AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blue Aadhaar Card: ನೀಲಿ ಬಣ್ಣದ ಆಧಾರ್ ಕಾರ್ಡ್; ಯಾಕೆ ಬೇಕು, ಹೇಗೆ ಮಾಡಿಸುವುದು?; ವಿವರ ಓದಿ

Bal Aadhaar Card Details: ಐದು ವರ್ಷದೊಳಗಿನ ಮಕ್ಕಳಿಗೆ ಮಾಡಿಸುವ ಆಧಾರ್ ಕಾರ್ಡ್ ನೀಲಿ ಬಣ್ಣದಾಗಿರುತ್ತದೆ. 5 ವರ್ಷದವರೆಗೂ ಈ ಮಕ್ಕಳ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಇತ್ಯಾದಿ ಬಯೋಮೆಟ್ರಿಕ್ ಮಾಹಿತಿ ಪಡೆಯಲಾಗುವುದಿಲ್ಲ.

Blue Aadhaar Card: ನೀಲಿ ಬಣ್ಣದ ಆಧಾರ್ ಕಾರ್ಡ್; ಯಾಕೆ ಬೇಕು, ಹೇಗೆ ಮಾಡಿಸುವುದು?; ವಿವರ ಓದಿ
ಬ್ಲೂ ಆಧಾರ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 21, 2023 | 1:04 PM

Share

ಬ್ಲೂ ಆಧಾರ್ ಕಾರ್ಡ್ ಬಗ್ಗೆ ನೀವು ಕೇಳಿರಬೇಕು. ಇದು ಬಾಲ ಆಧಾರ್ ಕಾರ್ಡ್ (Bal Aadhaar Card). ಇದೂ ಕೂಡ ಒಂದು ವಿಧದ ಆಧಾರ್ ಕಾರ್ಡ್. 5 ವರ್ಷದೊಳಗಿನ ಮಕ್ಕಳಿಗೆ ಯುಐಡಿಎಐನಿಂದ ಕೊಡಲಾಗುವ ಬಾಲ್ ಆಧಾರ್ ಕಾರ್ಡ್. ಈ ಕಾರ್ಡ್​ನ ಬಣ್ಣ ನೀಲಿಯದ್ದಾದ್ದರಿಂದ ಇದಕ್ಕೆ ಬ್ಲೂ ಆಧಾರ್ ಕಾರ್ಡ್ (Blue Aadhaar Card) ಎಂದೂ ಸಂಬೋಧಿಸುವುದುಂಟು. ಉಚಿತವಾಗಿ ಮಾಡಿಸಬಹುದಾದ ಈ ಬ್ಲೂ ಆಧಾರ್ ಕಾರ್ಡ್​ಗೆ ಮಗುವಿನ ಫಿಂಗರ್ ಪ್ರಿಂಟ್ (Finger Print), ಕಣ್ಣಿನ ಸ್ಕ್ಯಾನ್ (Iris Scan) ಇತ್ಯಾದಿ ಬಯೋಮೆಟ್ರಿಕ್ ಮಾಹಿತಿಯ ಅಗತ್ಯ ಇರುವುದಿಲ್ಲ. ಈ ಮಗುವಿನ ವಯಸ್ಸು 5 ವರ್ಷ ದಾಟಿದ ಬಳಿಕ ಅದರ ಆಧಾರ್ ಕಾರ್ಡ್​ನಲ್ಲಿ ಬಯೋಮೆಟ್ರಿಕ್ ಮಾಹಿತಿ ಸೇರಿಸಬೇಕಾಗುತ್ತದೆ. ಅಂದರೆ ಬಾಲ್ ಆಧಾರ್ ಕಾರ್ಡ್ ಹೊಂದಿರುವ ಮಗು 5 ವರ್ಷ ವಯಸ್ಸು ದಾಟುತ್ತಲೇ ಆಧಾರ್ ಕೇಂದ್ರಕ್ಕೆ ಹೋಗಿ ಅದರ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್​ನ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡಿಸಬೇಕು.

ಬಾಲ್ ಆಧಾರ್ ಕಾರ್ಡ್ ಮಾಡಿಸಲು ದಾಖಲೆಗಳೇನು ಬೇಕು?

ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಮುಖ್ಯವಾಗಿರುವ ಒಂದು ದಾಖಲೆ. 5 ವರ್ಷದೊಳಗಿನ ಮಗುವಿಗೂ ಇದು ಅಗತ್ಯ ಬೀಳಬಹುದು. ಹೀಗಾಗಿ, ಬಹಳ ಮಂದಿ ಈಗ ಮಗು ಒಂದು ವರ್ಷ ತುಂಬುವುದರೊಳಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸುತ್ತಾರೆ.

ಇದನ್ನೂ ಓದಿBest Companies: ಅತ್ಯುತ್ತಮ ಕೆಲಸದ ವಾತಾವರಣ: ಟಿಸಿಎಸ್ ಪ್ರಥಮ; ಬೆಂಗಳೂರಲ್ಲೇ ಹೆಚ್ಚಿವೆ ಬೆಸ್ಟ್ ಕಂಪನಿಗಳು; ಲಿಂಕ್ಡ್​ಇನ್ ರಿಪೋರ್ಟ್

ಬಾಲ್ ಆಧಾರ್ ಕಾರ್ಡ್ ಮಾಡಿಸಬೇಕಾದರೆ ಮಗುವಿನ ಜನನ ಪ್ರಮಾಣಪತ್ರ ನೀಡಬೇಕು. ಮತ್ತು ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಆಧಾರ್ ಕಾರ್ಡ್ ಬೇಕಾಗುತ್ತದೆ. ಬಾಲ್ ಆಧಾರ್ ಕಾರ್ಡ್​ಗೆ ಒಬ್ಬ ಪೋಷಕರ ಆಧಾರ್ ನಂಬರ್ ಅನ್ನು ಲಿಂಕ್ ಮಾಡಲಾಗುತ್ತದೆ.

ಬಾಲ್ ಆಧಾರ್ ಕಾರ್ಡ್ ಹೇಗೆ ಮಾಡಿಸುವುದು?

  • ಯುಐಡಿಎಐನ ಅಧಿಕೃತ ವೆಬ್​ಸೈಟ್ uidai.gov.in ಪ್ರವೇಶಿಸಿ
  • ಇಲ್ಲಿ ಕಾಣುವ ಆಧಾರ್ ಕಾರ್ಡ್ ರಿಜಿಸ್ಟ್ರೇಶನ್ ಎಂಬ ಲಿಂಕ್ ಕ್ಲಿಕ್ ಮಾಡಿ
  • ಮಗುವಿನ ಹೆಸರು, ಪೋಷಕರ ಫೋನ್ ನಂಬರ್, ಇಮೇಲ್ ವಿಳಾಸ ಇತ್ಯಾದಿ ಮಾಹಿತಿ ತುಂಬಿರಿ
  • ಜೊತೆಗೆ ವಾಸಸ್ಥಳ ವಿಳಾಸ, ವಾಸಸ್ಥಳದ ಪ್ರದೇಶ, ಜಿಲ್ಲೆ, ರಾಜ್ಯ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿ ಭರ್ತಿ ಮಾಡಿ.
  • ಫಿಕ್ಸೆಡ್ ಅಪಾಯಿಂಟ್ಮೆಂಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಆಧಾರ್ ಕಾರ್ಡ್​ಗೆ ನೊಂದಣಿ ಮಾಡಲು ನಿಮಗೆ ಬೇಕಾದ ದಿನವನ್ನು ಆಯ್ದುಕೊಳ್ಳಿ
  • ನಿಮ್ಮ ಸ್ಥಳಕ್ಕೆ ಹತ್ತಿರ ಇರುವ ಎನ್​ರೋಲ್ಮೆಂಟ್ ಸೆಂಟರ್ ಅನ್ನು ಬೇಕಾದರೆ ಆರಿಸಿಕೊಳ್ಳಬಹುದು.
  • ನೀವು ಆಯ್ದುಕೊಂಡ ದಿನದಂದು ಆ ಎನ್​ರೋಲ್​ಮೆಂಟ್ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಮಾಡಿಸಬಹುದು.

ಆನ್​ಲೈನ್​ನಲ್ಲಿ ಬೇಡ ಎನ್ನುವುದಾದರೆ ಎನ್​ರೋಲ್​ಮೆಂಟ್ ಕೇಂದ್ರಕ್ಕೆ ಹೋಗಿ ಅಲ್ಲಿ ನೊಂದಣಿ ದಿನಾಂಕವನ್ನು ಮುಂಗಡವಾಗಿ ಪಡೆದು ಬರಬಹುದು.

ಇದನ್ನೂ ಓದಿPAN, Aadhaar: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ದುರ್ಬಳಕೆ ಆಗದೇ ಸುರಕ್ಷಿತವಾಗಿರುವಂತೆ ಏನು ಮಾಡಬೇಕು?

ಬಾಲ್ ಆಧಾರ್ ಕಾರ್ಡ್ ಮುಖ್ಯವಾ?

  • ಬಾಲ್ ಆಧಾರ್ ಕಾರ್ಡ್ ಅಥವಾ ಬ್ಲೂ ಆಧಾರ್ ಕಾರ್ಡ್ ಕೂಡ ಮಗುವಿನ ಐಡಿ ಪ್ರೂಫ್ ಆಗಿರುತ್ತದೆ.
  • ಮಾಮೂಲಿಯ ಆಧಾರ್ ಕಾರ್ಡ್​ನಂತೆ ಬ್ಲೂ ಆಧಾರ್ ಕಾರ್ಡ್ ಕೂಡ 12 ಅಂಕಿಗಳ ಐಡಿ ಸಂಖ್ಯೆ ಹೊಂದಿರುತ್ತದೆ.
  • 5 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಬ್ಲೂ ಆಧಾರ್ ಕಾರ್ಡ್ ಕೊಡಲಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್