾರ್ ಅಥೆಂಟಿಕೇಶನ್ ಕೈಗೊಳ್ಳುವ ಅವಕಾಶ ಪಡೆಯಲಿವೆ.

2016ರ ಆಧಾರ್ ಕಾಯ್ದೆಗೆ (ಹಣಕಾಸು ಮತ್ತಿತರ ಸಬ್ಸಿಡಿ, ಅನುಕೂಲ ಮತ್ತು ಸೇವೆಗಳು) 2019ರಲ್ಲಿ ತಿದ್ದುಪಡಿ ತರಲಾಗಿದೆ. ಗೌಪ್ಯತೆ ಮತ್ತು ಸುರಕ್ಷತೆಯ ವಿಷಯದಲ್ಲಿ ಯುಐಡಿಎಐಗೆ ತೃಪ್ತಿಕರ ಎನಿಸಿದರೆ, ಮತ್ತು ಕಾನೂನು ಪ್ರಕಾರ ಆಧಾರ್ ದೃಢೀಕರಣ ಸೇವೆಗೆ ಅನುಮತಿ ಇದ್ದರೆ ಅಥವಾ ನಿರ್ದಿಷ್ಟ ಉದ್ದೇಶಕ್ಕೆ ದಢೀಕರಣಕ್ಕೆ ಕೋರಲಾಗಿದ್ದರೆ, ಆ ಸಂಸ್ಥೆಗೆ ಆಧಾರ್ ಅಥೆಂಟಿಕೇಶನ್ ಕೈಗೊಳ್ಳಲು ಅವಕಾಶ ಕೊಡಲು ಈ ಆಧಾರ್ ಕಾಯ್ದೆಗೆ 2019ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಈ ವಿಚಾರವನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ.

ಇದನ್ನೂ ಓದಿBlue Aadhaar Card: ನೀಲಿ ಬಣ್ಣದ ಆಧಾರ್ ಕಾರ್ಡ್; ಯಾಕೆ ಬೇಕು, ಹೇಗೆ ಮಾಡಿಸುವುದು?; ವಿವರ ಓದಿ

ಈಗ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವದಲ್ಲೇನಿದೆ?

ಜನಜೀವನ ಸುಗಮಗೊಳಿಸುವ ಉದ್ದೇಶದಿಂದ ಮತ್ತು ವಿವಿಧ ಸೇವೆಗಳು ಸಮರ್ಪಕವಾಗಿ ತಲುಪುವಂತಾಗಲು, ಉತ್ತಮ ಆಡಳಿತ ತರಲು ಡಿಜಿಟಲ್ ಪ್ಲಾಟ್​ಫಾರ್ಮ್​ಗಳ ಬಳಕೆ ಮಾಡಲು, ಸಮಾಜ ಕಲ್ಯಾಣ ಅನುಕೂಲತೆಗಳು ಸೋರಿಕೆಯಾಗದಂತೆ ನಿಯಂತ್ರಿಸಲು, ಜ್ಞಾನ ಪ್ರಸರಣ ಮತ್ತು ನಾವೀನ್ಯತೆ ತರುವ ಉದ್ದೇಶದಿಂದ ಸರ್ಕಾರದ ಸಚಿವಾಲಯ ಅಥವಾ ಇಲಾಖೆಯ ಹೊರತಾದ ಯಾವುದೇ ಸಂಸ್ಥೆಯಾದರೂ ಆಧಾರ್ ಅಥೆಂಟಿಕೇಶನ್ ಬಳಸಲು ಅನುಮತಿ ನೀಡಲಾಗುವುದು ಎಂದು ಸರ್ಕಾರ ತನ್ನ ಹೊಸ ಪ್ರಸ್ತಾಪದಲ್ಲಿ ತಿಳಿಸಿದೆ.

ಈ ಮೇಲೆ ತಿಳಿಸಿದ ಯಾವುದಾದರೂ ಒಂದು ಉದ್ದೇಶಕ್ಕೆ ಆಧಾರ್ ದೃಢೀಕರಣ ಅಗತ್ಯ ಇದೆ ಎನ್ನುವುದನ್ನು ಸಂಸ್ಥೆ ಮನದಟ್ಟು ಮಾಡಬೇಕು. ಇದು ಆಡಳಿತ ವ್ಯವಸ್ಥೆಗೆ ಪೂರಕವಾಗಿದ್ದಿರಬೇಕು. ಈ ಕೋರಿಕೆಯನ್ನು ಸಂಬಂಧಿತ ಕೇಂದ್ರ ಅಥವಾ ರಾಜ್ಯ ಸಚಿವಾಲಯ ಅಥವಾ ಇಲಾಖೆಗೆ ಸಲ್ಲಿಸಬೇಕು ಎಂದೂ ಸರ್ಕಾರ ಈ ಹೊಸ ಪ್ರಸ್ತಾಪಿತ ನಿಯಮದಲ್ಲಿ ಹೇಳಿದೆ.

ಇದನ್ನೂ ಓದಿBest Companies: ಅತ್ಯುತ್ತಮ ಕೆಲಸದ ವಾತಾವರಣ: ಟಿಸಿಎಸ್ ಪ್ರಥಮ; ಬೆಂಗಳೂರಲ್ಲೇ ಹೆಚ್ಚಿವೆ ಬೆಸ್ಟ್ ಕಂಪನಿಗಳು; ಲಿಂಕ್ಡ್​ಇನ್ ರಿಪೋರ್ಟ್

ಆಧಾರ್ ಅಥೆಂಟಿಕೇಷನ್ ಅಂದರೆ ಏನು?

ಆಧಾರ್ ದೃಢೀರಕಣ ಅಥವಾ ಆಧಾರ್ ಅಥೆಂಟಿಕೇಶನ್ ಎಂಬುದು ಆಧಾರ್ ಪ್ರಾಧಿಕಾರದಿಂದ (ಯುಐಡಿಎಐ) ವ್ಯಕ್ತಿಯ ಆಧಾರ್ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಒಂದು ವ್ಯವಸ್ಥೆ. ಅಂದರೆ, ಯಾವುದಾದರೂ ಒಂದು ಸಂಸ್ಥೆ ನಿಮ್ಮ ವೈಯಕ್ತಿಕ ಗುರುತನ್ನು ಖಚಿಪಡಿಸಿಕೊಳ್ಳಲು ಆಧಾರ್ ಅಥೆಂಟಿಕೇಷನ್ ಮಾಡಿಸುವುದಿದ್ದರೆ ಅದು ನಿಮ್ಮ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ ಮಾಹಿತಿ ಹಾಗೂ ನಿಮ್ಮ ವಿಳಾಸದ ಮಾಹಿತಿಯನ್ನು ಯುಐಡಿಎಐಗೆ ಕಳುಹಿಸಿಕೊಡುತ್ತದೆ. ಯುಎಡಿಎಐ ಸಂಸ್ಥೆ ಈ ಮಾಹಿತಿಯನ್ನು ಆಧಾರ್ ಡಾಟಾಬೇಸ್​ನಲ್ಲಿ ಪರಿಶೀಲಿಸಿ, ಸರಿ ಇದ್ದರೆ ದೃಢಪಡಿಸುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ