Big Rise: ಬೆಂಗಳೂರು, ಹೈದರಾಬಾದ್​ನ ಈ ಪುಟ್ಟ ಮೆಷೀನ್ ಟೂಲ್ ಕಂಪನಿಗೆ ಹಣ ಹಾಕಿದವರೇ ಸಿರಿವಂತರು; 3 ವರ್ಷದಲ್ಲಿ 7 ಪಟ್ಟು ಬೆಳೆದಿದೆ ಷೇರು

Multibagger Stock Lokesh Machines: ಷೇರುಪೇಟೆಯಲ್ಲಿ ಧೂಳೆಬ್ಬಿಸಿರುವ ಕೆಲ ಕಂಪನಿಗಳಲ್ಲಿ ಲೋಕೇಶ್ ಮೆಷೀನ್ಸ್ ಲಿ ಕೂಡ ಒಂದು. ಕಳೆದ 3 ವರ್ಷದಲ್ಲಿ ಈ ಸಂಸ್ಥೆಯ ಷೇರು ಬೆಲೆ 7ಪಟ್ಟಿಗೂ ಹೆಚ್ಚು ಬೆಳೆದುಹೋಗಿದೆ. 15.45 ರೂ ಇದ್ದ ಷೇರುಬೆಲೆ 133.75 ರುಪಾಯಿಗೆ ಉಬ್ಬಿಹೋಗಿದೆ.

Big Rise: ಬೆಂಗಳೂರು, ಹೈದರಾಬಾದ್​ನ ಈ ಪುಟ್ಟ ಮೆಷೀನ್ ಟೂಲ್ ಕಂಪನಿಗೆ ಹಣ ಹಾಕಿದವರೇ ಸಿರಿವಂತರು; 3 ವರ್ಷದಲ್ಲಿ 7 ಪಟ್ಟು ಬೆಳೆದಿದೆ ಷೇರು
ಷೇರುಪೇಟೆ
Follow us
|

Updated on:Apr 26, 2023 | 4:12 PM

ಬೆಂಗಳೂರು: ಷೇರುಗಳ ಮೇಲೆ ಹಣ ಹಾಕುವುದೆಂದರೆ ಎಲ್ಲರಿಗೂ ಮೊದಲು ನೆನಪಾಗುವುದು ದೊಡ್ಡ ದೊಡ್ಡ ಕಂಪನಿಗಳ ಹೆಸರೇ. ಆದರೆ, ಷೇರುಪೇಟೆಯಲ್ಲಿ ಕೆಲವೊಮ್ಮೆ ಬಹುತೇಕರು ಅಂದಾಜು ಕೂಡ ಮಾಡದಿದ್ದ ಲೋ ಪ್ರೊಫೈಲ್ ಕಂಪನಿಯ ಷೇರುಗಳು ಯದ್ವಾತದ್ವ ಬೆಳೆದಿರುತ್ತವೆ. ಅಯ್ಯೋ, ಈ ಷೇರಿಗೆ ನಾನು ಹಣ ಹಾಕಲಿಲ್ಲವಲ್ಲ ಎಂದು ಅವಡುಗಚ್ಚುವಂತಾಗುತ್ತದೆ. ಷೇರುಪೇಟೆಯಲ್ಲಿ ಧೂಳೆಬ್ಬಿಸಿರುವ ಇಂತಹ ಕೆಲ ಕಂಪನಿಗಳಲ್ಲಿ ಲೋಕೇಶ್ ಮೆಷೀನ್ಸ್ ಲಿ (Lokesh Machines Ltd) ಕೂಡ ಒಂದು. ಕಳೆದ 3 ವರ್ಷದಲ್ಲಿ ಈ ಸಂಸ್ಥೆಯ ಷೇರು ಬೆಲೆ 7ಪಟ್ಟಿಗೂ ಹೆಚ್ಚು ಬೆಳೆದುಹೋಗಿದೆ. 2020 ಏಪ್ರಿಲ್ 24ರಂದು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (BSE) ಲೋಕೇಶ್ ಮೆಷಿನ್ಸ್ ಸಂಸ್ಥೆಯ ಒಂದು ಷೇರಿನ ಬೆಲೆ 15.45 ರುಪಾಯಿ ಇತ್ತು. 3 ವರ್ಷಗಳ ನಂತರ, 2023 ಏಪ್ರಿಲ್ 24ಕ್ಕೆ ಇದರ ಷೇರು ಬೆಲೆ 130 ರೂಗಿಂತ ಮೇಲೇರಿ ಹೋಗಿತ್ತು. ಇವತ್ತು ಏಪ್ರಿಲ್ 26ರಂದು ಇದರ ಷೇರು ಬೆಲೆ ಒಂದು ಹಂತದಲ್ಲಿ 133.75ಕ್ಕೆ ಉಬ್ಬಿತ್ತು. ಅಂದರೆ 3 ವರ್ಷದಲ್ಲಿ 7 ಪಟ್ಟು ಹೆಚ್ಚು ಬೆಲೆ ಹೆಚ್ಚಿಸಿಕೊಂಡಿದೆ ಈ ಷೇರು. ಇದೇ ಅವಧಿಯಲ್ಲಿ ಷೇರು ಮಾರುಕಟ್ಟೆ ಶೇ. 92.15ರಷ್ಟು ಬೆಳೆದರೆ, ಲೋಕೇಶ್ ಮೆಷೀನ್ಸ್ ಸಂಸ್ಥೆಯ ಷೇರು ಶೇ. 740ರಷ್ಟು ಬೆಳೆದಿದೆ. ಈ ಮೂಲಕ ಮಲ್ಟಿಬ್ಯಾಗರ್ ಹಣೆಪಟ್ಟಿ ಪಡೆದಿದೆ.

3 ವರ್ಷದಲ್ಲಿ 1 ಲಕ್ಷ ಹಣ ಹಾಕಿದವರಿಗೆ ಎಷ್ಟು ರಿಟರ್ನ್ ಕೊಟ್ಟಿದೆ ಲೋಕೇಶ್ ಮೆಷೀನ್ಸ್ ಷೇರು?

ಲೋಕೇಶ್ ಮೆಷೀನ್ಸ್ ಸಂಸ್ಥೆಯ ಷೇರು 3 ವರ್ಷದಲ್ಲಿ ಶೇ. 740ರಷ್ಟು ಬೆಲೆ ಹೆಚ್ಚಿಸಿಕೊಂಡಿದೆ. 3 ವರ್ಷದ ಹಿಂದೆ ಯಾರಾದರೂ 1 ಲಕ್ಷ ರೂ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ ಇವತ್ತು ಅವರ ಹೂಡಿಕೆಯ ಮೊತ್ತ 8.65 ಲಕ್ಷ ರೂ ಆಗಿರುತ್ತಿತ್ತು. ಅಷ್ಟರ ಮಟ್ಟಿಗೆ ಲೋಕೇಶ್ ಮೆಷೀನ್ಸ್ ಬೆಳವಣಿಗೆ ಸಾಧಿಸಿ, ಹೂಡಿಕೆದಾರರ ಮೊಗದಲ್ಲಿ ಹರ್ಷ ಮೂಡಿಸಿದೆ.

ಇದನ್ನೂ ಓದಿInvestments: ಕೆವಿಪಿ, ಪಿಪಿಎಫ್, ಎಸ್​ಎಸ್​ವೈ ಇತ್ಯಾದಿ ಇತ್ಯಾದಿ… ಯಾವ ಸರ್ಕಾರಿ ಸ್ಕೀಮ್ ನಿಮ್ಮ ಹೂಡಿಕೆಗೆ ಬೆಸ್ಟ್? ಇಲ್ಲಿದೆ ಒಂದು ಹೋಲಿಕೆ

ತಾಂತ್ರಿಕವಾಗಿ ಭರವಸೆ ಮೂಡಿಸುತ್ತದೆ ಲೋಕೇಶ್ ಮೆಷೀನ್ಸ್

ಷೇರುಪೇಟೆಯಲ್ಲಿ ಒಂದು ಕಂಪನಿಯ ಷೇರುಗಳ ತಾಂತ್ರಿಕ ಸಂಗತಿಗಳನ್ನು ಕೆಲವರು ಲೆಕ್ಕ ಹಾಕುತ್ತಾರೆ. ಅದರಂತೆ ಲೋಕೇಶ್ ಮೆಷೀನ್ಸ್​ನ ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್ (ಆರ್​ಎಸ್​ಐ) 59.4 ಇದೆ. ಅಂದರೆ ಇದರ ಬೆಲೆ ಅನಗತ್ಯವಾಗಿ ಏರಿಳಿಕೆ ಕಂಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಇನ್ನು ಇದರ ಬೀಟಾ 0.9 ಇದೆ. ಇದೂ ಕೂಡ ಒಂದು ವರ್ಷದಲ್ಲಿ ಈ ಷೇರು ಅಂತಹ ಕುಸಿತ ಕಾಣುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

ಬೆಂಗಳೂರಿನಲ್ಲಿ ಟೆಕ್ ಆಫೀಸ್ ಹೊಂದಿರುವ ಲೋಕೇಶ್ ಮೆಷೀನ್ಸ್

1983ರಲ್ಲಿ ಆರಂಭವಾದ ಲೋಕೇಶ್ ಮೆಷೀನ್ಸ್ ಸಂಸ್ಥೆ ಹೈದರಾಬಾದ್​ನಲ್ಲಿ ಕಾರ್ಪೊರೇಟ್ ಆಫೀಸ್ ಹೊಂದಿದೆ. ಬೆಂಗಳೂರಿನ ಪೀಣ್ಯದಲ್ಲಿ ಇದರ ಮಾರ್ಕೆಟಿಂಗ್ ಮತ್ತು ಟೆಕ್ ಕಚೇರಿ ಇದೆ. ಜಪಾನ್, ಜರ್ಮನಿ, ನೆದರ್​ಲೆಂಡ್ಸ್, ಇಟಲಿ, ಟರ್ಕಿ, ರಷ್ಯಾ. ಚೀನಾ ಹಾಗೂ ಮಧ್ಯಪ್ರಾಚ್ಯ ದೇಶಗಳಿಗೆ ಇದು ಸಿಎನ್​ಸಿ ಮೆಷಿನ್​ಗಳನ್ನು ರಫ್ತು ಮಾಡುತ್ತದೆ. ಕ್ಯಾಮ್ ಬೋರರ್, ಕ್ರ್ಯಾಂಕ್ ಬೋರರ್, ಫೈನ್ ಬೋರರ್, ಫಿನಿಶ್ ಮಿಲಿಂಗ್ ಮೆಷೀನ್ ಇತ್ಯಾದಿ ಮೆಷೀನ್ ಟೂಲ್​ಗಳನ್ನು ಇದು ತಯಾರಿಸುತ್ತದೆ. ಭಾರತದ ಅಗ್ರಮಾನ್ಯ ಮೆಷೀನ್ ಟೂಲ್ ತಯಾರಕ ಕಂಪನಿಗಳಲ್ಲಿ ಇದೂ ಒಂದು.

ಇದನ್ನೂ ಓದಿHigh Returns: ಸುಳ್ಳಲ್ಲ; 2-4 ವರ್ಷಕ್ಕೆ ಹಣ ಡಬಲ್ ಮಾಡುತ್ತಿರುವ ಮ್ಯೂಚುವಲ್ ಫಂಡ್ ಸ್ಕೀಮ್​ಗಳಿವು; ಶುರುವಾದಾಗಿನಿಂದ ಇವುಗಳ ರಿಟರ್ನ್ಸ್ ಶೇ. 20ಕ್ಕಿಂತ ಕೆಳಗಿಳಿದೇ ಇಲ್ಲ

ಲೋಕೇಶ್ ಮೆಷೀನ್ಸ್ ಸಂಸ್ಥೆಯಲ್ಲಿ 750 ಮಂದಿ ಉದ್ಯೋಗಿಗಳಿದ್ದಾರೆ. ಪರೋಕ್ಷವಾಗಿ 2000 ಮಂದಿಗೆ ಇದು ಉದ್ಯೋಗ ನೀಡಿದೆ. 2007ರಲ್ಲಿ ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಲಿಸ್ಟ್ ಆಗಿರುವ ಲೋಕೇಶ್ ಮೆಷೀನ್ಸ್ ಲಿ ಸಂಸ್ಥೆ ಇತ್ತೀಚಿನ ಕೆಲ ವರ್ಷಗಳಿಂದ ಗಮನಾರ್ಹವಾಗಿ ಪ್ರಗತಿ ಸಾಧಿಸಿದೆ. ಬಿಎಸ್​ಇ ಷೇರುಪೇಟೆಯಲ್ಲಿ ಈ ಕಂಪನಿಯ ಮೌಲ್ಯ ತೀರಾ ದೊಡ್ಡದಿಲ್ಲ. ಇದರ ಮಾರ್ಕೆಟ್ ಕ್ಯಾಪ್ 232.39 ಕೋಟಿ ರೂ ಮಾತ್ರ. ಸಾಮಾನ್ಯ ನಾಗರಿಕರ ಕೈಯಲ್ಲಿ ಸುಮಾರು 56 ಲಕ್ಷ ಷೇರುಗಳಿವೆ. ಅರ್ಧಕ್ಕಿಂತ ಹೆಚ್ಚು ಷೇರುಗಳು ಕಂಪನಿಯ ಸ್ಥಾಪಕರ ಕುಟುಂಬಸದಸ್ಯರು ಮತ್ತು ಪ್ರೊಮೋಟರ್​ಗಳ ಕೈಯಲ್ಲಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Wed, 26 April 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ