Veera Simha Reddy Review: ಬಾಲಯ್ಯ ಸಿನಿಮಾದಲ್ಲಿ ಅಲ್ಪ ಸ್ವಲ್ಪ ಎಮೋಷನ್​; ಮಿಕ್ಕಿದ್ದೆಲ್ಲವೂ ಆ್ಯಕ್ಷನ್​

Nandamuri Balakrishna | Duniya Vijay: ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರ ಇಂದು (ಜ.12) ಬಿಡುಗಡೆ ಆಗಿದೆ. ದುನಿಯಾ ವಿಜಯ್​ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

Veera Simha Reddy Review: ಬಾಲಯ್ಯ ಸಿನಿಮಾದಲ್ಲಿ ಅಲ್ಪ ಸ್ವಲ್ಪ ಎಮೋಷನ್​; ಮಿಕ್ಕಿದ್ದೆಲ್ಲವೂ ಆ್ಯಕ್ಷನ್​
ನಂದಮೂರಿ ಬಾಲಕೃಷ್ಣ, ದುನಿಯಾ ವಿಜಯ್
Follow us
|

Updated on:Jan 12, 2023 | 11:32 AM

ಚಿತ್ರ: ವೀರ ಸಿಂಹ ರೆಡ್ಡಿ

ನಿರ್ಮಾಣ: ಮೈತ್ರಿ ಮೂವೀ ಮೇಕರ್ಸ್​

ನಿರ್ದೇಶನ: ಗೋಪಿಚಂದ್​ ಮಲಿನೇನಿ

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ನಂದಮೂರಿ ಬಾಲಕೃಷ್ಣ, ದುನಿಯಾ ವಿಜಯ್​, ವರಲಕ್ಷ್ಮೀ ಶರತ್​ ಕುಮಾರ್​, ಶ್ರುತಿ ಹಾಸನ್​ ಮುಂತಾದವರು.

ಸ್ಟಾರ್​: 3/5

ಸಂಕ್ರಾಂತಿ ಹಬ್ಬದ ಪ್ರಯುಕ್ತ ಅನೇಕ ಸಿನಿಮಾಗಳು ಬಿಡುಗಡೆ ಆಗಿವೆ. ಸ್ಟಾರ್​ ನಟರ ಚಿತ್ರಗಳ ನಡುವೆ ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ಏರ್ಪಟ್ಟಿದೆ. ಟಾಲಿವುಡ್​ನಲ್ಲಿ ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಗಳು ‘ವೀರ ಸಿಂಹ ರೆಡ್ಡಿ’ ಚಿತ್ರಕ್ಕಾಗಿ ಕಾದಿದ್ದರು. ಅವರಿಗೆ ಸಂಕ್ರಾಂತಿಯ ಗಿಫ್ಟ್​ ರೀತಿಯಲ್ಲಿ ಈ ಸಿನಿಮಾ ತೆರೆಕಂಡಿದೆ. ಬಾಲಯ್ಯ ಅವರ ಸಿನಿಮಾಗಳಿಗೆ ಪ್ರತ್ಯೇಕವಾದ ಅಭಿಮಾನಿ ಬಳಗ ಇದೆ. ಅಂಥವರಿಗಾಗಿ ಹೇಳಿ ಮಾಡಿಸಿದಂತೆ ‘ವೀರ ಸಿಂಹ ರೆಡ್ಡಿ’ ಸಿನಿಮಾ. ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ಇರಬಹುದಾದ ಎಲ್ಲ ಕಮರ್ಷಿಯಲ್​ ಅಂಶಗಳು ಕೂಡ ಈ ಚಿತ್ರದಲ್ಲಿ ಇವೆ. ಕನ್ನಡದ ನಟ ದುನಿಯಾ ವಿಜಯ್​ ಅವರು ಈ ಸಿನಿಮಾದಲ್ಲಿ ವಿಲನ್​ ಆಗಿ ನಟಿಸುವ ಮೂಲಕ ಟಾಲಿವುಡ್​ಗೆ ಕಾಲಿಟ್ಟಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ..

ಬಾಲಯ್ಯ ಶೈಲಿಯ ಸಿನಿಮಾ:

ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ವೈಭವೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅದರಲ್ಲೂ ಫೈಟಿಂಗ್ ದೃಶ್ಯಗಳು ಕೊಂಚ ಅತಿರೇಕ ಎಂಬಂತೆ ಇರುತ್ತವೆ. ಮಾಸ್​ ಡೈಲಾಗ್​ ಕೂಡ ಜೋರಾಗಿ ಇರುತ್ತದೆ. ಇದನ್ನೆಲ್ಲ ಅವರ ಅಪ್ಪಟ ಅಭಿಮಾನಿಗಳು ಇಷ್ಟಪಡುತ್ತಾರೆ. ಅಂತಹ ಎಲ್ಲ ಮಾಸ್​ ಅಂಶಗಳು ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ರಿಪೀಟ್​ ಆಗಿವೆ. ಹಾಗಾಗಿ ಬಾಲಯ್ಯ ಶೈಲಿಯ ಸಿನಿಮಾಗಳನ್ನು ಇಷ್ಟಪಡುವ ಮಂದಿಗೆ ಈ ಚಿತ್ರ ಹಿಡಿಸುತ್ತದೆ.

ಇದನ್ನೂ ಓದಿ: Vedha Review: ಉಪದೇಶ ಮಾಡೋದರ ಜೊತೆಗೆ ಹೆಣ್ಮಕ್ಕಳ ಕೈಗೆ ಆಯುಧ ನೀಡಿದ ‘ವೇದ’

‘ವೀರ ಸಿಂಹ ರೆಡ್ಡಿ’ ಕಥೆ ಏನು?

ಹತ್ತಾರು ಊರಿಗೆ, ಸಾವಿರಾರು ಕುಟುಂಬಗಳಿಗೆ ಯಜಮಾನನ ರೀತಿ ಬದುಕುತ್ತಿರುವ ವೀರ ಸಿಂಹ ರೆಡ್ಡಿ (ನಂದಮೂರಿ ಬಾಲಕೃಷ್ಣ) ತನ್ನ ಮಗ ಮತ್ತು ಪತ್ನಿಯಿಂದ ದೂರ ಇದ್ದಾನೆ. ತಂಗಿ ಕೂಡ ಈತನನ್ನು ಬಿಟ್ಟು ಖಳನಾಯಕರ ಬಳಗ ಸೇರಿಕೊಂಡಿದ್ದಾಳೆ. ಈತನ ಸಂಸಾರ ಹೀಗೆ ಛಿದ್ರವಾಗಲು ಕಾರಣ ಏನು ಎಂಬುದು ಫ್ಲ್ಯಾಶ್​ಬ್ಯಾಕ್​ನಲ್ಲಿ ತಿಳಿಯಲಿದೆ. ವೀರ ಸಿಂಹ ರೆಡ್ಡಿ ವಿರುದ್ಧ ಖಳನಾಯಕ ಪ್ರತಾಪ್​ ರೆಡ್ಡಿ (ದುನಿಯಾ ವಿಜಯ್​) ಸದಾ ಕಾಲ ಕತ್ತಿ ಮಸೆಯುತ್ತಾನೆ. ಆತನ ದ್ವೇಷಕ್ಕೂ ಕಾರಣ ಇದೆ. ಅಂತಿಮವಾಗಿ ವೀರ ಸಿಂಹ ರೆಡ್ಡಿಯ ಸಂಸಾರದ ಒಡಕು ಸರಿ ಆಗುತ್ತಾ? ದುಷ್ಟಬುದ್ಧಿ ತೋರುವ ಪ್ರತಾಪ್​ ರೆಡ್ಡಿಯ ಅಂತ್ಯ ಹೇಗಾಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ದ್ವಿಪಾತ್ರದಲ್ಲಿ ನಂದಮೂರಿ ಬಾಲಕೃಷ್ಣ:

ವೀರ ಸಿಂಹ ರೆಡ್ಡಿ ಮತ್ತು ಜಯ ಸಿಂಹ ರೆಡ್ಡಿ ಎಂಬ ಎರಡು ಪಾತ್ರಗಳಲ್ಲಿ ಬಾಲಯ್ಯ ನಟಿಸಿದ್ದಾರೆ. ತಂದೆ ವೀರ ಸಿಂಹ ರೆಡ್ಡಿಯ ಕಥೆ ಆಂಧ್ರದಲ್ಲಿ ಶುರುವಾಗುತ್ತದೆ. ಮಗ ಜಯ ಸಿಂಹ ರೆಡ್ಡಿಯ ಕಥೆ ಇಸ್ತಾಂಬೂಲ್​ನಲ್ಲಿ ನಡೆಯುತ್ತದೆ. ಈ ಎರಡೂ ಪಾತ್ರಗಳು ಅವರ ಅಭಿಮಾನಿಗಳಿಗೆ ಇಷ್ಟವಾಗುವಂತೆ ಇವೆ. ಎರಡರ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಇದನ್ನೂ ಓದಿ: Varisu Movie Review: ಇವ ಎಂಟರ್​​ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ

ವರಲಕ್ಷ್ಮಿ ಶರತ್​ಕುಮಾರ್​ ನಟನೆಗೆ ಹೆಚ್ಚಿನ ಸ್ಕೋಪ್​:

‘ವೀರ ಸಿಂಹ ರೆಡ್ಡಿ’ ಸಿನಿಮಾಗೆ ಶ್ರುತಿ ಹಾಸನ್​ ನಾಯಕಿ. ಆದರೆ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಎರಡು ಹಾಡು, ಒಂದೆರಡು ದೃಶ್ಯಗಳಿಗೆ ಮಾತ್ರ ಅವರು ಸೀಮಿತವಾಗಿದ್ದಾರೆ. ನಾಯಕನ ತಂಗಿ ಮತ್ತು ವಿಲನ್​ ಪತ್ನಿಯಾಗಿ ವರಲಕ್ಷ್ಮೀ ಶರತ್​ ಕುಮಾರ್​ ನಟಿಸಿದ್ದಾರೆ. ಅವರ ಪಾತ್ರಕ್ಕೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಸಿಕ್ಕಿರುವ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರ ನಟನೆ ಮೆಚ್ಚುವಂತಿದೆ. ಕಥೆಗೆ ಟ್ವಿಸ್ಟ್​ ನೀಡುವಂತಹ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ.

ಟಾಲಿವುಡ್​ನಲ್ಲಿ ಅಬ್ಬರಿಸಿದ ದುನಿಯಾ ವಿಜಯ್​:

ನಟ ದುನಿಯಾ ವಿಜಯ್​ ಅವರು ಟಾಲಿವುಡ್​ನಲ್ಲಿ ನಟಿಸಿದ ಮೊದಲ ಸಿನಿಮಾ ಇದು. ಆ ಕಾರಣಕ್ಕಾಗಿ ಅವರ ಅಭಿಮಾನಿಗಳಿಗೆ ‘ವೀರ ಸಿಂಹ ರೆಡ್ಡಿ’ ಚಿತ್ರ ವಿಶೇಷ ಎನಿಸಿಕೊಂಡಿದೆ. ಬಾಲಯ್ಯ ಅವರಂತಹ ಮಾಸ್​ ಹೀರೋ ಎದುರು ತೊಡೆತಟ್ಟಿ ನಿಂತು ನಟಿಸುವ ಅವಕಾಶ ದುನಿಯಾ ವಿಜಯ್​ ಅವರಿಗೆ ಸಿಕ್ಕಿದೆ. ಆ್ಯಕ್ಷನ್​ ದೃಶ್ಯಗಳಲ್ಲಿ ಅವರು ಅಬ್ಬರಿಸಿದ್ದಾರೆ. ಅವರ ಪ್ರತಿಭೆಯನ್ನು ನಿರ್ದೇಶಕರು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆ ಇತ್ತು. ಆದರೆ ಅಬ್ಬರಕ್ಕಷ್ಟೇ ಆ ಪಾತ್ರ ಸೀಮಿತವಾಗಿದೆ.

ಇದನ್ನೂ ಓದಿ: Jamaligudda Review: ಜಮಾಲಿಗುಡ್ಡ ಸಹಜ-ಸುಂದರ; ಪ್ರೇಕ್ಷಕ ನಿರೀಕ್ಷಿಸೋದು ಅದಕ್ಕಿಂತಲೂ ಎತ್ತರ

ಸಿಕ್ಕಾಪಟ್ಟೆ ಆ್ಯಕ್ಷನ್​, ಅಲ್ಪ ಸ್ವಲ್ಪ ಎಮೋಷನ್​:

‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ 7-8 ಫೈಟಿಂಗ್​ ದೃಶ್ಯಗಳಿವೆ. ಎಲ್ಲಾ ಲಾಜಿಕ್​ಗಳನ್ನು ಬದಿಗೊತ್ತಿದಂತಹ ಈ ಸಾಹಸ ದೃಶ್ಯಗಳನ್ನು ಯಾವುದೇ ಪ್ರಶ್ನೆ ಇಲ್ಲದೆ ಎಂಜಾಯ್​ ಮಾಡಬೇಕಷ್ಟೇ. ಹೊಡಿಬಡಿ ದೃಶ್ಯಗಳಿಗೆ ನಿರ್ದೇಶಕರು ಹೆಚ್ಚು ಮಹತ್ವ ನೀಡಿದ್ದಾರೆ. ಮೊದಲಾರ್ಧ ಪೂರ್ತಿ ಫೈಟಿಂಗ್​ಗೆ ಮೀಸಲಾಗಿದೆ. ದ್ವಿತೀಯಾರ್ಧದಲ್ಲಿ ಆ್ಯಕ್ಷನ್​ ಜೊತೆಗೆ ಎಮೋಷನ್​ ಬೆರೆಸುವ ಕಾಯಕ ಆಗಿದೆ. ಅಣ್ಣ-ತಂಗಿ ಸಂಬಂಧದ ಭಾವನಾತ್ಮಕ ದೃಶ್ಯಗಳಿಂದಾಗಿ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಚಿತ್ರ ಹಿಡಿಸಬಹುದು.

ಅದ್ದೂರಿ ಮೇಕಿಂಗ್​, ಹೆಚ್ಚುವರಿ ಹಾಡು:

ಮೇಕಿಂಗ್​ ವಿಚಾರದಲ್ಲಿ ನಿರ್ದೇಶಕ ಗೋಪಿಚಂದ್​ ಮಲಿನೇನಿ ಅವರು ಎಲ್ಲಿಯೂ ರಾಜಿ ಆಗಿಲ್ಲ. ಆ್ಯಕ್ಷನ್​ ದೃಶ್ಯಗಳನ್ನು ಅವರು ತುಂಬ ಗ್ರ್ಯಾಂಡ್​ ಆಗಿ ಚಿತ್ರಿಸಿದ್ದಾರೆ. ಹಾಡುಗಳ ವಿಚಾರಕ್ಕೂ ಈ ಮಾತು ಅನ್ವಯ. ಆದರೆ ಮೂಗಿಗಿಂತಲೂ ಮೂಗುತಿ ಭಾರ ಎಂಬಂತೆ ಕಥೆಯೊಳಗೆ ಕಂಡಕಂಡಲ್ಲಿ ಫೈಟಿಂಗ್​ ದೃಶ್ಯಗಳು ನುಸುಳಿವೆ. ಹಾಡುಗಳು ಕೂಡ ಹೆಚ್ಚುವರಿ ಎನಿಸುವ ರೀತಿಯಲ್ಲಿ ತುರುಕಲ್ಪಟ್ಟಿವೆ. ಎಸ್​. ಥಮನ್​ ಅವರು ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೂಲಕ ಅಬ್ಬರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:28 am, Thu, 12 January 23

ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು