Sign In

By signing in or creating an account, you agree with Associated Broadcasting Company's Terms & Conditions and Privacy Policy.

OTT Rate Hike: ಅಮೇಜಾನ್ ಪ್ರೈಮ್ ದರ ಏರಿಕೆ; ಇದರ ಹಿಂದಿದೆಯಾ ಬ್ಯುಸಿನೆಸ್ ತಂತ್ರ? ಇತರ ಒಟಿಟಿಗಳಿಂದಲೂ ಶೀಘ್ರದಲ್ಲೇ ಬೆಲೆ ಏರಿಕೆ ಸಾಧ್ಯತೆ

Amazon Prime Increases Subscription Prices: ಅಮೇಜಾನ್ ಪ್ರೈಮ್ ತನ್ನ ಮಾಸಿಕ ಸಬ್​ಸ್ಕ್ರಿಪ್ಷನ್ ದರವನ್ನು 120 ರೂಗಳಷ್ಟು ಹೆಚ್ಚಿಸಿದೆ. ಹಾಗೆಯೇ, 3 ತಿಂಗಳ ಸಬ್​ಸ್ಕ್ರಿಪ್ಷನ್ ರೇಟ್ 140 ರೂನಷ್ಟು ಹೆಚ್ಚು ಮಾಡಿದೆ. ಅಂದರೆ ಅದರ ಮಾಸಿಕ ದರ 179 ರೂನಿಂದ 299 ರುಪಾಯಿಗೆ ಹೆಚ್ಚಾಗಿದೆ. 3 ತಿಂಗಳ ದರ 459 ರುಪಾಯಿಯಿಂದ 599 ರುಪಾಯಿಗೆ ಹೆಚ್ಚಾಗಿದೆ.

OTT Rate Hike: ಅಮೇಜಾನ್ ಪ್ರೈಮ್ ದರ ಏರಿಕೆ; ಇದರ ಹಿಂದಿದೆಯಾ ಬ್ಯುಸಿನೆಸ್ ತಂತ್ರ? ಇತರ ಒಟಿಟಿಗಳಿಂದಲೂ ಶೀಘ್ರದಲ್ಲೇ ಬೆಲೆ ಏರಿಕೆ ಸಾಧ್ಯತೆ
ಅಮೇಜಾನ್ ಪ್ರೈಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2023 | 6:44 PM

ನವದೆಹಲಿ: ಒಟಿಟಿ ಕಾರ್ಯಕ್ರಮಗಳಿಗೆ ಅಡಿಕ್ಟ್ ಆಗಿರುವ ಜನರಿಗೆ ಆಘಾತದ ಸುದ್ದಿ ಇದು. ವಿಶ್ವದ ಜನಪ್ರಿಯ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಒಂದೆನಿಸಿದ ಅಮೇಜಾನ್ ಪ್ರೈಮ್ (Amazon Prime) ಇದೀಗ ತನ್ನ ಕೆಲ ಸಬ್​ಸ್ಕ್ರಿಪ್ಷನ್ ದರಗಳನ್ನು ಏರಿಸಿದೆ. ಮುಂದಿನ ದಿನಗಳಲ್ಲಿ ಬೇರೆ ಒಟಿಟಿ ಕಂಪನಿಗಳೂ ತಮ್ಮ ಸದಸ್ಯತ್ವ ದರಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಒಟಿಟಿ ಪ್ಲಾಟ್​ಫಾರ್ಮ್​ಗಳಾಗಲೀ, ಟೆಲಿಕಾಂ ಕಂಪನಿಗಳಾಗಲೀ ದೊಡ್ಡ ಮಟ್ಟದಲ್ಲಿ ಬೆಲೆ ಹೆಚ್ಚಳದ ಶಾಕ್ ಅನ್ನು ಗ್ರಾಹಕರಿಗೆ ನೀಡುವುದಿಲ್ಲ. ಆದರೆ, ಅಮೇಜಾನ್ ಪ್ರೈಮ್ ತನ್ನ ಮಾಸಿಕ ಸಬ್​ಸ್ಕ್ರಿಪ್ಷನ್ (Monthly subscription price) ದರವನ್ನು 120 ರೂಗಳಷ್ಟು ಹೆಚ್ಚಿಸಿದೆ. ಹಾಗೆಯೇ, 3 ತಿಂಗಳ ಸಬ್​ಸ್ಕ್ರಿಪ್ಷನ್ ರೇಟ್ 140 ರೂನಷ್ಟು ಹೆಚ್ಚು ಮಾಡಿದೆ. ಅಂದರೆ ಅದರ ಮಾಸಿಕ ದರ 179 ರೂನಿಂದ 299 ರುಪಾಯಿಗೆ ಹೆಚ್ಚಾಗಿದೆ. 3 ತಿಂಗಳ ದರ 459 ರುಪಾಯಿಯಿಂದ 599 ರುಪಾಯಿಗೆ ಹೆಚ್ಚಾಗಿದೆ.

ಅಮೇಜಾನ್ ಪ್ರೈಮ್ ದರ ಏರಿಕೆ ಹಿಂದಿದೆ ಬ್ಯುಸಿನೆಸ್ ಟ್ಯಾಕ್ಟಿಕ್ಸ್

ಅಮೇಜಾನ್ ಪ್ರೈಮ್​ನಲ್ಲಿ ಕೇವಲ ಸಿನಿಮಾ, ಸೀರಿಯಲ್​ಗಳು ಮಾತ್ರ ಇಲ್ಲ. ಪ್ರೈಮ್ ಮ್ಯೂಸಿಕ್ ಸೇರಿದಂತೆ ನಾನಾ ರೀತಿಯ ಸರ್ವಿಸ್ ಮತ್ತು ಆ್ಯಪ್​ಗಳು ಅಮೆಜಾನ್ ಪ್ರೈಮ್​ಗೆ ಜೋಡಿತಗೊಂಡಿವೆ. ಹೀಗಾಗಿ, ಅಮೇಜಾನ್ ಪ್ರೈಮ್​ಗೆ ಹೊಂದಿಕೊಂಡಿರುವ ಜನರು ಅಷ್ಟು ಸುಲಭಕ್ಕೆ ಸಬ್​ಸ್ಕ್ರಿಪ್ಚನ್ ಬಿಡುವುದಿಲ್ಲ.

ಇದನ್ನೂ ಓದಿHigh Returns: ಸುಳ್ಳಲ್ಲ; 2-4 ವರ್ಷಕ್ಕೆ ಹಣ ಡಬಲ್ ಮಾಡುತ್ತಿರುವ ಮ್ಯೂಚುವಲ್ ಫಂಡ್ ಸ್ಕೀಮ್​ಗಳಿವು; ಶುರುವಾದಾಗಿನಿಂದ ಇವುಗಳ ರಿಟರ್ನ್ಸ್ ಶೇ. 20ಕ್ಕಿಂತ ಕೆಳಗಿಳಿದೇ ಇಲ್ಲ

ಇಲ್ಲಿ ಅಮೇಜಾನ್ ದರ ಏರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ಇಲ್ಲಿ ಹೆಚ್ಚಾಗಿರುವುದು ಮಾಸಿಕ ಮತ್ತು ತ್ರೈಮಾಸಿಕ ಸಬ್​ಸ್ಕ್ರಿಪ್ಚನ್ ದರಗಳು ಮಾತ್ರ. ಅದರ ವಾರ್ಷಿಕ ಸಬ್​ಸ್ಕ್ರಿಪ್ಚನ್ 1,400ರೂನಲ್ಲೇ ಮುಂದುವರಿದಿದೆ. ಇದು ಅಮೇಜಾನ್ ಪ್ರೈಮ್ ವೀಕ್ಷಕರನ್ನು ವಾರ್ಷಿಕ ಸಬ್​ಸ್ಕ್ರಿಪ್ಷನ್​ಗೆ ಸೇರುವಂತೆ ಪ್ರೇರೇಪಿಸಬಹುದು ಎಂಬುದು ಸಂಸ್ಥೆಯ ಆಲೋಚನೆ ಇದ್ದಿರಬಹುದು.

ಅಮೇಜಾನ್ ಪ್ರೈಮ್ ಇಲ್ಲಿ ದೀರ್ಘಾವಧಿ ಸಬ್​ಸ್ಕ್ರಿಪ್ಷನ್ ಪ್ಲಾನ್​ಗಳ ಮೇಲೆ ಗಮನ ಹರಿಸುತ್ತಿದೆ. ಅದರ ಅಮೇಜಾನ್ ಪ್ರೈಮ್ ಲೈಟ್​ನ ಒಂದು ವರ್ಷದ ಸಬ್​ಸ್ಕ್ರಿಪ್ಷನ್ ದರ 999 ರೂ ಇದೆ. ತಿಂಗಳಿಗೆ 300 ರೂ ನೀಡುವ ಬದಲು ವರ್ಷಕ್ಕೆ 1,000 ಅಥವಾ 1,500 ರೂ ನೀಡಿದರೆ ಒಂದಿಡೀ ವರ್ಷ ಪ್ರೈಮ್ ಒಟಿಟಿ ನೋಡಬಹುದು.

ಇತರ ಒಟಿಟಿಗಳ ಬೆಲೆಯೂ ಹೆಚ್ಚಲಿದೆಯಾ?

ಈಗಂತೂ ಬಹಳಷ್ಟು ಒಟಿಟಿ ಪ್ಲಾಟ್​ಫಾರ್ಮ್​ಗಳಿವೆ. ಅದರಲ್ಲಿ ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನೀ ಹಾಟ್​ಸ್ಟಾರ್ ಪ್ರಮುಖವಾದವು. ಅತಿಹೆಚ್ಚು ಸಬ್​ಸ್ಕ್ರೈಬರ್ಸ್ ಹೊಂದಿರುವ ನೆಟ್​ಫ್ಲಿಕ್ಸ್ ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಿಸಬಹುದು ಎನ್ನಲಾಗಿದೆ. ನೆಟ್​ಫ್ಲಿಕ್ಸ್ 23 ಕೋಟಿ ವೀಕ್ಷಕರ ಬಳಗ ಹೊಂದಿದೆ. ಅಮೇಜಾನ್ ಪ್ರೈಮ್ ಬಳಿ 20 ಕೋಟಿ ವೀಕ್ಷಕರಿದ್ದಾರೆ. ಡಿಸ್ನಿ ಹಾಟ್​ಸ್ಟಾರ್ ಇಎಸ್​ಪಿಎನ್ ಎರಡೂ ಸೇರಿ 18 ಕೋಟಿ ವೀಕ್ಷಕರಿದ್ದಾರೆ.

ಇದನ್ನೂ ಓದಿDasara: ನೆಟ್​ಫ್ಲಿಕ್ಸ್​ನಲ್ಲಿ ಏಪ್ರಿಲ್​ 27ಕ್ಕೆ ‘ದಸರಾ’; ನಾನಿ, ಕೀರ್ತಿ ಸುರೇಶ್​ ಅಭಿಮಾನಿಗಳಿಗೆ ಹಬ್ಬ

ಏರ್​ಟೆಲ್ ಗ್ರಾಹಕರಿಗೆ ಅನುಕೂಲ

ಏರ್​ಟೆಲ್​ನ ಕೆಲ ಪ್ಲಾನ್​ಗಳನ್ನು ಬಳಸಿದರೆ ಅಮೇಜಾನ್ ಪ್ರೈಮ್ ಸಬ್​ಸ್ಕ್ರಿಪ್ಷನ್ ಉಚಿತವಾಗಿ ಸಿಕ್ಕುತ್ತದೆ. ಈ ನಿಟ್ಟಿನಲ್ಲಿ ಏರ್​ಟೆಲ್ ಮತ್ತು ಅಮೇಜಾನ್ ಮಧ್ಯೆ ಒಪ್ಪಂದ ಕೂಡ ಇದೆ. ಏರ್​ಟೆಲ್​ನ ಕೆಲ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್​ಗಳಲ್ಲಿ ಅದರ ವ್ಯಾಲಿಟಿ ಅವಧಿಯವರೆಗೂ ಅಮೇಜಾನ್ ಪ್ರೈಮ್ ಸಬ್​ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಏರ್​ಟೆಲ್​ನ ಬ್ರಾಡ್​ಬ್ಯಾಂಡ್ ಕನೆಕ್ಷನ್ ಪಡೆದರೆ ಮೊದಲ 12 ತಿಂಗಳು ಅಮೇಜಾನ್ ಪ್ರೈಮ್ ಮೆಂಬರ್​ಶಿಪ್ ಉಚಿತವಾಗಿ ಸಿಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್