AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Netflix: 30 ರಾಷ್ಟ್ರಗಳಲ್ಲಿ ಶುಲ್ಕ ತಗ್ಗಿಸಿದ ನೆಟ್​ಫ್ಲಿಕ್ಸ್, ಭಾರತವೂ ಇದೆಯೇ ಪಟ್ಟಿಯಲ್ಲಿ?

ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೇವೆ ಒದಗಿಸುತ್ತಿರುವ ನೆಟ್​ಫ್ಲಿಕ್ಸ್​ 30 ರಾಷ್ಟ್ರಗಳಲ್ಲಿ ತನ್ನ ಮಾಸಿಕ ಶುಲ್ಕವನ್ನು ಇಳಿಕೆ ಮಾಡಿದೆ. ಶುಲ್ಕ ಇಳಿಸಿರುವ ಜೊತೆಗೆ ಪಾಸ್​ವರ್ಡ್ ಶೇರಿಂಗ್ ಅಥವಾ ಪ್ರೊಫೈಲ್ ಶೇರಿಂಗ್ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಿದೆ.

Netflix: 30 ರಾಷ್ಟ್ರಗಳಲ್ಲಿ ಶುಲ್ಕ ತಗ್ಗಿಸಿದ ನೆಟ್​ಫ್ಲಿಕ್ಸ್, ಭಾರತವೂ ಇದೆಯೇ ಪಟ್ಟಿಯಲ್ಲಿ?
ನೆಟ್​ಫ್ಲಿಕ್ಸ್
ಮಂಜುನಾಥ ಸಿ.
|

Updated on: Feb 25, 2023 | 1:32 PM

Share

ಭಾರತದಲ್ಲಿ ಜನಪ್ರಿಯವಾಗಿರುವ ಬಹುಪಾಲು ಒಟಿಟಿಗಳಲ್ಲಿ (OTT) ದುಬಾರಿ ಒಟಿಟಿ ಫ್ಲಾಟ್​ಪಾರಂ ನೆಟ್​ಫ್ಲಿಕ್ಸ್ (Netflix). ಅಮೆಜಾನ್ ಪ್ರೈಂ (Amazon Prime), ಸೋನಿ ಲಿವ್, ಡಿಸ್ನಿ ಪ್ಲಸ್ ಹಾಟ್​ಸ್ಟಾರ್, ಜೀ5 ಇನ್ನಿತರೆ ಒಟಿಟಿಗಳು ಚಂದಾದಾರರಿಂದ ವಾರ್ಷಿಕ ಶುಲ್ಕ ಪಡೆದರೆ ನೆಟ್​ಫ್ಲಿಕ್ಸ್ ಮಾತ್ರ ದೊಡ್ಡ ಮೊತ್ತದ ಮಾಸಿಕ ಶುಲ್ಕ ಪಡೆಯುತ್ತದೆ. ವಿಶ್ವದಾದ್ಯಂತ ನೆಟ್​ಫ್ಲಿಕ್ಸ್​ನ ಶುಲ್ಕ ನೀತಿ ಹೀಗೆಯೇ ಇದೆ. ಆದರೆ ಇತ್ತೀಚೆಗೆ ಚಂದಾದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿರುವ ನೆಟ್​ಫ್ಲಿಕ್ಸ್ ಇದೀಗ ತನ್ನ ಶುಲ್ಕವನ್ನು ಕಡಿತಗೊಳಿಸಿದೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೇವೆ ಒದಗಿಸುತ್ತಿರುವ ನೆಟ್​ಫ್ಲಿಕ್ಸ್​ 30 ರಾಷ್ಟ್ರಗಳಲ್ಲಿ ತನ್ನ ಮಾಸಿಕ ಶುಲ್ಕವನ್ನು ಇಳಿಕೆ ಮಾಡಿದೆ. ಶುಲ್ಕ ಇಳಿಸಿರುವ ಜೊತೆಗೆ ಪಾಸ್​ವರ್ಡ್ ಶೇರಿಂಗ್ ಅಥವಾ ಪ್ರೊಫೈಲ್ ಶೇರಿಂಗ್ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಿದೆ.

ನೆಟ್​ಫ್ಲಿಕ್ಸ್, ಪ್ರಸ್ತುತ, ಈಜಿಫ್ಟ್, ಎಮನ್, ಜೋರ್ಡನ್, ಲಿಬಿಯಾ, ಇರಾನ್, ಕಿನ್ಯಾ, ಕ್ರೊಯೇಶಿಯಾ, ಸ್ಲೊವೇನಿಯಾ, ಬಲ್ಗೇರಿಯಾ, ಈಕ್ವೆಡಾರ್, ವೆನುಜುವೆಲ್ಲಾ, ಇಂಡೋನೇಶಿಯಾ, ವಿಯೆಟ್ನಾಂ, ಥಾಯ್ಲೆಂಡ್, ಫಿಲಿಫೀನ್ಸ್, ಬೋಸ್ನಿಯಾ, ಮೆಕೆಡೋನಿಯಾ, ಇನ್ನೂ ಕೆಲವು ದೇಶಗಳಲ್ಲಿ ತನ್ನ ಮಾಸಿಕ ಶುಲ್ಕದಲ್ಲಿ ಕಡಿತ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಭಾರತ ಇಲ್ಲ. ಕಳೆದ ವರ್ಷವಷ್ಟೆ ಭಾರತದಲ್ಲಿ ನೆಟ್​ಫ್ಲಿಕ್ಸ್ ತನ್ನ ಮಾಸಿಕ ಶುಲ್ಕದಲ್ಲಿ ಕಡಿತ ಮಾಡಿತ್ತಾದ್ದರಿಂದ ಈಗ ಮತ್ತೊಮ್ಮೆ ಕಡಿತ ಮಾಡುವ ಗೋಜಿಗೆ ಹೋಗಿಲ್ಲ.

Vijay Varma: ನಟಿ ತಮನ್ನಾಗೆ ಹೊಸ ಹೆಸರು ಟೊಮೆಟೊ; ಪ್ರಿಯಕರ ವಿಜಯ್​ ವರ್ಮಾ ಮುದ್ದಾಗಿ ಕರೆಯೋದು ಹೀಗೆ

ಕೆಲವು ರಾಷ್ಟ್ರಗಳಲ್ಲಿ ಹಳೆಯ ದರಕ್ಕಿಂತಲೂ ಶೇ50 ರಷ್ಟು ಕಡಿತವನ್ನು ನೆಟ್​ಫ್ಲಿಕ್ಸ್ ಮಾಡಿದೆ. ಆದರೆ ಕೆಲವು ಕಡೆ ಪಾಸ್​ವರ್ಡ್ ಶೇರಿಂಗ್ ನಿಯಮಗಳಲ್ಲಿ ತುಸು ಬದಲಾವಣೆಯನ್ನು ಮಾಡಿದೆ. ಆದರೆ ಕೆನಡ, ಲ್ಯಾಟಿನ್ ಅಮೆರಿಕ, ಸ್ಪೇನ್, ನ್ಯೂಜಿಲೆಂಡ್, ಪೋರ್ಚುಗಲ್​ಗಳಲ್ಲಿ ಪಾಸ್​ವರ್ಡ್ ಶೇರಿಂಗ್ ಮಿತಿಯನ್ನು ಹೆಚ್ಚಿಸಿದೆ. ಇಲ್ಲಿ ಶುಲ್ಕವನ್ನೂ ಸಹ ತುಸು ಹೆಚ್ಚಿಸಿದೆ.

ಭಾರತದಲ್ಲಿ ಈ ಮೊದಲು ನಾಲ್ಕು ಜನ ನೋಡಬಹುದಾದ ಎಚ್​ಡಿ ಪ್ರೀಮಿಯಂ ಪ್ಲ್ಯಾನ್​ನ ಮಾಸಿಕ ಶುಲ್ಕ 799 ರುಪಾಯಿಗಳಿತ್ತು. ಆದರೆ ಕಳೆದ ವರ್ಷ ಈ ಮೊತ್ತವನ್ನು 649 ರುಪಾಯಿಗಳಿಗೆ ಇಳಿಸಿದೆ ನೆಟ್​ಫ್ಲಿಕ್ಸ್. ಆದರೆ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ಪಾಕಿಸ್ತಾನದಲ್ಲಿ ನೆಟ್​ಫ್ಲಿಕ್ಸ್ ಲಭ್ಯವಿದೆ. ಟರ್ಕಿ ಜನರು ಸಹ ಅತ್ಯಂತ ಕಡಿಮೆ ಬೆಲೆಗೆ ನೆಟ್​ಫ್ಲಿಕ್ಸ್ ವೀಕ್ಷಿಸುತ್ತಾರೆ. ಇನ್ನು ಸಿಂಗಪುರ ಹಾಗೂ ಅಮೆರಿಕದ ಚಂದಾದಾರರಿಂದ ಭಾರಿ ಶುಲ್ಕವನ್ನು ನೆಟ್​ಫ್ಲಿಕ್ಸ್ ಪಡೆಯುತ್ತದೆ. ಅಮೆರಿಕದಲ್ಲಿ ನೆಟ್​ಫ್ಲಿಕ್ಸ್​ನ ಪ್ರೀಮಿಯಂ ಚಂದಾದಾರಿಕೆ ಪಡೆಯಲು ತಿಂಗಳಿಗೆ 19.99 ಡಾಲರ್ ಅಂದರೆ ಭಾರತದ ಲೆಕ್ಕದಲ್ಲಿ 1657 ರುಪಾಯಿ ತೆರಬೇಕಿದೆ.

ಕಳೆದ ತ್ರೈಮಾಸಿಕದಲ್ಲಿ ನೆಟ್​ಫ್ಲಿಕ್ಸ್​ನ ಚಂದಾದಾರರ ಸಂಖ್ಯೆ ಭಾರಿ ಕುಸಿದಿತ್ತು. ಹಲವು ದೇಶಗಳಲ್ಲಿ ಶೇ50 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಚಂದಾದಾರರನ್ನು ನೆಟ್​ಫ್ಲಿಕ್ಸ್ ಕಳೆದುಕೊಂಡಿತ್ತು. ಹಾಗಾಗಿ ಹಲವು ದೇಶಗಳಲ್ಲಿ ಶುಲ್ಕ ಕಡಿತ ಮಾಡುತ್ತಾ ಬರುತ್ತಿದೆ. ಈಗ ಮೂವತ್ತು ದೇಶಗಳಲ್ಲಿ ಶುಲ್ಕ ಮಾಡಿರುವ ನೆಟ್​ಫ್ಲಿಕ್ಸ್ ಇನ್ನೂ ನೂರು ದೇಶಗಳಲ್ಲಿ ಶುಲ್ಕ ಕಡಿತ ಮಾಡವ ಗುರಿ ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು