OTT Movies This Week: ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ

Varisu | Waltair Veerayya: ಚಿರಂಜೀವಿಯ ‘ವಾಲ್ತೇರು ವೀರಯ್ಯ’, ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’, ವಿಜಯ್ ನಟನೆಯ ‘ವಾರಿಸು’ ಇನ್ನಿತರ ಸಿನಿಮಾಗಳು ಈ ವಾರ ಒಟಿಟಿಗೆ ಬರುತ್ತಿವೆ.

OTT Movies This Week: ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ
ದಳಪತಿ ವಿಜಯ್​, ಚಿರಂಜೀವಿ, ಬಾಲಯ್ಯ
Follow us
ಮದನ್​ ಕುಮಾರ್​
|

Updated on: Feb 22, 2023 | 6:46 PM

ಚಿತ್ರಮಂದಿರಗಳಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಾ ಗಟ್ಟಿನೆಲೆ ಕಂಡುಕೊಳ್ಳುತ್ತಿರುವ ಒಟಿಟಿ (OTT) ಸಂಸ್ಥೆಗಳು ಪ್ರೇಕ್ಷಕನಿಗೆ ಮನರಂಜನೆಯನ್ನು, ಸಿನಿಮಾ ರಂಗಕ್ಕೆ ಹೊಸದೊಂದು ಮಾರುಕಟ್ಟೆ ಅವಕಾಶವನ್ನು ಏಕಕಾಲದಲ್ಲಿ ಕಲ್ಪಿಸಿವೆ. ಪ್ರತಿ ಶುಕ್ರವಾರ ಯಾವ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿವೆ ಎಂದು ಸಿನಿ ಪ್ರೇಮಿಗಳು ಗಮನಿಸುವಂತೆಯೇ, ಈ ವಾರ ಒಟಿಟಿಗೆ ಯಾವ ಸಿನಿಮಾಗಳು ಬರುತ್ತಿವೆ ಎಂದೂ ಸಹ ಗಮನಿಸುತ್ತಿದ್ದಾರೆ. ಅಂತೆಯೇ ಈ ವಾರವೂ ಸಿನಿ ಪ್ರೇಮಿಗಳಿಗೆ ನಿರಾಸೆ ಮೂಡಿಸದ ಒಟಿಟಿ, ಕೆಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಸ್ಟ್ರೀಮ್ ಮಾಡಲು ಸಿದ್ಧವಾಗಿದ್ದು, ಅದರಲ್ಲಿಯೂ ಈ ವಾರ ದಕ್ಷಿಣ ಭಾರತದ ಕೆಲವು ದೊಡ್ಡ ನಟರ ಹಿಟ್ ಸಿನಿಮಾಗಳು ವೀಕ್ಷಣೆಗೆ ಲಭ್ಯವಾಗುತ್ತಿವೆ. ಚಿರಂಜೀವಿಯ ‘ವಾಲ್ತೇರು ವೀರಯ್ಯ’ (Waltair Veerayya), ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’, ದಳಪತಿ ವಿಜಯ್ ನಟನೆಯ ‘ವಾರಿಸು’ (Varisu) ಇನ್ನಿತರ ಸಿನಿಮಾಗಳು ಈ ವಾರ ಒಟಿಟಿಗೆ ಬರುತ್ತಿವೆ.

ವಾಲ್ತೇರು ವೀರಯ್ಯ

ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಅಬ್ಬರಿಸಿದ್ದ ಮೆಗಾಸ್ಟಾರ್ ಚಿರಂಜೀವಿ (Chiranjeevi) ನಟನೆಯ ‘ವಾಲ್ತೇರು ವೀರಯ್ಯ’ ಸಿನಿಮಾ ಫೆಬ್ರವರಿ 27 ರಂದು ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದರು, ಮಾಸ್ ಮಹಾರಾಜ ರವಿತೇಜ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಒಟಿಟಿಯಲ್ಲಿ ಪ್ರಸಾರವಾಗಲಿದೆ ಹನ್ಸಿಕಾ ಮದುವೆ ಝಲಕ್; ಫಸ್ಟ್ ಪೋಸ್ಟರ್ ರಿಲೀಸ್​ 

ಇದನ್ನೂ ಓದಿ
Image
Bhool Bhulaiyaa 2: ಒಟಿಟಿಗೆ ಬರ್ತಿದೆ ‘ಭೂಲ್​ ಭುಲಯ್ಯ 2’; ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ಗೆ ಸಿಹಿ ಸುದ್ದಿ​ ನೀಡಿದ ನೆಟ್​ಫ್ಲಿಕ್ಸ್​
Image
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
Image
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ವೀರ ಸಿಂಹ ರೆಡ್ಡಿ

ನಂದಮೂರಿ ಬಾಲಕೃಷ್ಣ ನಟಿಸಿರುವ ‘ವೀರ ಸಿಂಹ ರೆಡ್ಡಿ’ ಸಿನಿಮಾ ಸಹ ಇದೇ ವಾರ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಚಿರಂಜೀವಿಯ ‘ವಾಲ್ತೇರು ವೀರಯ್ಯ’ಗೆ ಎದುರಾಗಿ ಜನವರಿ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಇದೀಗ ಫೆಬ್ರವರಿ 23 ರಂದು ‘ಡಿಸ್ನಿ ಹಾಟ್ ಸ್ಟಾರ್’ನಲ್ಲಿ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿಯೂ ಶ್ರುತಿ ಹಾಸನ್ ಅವರೇ ನಾಯಕಿ. ಕನ್ನಡ ಚಿತ್ರರಂಗದ ದುನಿಯಾ ವಿಜಯ್ ವಿಲನ್.

ಇದನ್ನೂ ಓದಿ: Veera Simha Reddy Review: ಬಾಲಯ್ಯ ಸಿನಿಮಾದಲ್ಲಿ ಅಲ್ಪ ಸ್ವಲ್ಪ ಎಮೋಷನ್​; ಮಿಕ್ಕಿದ್ದೆಲ್ಲವೂ ಆ್ಯಕ್ಷನ್​

ವಾರಿಸು

ಬಿಡುಗಡೆ ಸಮಯದಲ್ಲಿ ಭಾರಿ ಹವಾ ಎಬ್ಬಿಸಿದ್ದ ತಮಿಳು ನಟ ವಿಜಯ್ ಅವರ ಇತ್ತೀಚೆಗಿನ ಸಿನಿಮಾ ‘ವಾರಿಸು’ ಸಹ ಇದೇ ವಾರ ಒಟಿಟಿಗೆ ಬರುತ್ತಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಜನವರಿ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಈ ಸಿನಿಮಾವು ಇಂದೇ ಅಂದರೆ ಫೆಬ್ರವರಿ 22ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಕಂಡಿದೆ.

ಇದನ್ನೂ ಓದಿ: ‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ

ಮೈಖಲ್

ಯುವನಟ ಸಂದೀಪ್ ಕೃಷ್ಣನ್ ನಟಿಸಿದ್ದ ‘ಮೈಖಲ್’ ಸಿನಿಮಾ ಸಹ ಇದೇ ವಾರ ಒಟಿಟಿಗೆ ಲಗ್ಗೆ ಇಟ್ಟಿದೆ. ಭಾರಿ ನಿರೀಕ್ಷೆ ಮೂಡಿಸಿ ಫೆಬ್ರವರಿ 03ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ತಮಿಳು ಸಿನಿಮಾ ಹೆಚ್ಚೇನೂ ಗಮನ ಸೆಳೆಯದೆ ಕೇವಲ ಎರಡು ವಾರಕ್ಕೆ ಒಟಿಟಿಗೆ ಬಂದಿದೆ. ಈ ಸಿನಿಮಾವು ‘ಆಹಾ’ ಒಟಿಟಿಯಲ್ಲಿ ಫೆಬ್ರವರಿ 24ರಿಂದ ಸ್ಟ್ರೀಂ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ