Vijay Varma: ನಟಿ ತಮನ್ನಾಗೆ ಹೊಸ ಹೆಸರು ಟೊಮೆಟೊ; ಪ್ರಿಯಕರ ವಿಜಯ್​ ವರ್ಮಾ ಮುದ್ದಾಗಿ ಕರೆಯೋದು ಹೀಗೆ

Tamannaah Bhatia Nickname: ವಿಜಯ್​ ವರ್ಮಾ ನಟಿಸಿರುವ ‘ದಹಾಡ್​’ ವೆಬ್​ ಸಿರೀಸ್​ ಬಿಡುಗಡೆಗೆ ಸಜ್ಜಾಗಿದೆ. ಬರ್ಲಿನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಇದರ ಪ್ರೀಮಿಯರ್​ ಶೋ ಮಾಡಲಾಗಿದೆ.

Vijay Varma: ನಟಿ ತಮನ್ನಾಗೆ ಹೊಸ ಹೆಸರು ಟೊಮೆಟೊ; ಪ್ರಿಯಕರ ವಿಜಯ್​ ವರ್ಮಾ ಮುದ್ದಾಗಿ ಕರೆಯೋದು ಹೀಗೆ
ತಮನ್ನಾ ಭಾಟಿಯಾ, ವಿಜಯ್ ವರ್ಮಾ
Follow us
ಮದನ್​ ಕುಮಾರ್​
|

Updated on:Feb 24, 2023 | 9:35 PM

ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ದೇಶಾದ್ಯಂತ ಖ್ಯಾತಿ ಹೊಂದಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’ ರೀತಿಯ ಗಮನಾರ್ಹ ಸಿನಿಮಾಗಳಲ್ಲಿ ನಟಿಸಿದ ಈ ಬೆಡಗಿಯ ವೈಯಕ್ತಿಕ ವಿಚಾರಗಳು ಕೂಡ ಆಗಾಗ ಚರ್ಚೆ ಆಗುತ್ತಲೇ ಇರುತ್ತವೆ. ತಮನ್ನಾಗೆ ಅಭಿಮಾನಿಗಳು ಪ್ರೀತಿಯಿಂದ ‘ಮಿಲ್ಕಿ ಬ್ಯೂಟಿ’ ಅಂತ ಕರೆಯುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ಅವರ ಇನ್ನೊಂದು ಹೆಸರು ಬಹಿರಂಗ ಆಗಿದೆ. ನಟ ವಿಜಯ್​ ವರ್ಮಾ ಅವರು ತಮನ್ನಾಗೆ ಮುದ್ದಾಗಿ ‘ಟೊಮೆಟೊ’ (Tomato) ಎಂದು ಕರೆಯುತ್ತಾರೆ. ಇಷ್ಟು ದಿನ ಗುಟ್ಟಾಗಿ ಉಳಿದಿದ್ದ ಈ ವಿಚಾರ ಈಗ ಬಹಿರಂಗ ಆಗಿದೆ. ವಿಜಯ್​ ವರ್ಮಾ (Vijay Varma) ಮತ್ತು ತಮನ್ನಾ ಭಾಟಿಯಾ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಊರೆಲ್ಲ ಗಾಸಿಪ್​ ಹಬ್ಬಿದೆ.

ಬಾಲಿವುಡ್​ನಲ್ಲಿ ವಿಜಯ್​ ವರ್ಮಾ ಅವರು ಫೇಮಸ್​ ಆಗಿದ್ದಾರೆ. ಸಿನಿಮಾ, ವೆಬ್​ ಸೀರಿಸ್​ಗಳಲ್ಲಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈ ನಡುವೆ ತಮನ್ನಾ ಭಾಟಿಯಾ ಜೊತೆ ಸುತ್ತಾಟದ ಕಾರಣದಿಂದಲೂ ವಿಜಯ್​ ವರ್ಮಾ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈ ಜೋಡಿ ಶೀಘ್ರದಲ್ಲೇ ಮದುವೆ ಆಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ಈ ನಡುವೆ ತಮನ್ನಾ ಅವರನ್ನು ಟೊಮೆಟೊ ಎಂದು ಕರೆಯುವ ಮೂಲಕ ವಿಜಯ್​ ವರ್ಮಾ ಅವರು ಸುದ್ದಿ ಆಗಿದ್ದಾರೆ.

ವಿಜಯ್​ ವರ್ಮಾ ನಟಿಸಿರುವ ‘ದಹಾಡ್​’ ವೆಬ್​ ಸಿರೀಸ್​ ಬಿಡುಗಡೆಗೆ ಸಜ್ಜಾಗಿದೆ. ಬರ್ಲಿನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಇದರ ಪ್ರೀಮಿಯರ್​ ಶೋ ಮಾಡಲಾಗಿದೆ. ಅದಕ್ಕಾಗಿ ತಮ್ಮ ತಂಡದ ಜೊತೆ ವಿಜಯ್​ ವರ್ಮಾ ಅವರು ಬರ್ಲಿನ್​ಗೆ ತೆರಳಿದ್ದಾರೆ. ಅಲ್ಲಿಂದ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿರುವ ತಮನ್ನಾ ಅವರು ಅಭಿನಂದನೆ ತಿಳಿಸಿದ್ದಾರೆ. ಅದನ್ನು ಪುನಃ ಶೇರ್​ ಮಾಡಿಕೊಂಡಿರುವ ವಿಜಯ್​ ವರ್ಮಾ ಅವರು ‘ಥ್ಯಾಂಕ್ಸ್​ ಟೊಮೆಟೊ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ವಿಶೇಷ ಫೋಟೋ ಹಂಚಿಕೊಂಡು ದೀಪಾವಳಿ ವಿಶ್ ಮಾಡಿದ ನಟಿ ತಮನ್ನಾ
Image
Tamannaah Bhatia: ತೆಲುಗಿನಲ್ಲಿ ‘ನಿಧಿಮಾ‘ ಆಗಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಭಾಟಿಯಾ; ನಟಿಯ ಅಂದದ ಫೋಟೋಗಳು ಇಲ್ಲಿವೆ
Image
ಸಮುದ್ರ ತೀರದಲ್ಲಿ ಜೋಕಾಲಿ ಆಡುತ್ತ ವೆಕೇಶನ್ ಎಂಜಾಯ್ ಮಾಡಿದ ನಟಿ ತಮನ್ನಾ
Image
ತಮನ್ನಾ ರೀತಿ ಡ್ಯಾನ್ಸ್​ ಮಾಡ್ತಾರಾ ಈ ಸೆಲೆಬ್ರಿಟಿಗಳು? ಹೊಸ ಸವಾಲು ಹಾಕಿದ ‘ಮಿಲ್ಕಿ ಬ್ಯೂಟಿ’

ಹೊಸ ವರ್ಷದ ಸಂದರ್ಭದಲ್ಲಿ ತಮನ್ನಾ ಮತ್ತು ವಿಜಯ್​ ವರ್ಮಾ ಅವರು ಗೋವಾದ ರೆಸ್ಟೋರೆಂಟ್​ನಲ್ಲಿ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಂಡರು. ಆ ಬಳಿಕ ಪಾಪರಾಜಿಗಳು ಅವರ ಮೇಲೆ ಒಂದು ಕಣ್ಣಿಟ್ಟರು. ನಂತರ ಒಂದೆರಡು ಸಲ ಈ ಜೋಡಿ ಒಟ್ಟಿಗೆ ಓಡಾಡಿರುವುದು ತಿಳಿದು ಬಂದಿದೆ. ಆದರೆ ತಮ್ಮ ರಿಲೇಷನ್​ಶಿಪ್​ ಬಗ್ಗೆ ಅವರು ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಈ ಗುಟ್ಟು ಆದಷ್ಟು ಬೇಗ ರಟ್ಟಾಗಲಿ ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:35 pm, Fri, 24 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ