ಚಾಮರಾಜನಗರ: ಹೆಂಡತಿ ಕೊಂದ ಪತಿ ಅಮಾಯಕನಂತೆ ನಟಿಸಿದರೂ ಸತ್ಯ ಬಯಲಿಗೆಳೆದ ಚಾಣಾಕ್ಷ ಪೊಲೀಸ್
ಮಹೇಶ್ ತನ್ನ ಹೆಂಡತಿಯ ಮೇಲೆ ವಿಪರೀತ ಅನುಮಾನ ಪಡುತ್ತಿದ್ದ ಅದರೆ ತಾನು ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಎಸ್ ಪಿ ಕವಿತಾ ಹೇಳುತ್ತಾರೆ. ಶುಭಾ ಗರ್ಭಧರಿಸಿರುವ ಸಂಗತಿ ಅವನನ್ನು ವಿಚಲಿತಗೊಳಿಸಿತ್ತಂತೆ, ಅದಕ್ಕೆ ಬೇರೆಯವರು ಕಾರಣವಾಗಿರಬಹುದೆಂಬ ಸಂಶಯ ಕಾಡಲಾರಂಭಿಸಿದ ಬಳಿಕ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ ಎಂದು ಪೊಲೀಸ್ ಆಧಿಕಾರಿ ಹೇಳುತ್ತಾರೆ.
ಚಾಮರಾಜನಗರ, ಜುಲೈ 5: ಚಾಮರಾಜನಗರ ತಾಲೂಕಿನ ಡೊಳ್ಳಿಪುರದಲ್ಲಿ ತನ್ನ ಹೆಂಡತಿಯನ್ನು ಕೊಂದ ಮಹೇಶ್ ಅನುಮಾನ ತನ್ನ ಮೇಲೆ ಬರದಿರಲು ಬುದ್ಧಿವಂತಿಕೆ ಉಪಯೋಗಿಸಿದರೂ ತಾನು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬ ಸಂಗತಿಯನ್ನು ಮರೆತಿದ್ದ. ಜಿಲ್ಲೆಯ ಎಸ್ಪಿ ಬಿಟಿ ಕವಿತಾ (SP BT Kavita) ಹೇಳುವಂತೆ ಜುನ್ 30 ರಂದು ತನ್ನ ಪತ್ನಿ ಶುಭಾಳನ್ನು ಕೊಂದು ಅಮಾಯಕನಂತೆ ನಟಿಸಿದ್ದ ಮಹೇಶ್ ವಿಚಾರಣೆ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಕೆಯನ್ನು ಕೊಲ್ಲುವ ಮೊದಲು ಮಹೇಶ್ ಸಾಲಗಾರರಿಂದ ತಮಗೆ ಜೀವಭಯವಿದೆ ಅಂತ ಒಂದು ಪತ್ರ ಬರೆಸಿದ್ದಾನೆ ಮತ್ತು ಅದನ್ನೇ ಆಕೆಯ ಡೆತ್ನೋಟ್ ಥರ ಬಳಸಿದ್ದಾನೆ.
ಇದನ್ನೂ ಓದಿ: Crime News: ಮಗುವಿನ ಎದುರೇ ಹೆಂಡತಿಯನ್ನು ಕೊಂದು, ಸೂಟ್ಕೇಸ್ನಲ್ಲಿ ಪ್ಯಾಕ್ ಮಾಡಿದ ಗಂಡ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos