AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara: ನೆಟ್​ಫ್ಲಿಕ್ಸ್​ನಲ್ಲಿ ಏಪ್ರಿಲ್​ 27ಕ್ಕೆ ‘ದಸರಾ’; ನಾನಿ, ಕೀರ್ತಿ ಸುರೇಶ್​ ಅಭಿಮಾನಿಗಳಿಗೆ ಹಬ್ಬ

Dasara OTT release Date: ಚಿತ್ರಮಂದಿರದಲ್ಲಿ ಅಬ್ಬರಿಸಿದ ‘ದಸರಾ’ ಸಿನಿಮಾ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ಈಗ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ.

Dasara: ನೆಟ್​ಫ್ಲಿಕ್ಸ್​ನಲ್ಲಿ ಏಪ್ರಿಲ್​ 27ಕ್ಕೆ ‘ದಸರಾ’; ನಾನಿ, ಕೀರ್ತಿ ಸುರೇಶ್​ ಅಭಿಮಾನಿಗಳಿಗೆ ಹಬ್ಬ
ನಾನಿ
Follow us
ಮದನ್​ ಕುಮಾರ್​
|

Updated on:Apr 20, 2023 | 1:12 PM

ಟಾಲಿವುಡ್​ ನಟ ನಾನಿ (Nani) ಅವರು ಸಖತ್​ ಖುಷಿಯಲ್ಲಿದ್ದಾರೆ. ಅವರು ನಟಿಸಿದ ‘ದಸರಾ’ ಸಿನಿಮಾ ಸೂಪರ್​ ಹಿಟ್​ ಆಗಿದ್ದರಿಂದ ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಿತು. ಈ ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈಗ ಮನೆಯಲ್ಲೇ ಕುಳಿತು ‘ದಸರಾ’ (Dasara Movie) ವೀಕ್ಷಿಸುವ ಸಮಯ ಹತ್ತಿರ ಆಗುತ್ತಿದೆ. ಹೌದು, ಶೀಘ್ರದಲ್ಲೇ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಈ ಬಗ್ಗೆ ನೆಟ್​ಫ್ಲಿಕ್ಸ್​ (Netflix) ಮಾಹಿತಿ ಹಂಚಿಕೊಂಡಿದೆ. ಏಪ್ರಿಲ್​ 27ರಂದು ‘ದಸರಾ’ ಸ್ಟ್ರೀಮಿಂಗ್​ ಆರಂಭ ಆಗಲಿದೆ. ಈ ಸಿನಿಮಾದಲ್ಲಿ ನಾನಿ ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್​ ನಟಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ ಮೆಚ್ಚಿಗೆ ಸೂಚಿಸಿದ್ದರು. ರಾಜಮೌಳಿ ಕೂಡ ಫಿದಾ ಆಗಿದ್ದರು.

ಮಾರ್ಚ್ 30ರಂದು ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ದಸರಾ’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕಲೆಕ್ಷನ್ ಸಹ ದಾಟಿತು. ಇದು ನಾನಿ ವೃತ್ತಿ ಜೀವನದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾ.

ಇದನ್ನೂ ಓದಿ
Image
Keethy Suresh: ಕೀರ್ತಿ ಸುರೇಶ್ ಮದುವೆಯಾ? ಚಿತ್ರಗಳು ಏನು ಹೇಳುತ್ತಿವೆ?
Image
Dasara Movie Collection: ನಾಲ್ಕನೇ ದಿನವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ನಾನಿಯ ದಸರಾ
Image
Dasara Movie: ‘ಸೂಪರ್ ಆ್ಯಕ್ಷನ್, ನಾನಿ ನಟನೆಗೆ ಭೇಷ್’; ‘ದಸರಾ’ ಸಿನಿಮಾ ನೋಡಿ ಫ್ಯಾನ್ಸ್ ಖುಷ್
Image
Netflix: 30 ರಾಷ್ಟ್ರಗಳಲ್ಲಿ ಶುಲ್ಕ ತಗ್ಗಿಸಿದ ನೆಟ್​ಫ್ಲಿಕ್ಸ್, ಭಾರತವೂ ಇದೆಯೇ ಪಟ್ಟಿಯಲ್ಲಿ?

Dasara Movie: ‘ಸೂಪರ್ ಆ್ಯಕ್ಷನ್, ನಾನಿ ನಟನೆಗೆ ಭೇಷ್’; ‘ದಸರಾ’ ಸಿನಿಮಾ ನೋಡಿ ಫ್ಯಾನ್ಸ್ ಖುಷ್

‘ದಸರಾ’ ಸಿನಿಮಾದಲ್ಲಿ ನಟ ನಾನಿ ಅವರು ರಗಡ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಈ ಚಿತ್ರದ ಟ್ರೇಲರ್​ ಬಿಡುಗಡೆ ಆದಾಗ ಎಲ್ಲರೂ ‘ಪುಷ್ಪ’ ಸಿನಿಮಾಗೆ ಹೋಲಿಕೆ ಮಾಡಿದರು. ಆದರೆ ಸಿನಿಮಾ ರಿಲೀಸ್​ ಆದಾಗ ಆ ಹೋಲಿಕೆ ಮಾಯವಾಯ್ತು. ಇದು ಬೇರೆಯದೇ ಕಥೆಯನ್ನು ಹೊಂದಿದೆ ಎಂಬುದು ಪ್ರೇಕ್ಷಕರಿಗೆ ತಿಳಿಯಿತು. ಒಂದು ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡ ಬಳಿಕ ಈ ಸಿನಿಮಾ ಶತಕೋಟಿ ರೂಪಾಯಿ ಕ್ಲಬ್​ ಸೇರಿತು.

ನಾನಿ ಅವರು ಟಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅನೇಕ ಒಳ್ಳೆಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ಹಾಗಿದ್ದರೂ ಕೂಡ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಿಕ್ಕಿರಲಿಲ್ಲ. ಈಗ ‘ದಸರಾ’ ಚಿತ್ರದ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ್ದಾರೆ.

ನಿರ್ದೇಶಕರಿಗೆ ಸಿಕ್ಕಿತ್ತು ಬಿಎಂಡಬ್ಲ್ಯೂ ಕಾರ್​:

‘ದಸರಾ’ ನಿರ್ಮಾಪಕ ಸುಧಾಕರ್ ಚೆರಕೂರಿ ಅವರು ಸುಮಾರು 80 ಲಕ್ಷ ರೂಪಾಯಿ ಬೆಲೆಯ ಬಿಎಂಡಬ್ಲ್ಯೂ ಕಾರನ್ನು ‘ದಸರಾ’ ನಿರ್ದೇಶಕ ಶ್ರೀಕಾಂತ್ ಒಡೆಲಾಗೆ ಗಿಫ್ಟ್ ನೀಡಿದ್ದರು. ಪ್ರಮುಖ ತಂತ್ರಜ್ಞರಿಗೆ 10 ಗ್ರಾಂ ಚಿನ್ನದ ಗಟ್ಟಿಯನ್ನು ನೀಡಿದ್ದರು. ಇದರಿಂದ ಚಿತ್ರದ ತಾಂತ್ರಿಕ ವರ್ಗದವರಿಗೆ ಸಖತ್ ಖುಷಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:12 pm, Thu, 20 April 23