AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಾಡೆಲ್ ಪ್ರೀಮಿಯರ್​ಗೆ ಕೋಟ್ಯಂತರ ಬೆಲೆಯ ವಜ್ರದ ಆಭರಣದ ಧರಿಸಿದ ಸಮಂತಾ

Citadel: ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ವೆಬ್ ಸರಣಿಯ ಪ್ರೀಮಿಯರ್ ಶೋ ಲಂಡನ್​ನಲ್ಲಿ ನಡೆದಿದ್ದು, ಪ್ರೀಮಿಯರ್ ಶೋಗೆ ಸಮಂತಾ, ಕೋಟಿಗಟ್ಟಲೆ ಮೌಲ್ಯದ ಆಭರಣ ಧರಿಸಿ ಹೋಗಿದ್ದರು.

ಸಿಟಾಡೆಲ್ ಪ್ರೀಮಿಯರ್​ಗೆ ಕೋಟ್ಯಂತರ ಬೆಲೆಯ ವಜ್ರದ ಆಭರಣದ ಧರಿಸಿದ ಸಮಂತಾ
ಸಮಂತಾ
ಮಂಜುನಾಥ ಸಿ.
|

Updated on:Apr 19, 2023 | 10:07 PM

Share

ನಟಿ ಸಮಂತಾ (Samantha) ನಟನೆಯ ಶಾಕುಂತಲಂ (Shakunthalam) ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ಆದರೆ ಸಮಂತಾ ಅದಕ್ಕಾಗಿ ಕೊರಗುತ್ತಾ ಕೂರುವ ಬದಲಿಗೆ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಗಮನವಹಿಸುವುದರಲ್ಲಿ ನಿರತರಾಗಿದ್ದಾರೆ. ಸಮಂತಾ ಇದೀಗ ಸಿಟಾಡೆಲ್ ಹೆಸರಿನ ಇಂಗ್ಲೀಷ್ ವೆಬ್ ಸರಣಿಯ ಹಿಂದಿ ರೀಮೇಕ್​ನಲ್ಲಿ ನಟಿಸುತ್ತಿದ್ದು, ಸಿಟಾಡೆಲ್ (Citadel) ಇಂಗ್ಲೀಷ್​ ವರ್ಷನ್​ನ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು. ಅದ್ಧೂರಿ ಪ್ರೀಮಿಯರ್ ಶೋಗೆ ಅಷ್ಟೆ ಅದ್ಧೂರಿಯಾಗಿ ತಯಾರಾಗಿ ಹೋಗಿದ್ದ ಸಮಂತಾ, ಧರಿಸಿದ್ದ ವಜ್ರದ ಆಭರಣ ಎಲ್ಲರ ಕಣ್ಣು ಕುಕ್ಕಿದವು.

ಪ್ರಿಯಾಂಕಾ ಚೋಪ್ರಾ ನಟಿಸಿರುವ ಇಂಗ್ಲೀಷ್​ನ ಸಿಟಾಡೆಲ್ ವೆಬ್ ಸರಣಿಯ ಪ್ರೀಮಿಯರ್ ಶೋ ಲಂಡನ್​ನಲ್ಲಿ ಆಯೋಜಿತವಾಗಿತ್ತು. ಹಲವು ಹಾಲಿವುಡ್ ಸ್ಟಾರ್ ನಟ-ನಟಿಯರು ನಿರ್ದೇಶಕರು ಭಾಗವಹಿಸಿದ್ದ ಈ ಪ್ರೀಮಿಯರ್ ಶೋನಲ್ಲಿ ಸಮಂತಾ ಸಹ ಭಾಗಿಯಾಗಿದ್ದರು. ಕಪ್ಪು ಬಣ್ಣದ ಮಾಡರ್ನ್ ಉಡುಗೆ ತೊಟ್ಟಿದ್ದ ಸಮಂತಾ ಕೊರಳಿಗೆ ವಜ್ರದ ನೆಕ್​ಲೆಸ್ ಹಾಗೂ ಕೈಗೆ ವಜ್ರದ ಬಳೆಯೊಂದನ್ನು ಹಾಕಿಕೊಂಡಿದ್ದರು. ಸಮಂತಾ ಧರಿಸಿದ್ದ ಕಪ್ಪು ಉಡುಗೆಗೆ ಸರಿಯಾಗಿ ಮ್ಯಾಚ್ ಆಗಿದ್ದ ಈ ಆಭರಣಗಳ ಬೆಲೆ ಕೆಲವು ಕೋಟಿಗಳು!

ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಂತಾ ಧರಿಸಿದ್ದ ನೆಕ್​ಲೆಸ್ ಹೆಸರು ಡೈಮೆಂಡ್ ಸೆರ್ಪೆಂಟಿ ನೆಕ್​ಲೇಸ್ ಇದರ ಬೆಲೆ 2.97 ಕೋಟಿ ರುಪಾಯಿಗಳು. ಇನ್ನು ಸಮಂತಾ ಧರಿಸಿದ್ದ ಹಾವಿನ ಮಾದರಿಯ ವಜ್ರದ ಬಳೆಯ ಬೆಲೆ ಮೂರು ಕೋಟಿಗೂ ಹೆಚ್ಚು. ಈ ಎರಡೇ ಆಭರಣಗಳನ್ನು ಸಮಂತಾ ಧರಿಸಿದ್ದರು, ಇವುಗಳ ಒಟ್ಟು ಬೆಲೆ ಐದು ಕೋಟಿ ರುಪಾಯಿಗಳು. ಇನ್ನು ಸಮಂತಾ ಧರಿಸಿದ್ದ ಉಡುಗೆಯನ್ನು ಡಿಸೈನ್ ಮಾಡಿರುವುದು ವಿಕ್ಟೋರಿಯಾ ಬೆಕಮ್ ಈ ಉಡುಗೆಯ ಬೆಲೆ ಒಂದು ಲಕ್ಷಕ್ಕೂ ಹೆಚ್ಚು.

ಸಿಟಾಡೆಲ್ ಪ್ರೀಮಿಯರ್​ನಲ್ಲಿ ಭಾಗಿಯಾಗಿದ್ದ ನಟಿ ಸಮಂತಾ ಅಲ್ಲಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವಾರು ಹಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿಯಾಗಿದ್ದಾರೆ. ಸಮಂತಾ ಮಾತ್ರವೇ ಅಲ್ಲದೆ ಬಾಲಿವುಡ್ ನಟ ವರುಣ್ ಧವನ್ ಹಾಗೂ ಹಿಂದಿ ಸಿಟಾಡೆಲ್​ನ ತಂಡದ ಮುಖ್ಯ ಸದಸ್ಯರು ಸಹ ಲಂಡನ್​ನಲ್ಲಿ ನಡೆದ ಸಿಟಾಡೆಲ್ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದಾರೆ.

ಸಿಟಾಡೆಲ್ ವೆಬ್ ಸರಣಿಯನ್ನು ಅವೆಂಜರ್ಸ್ ಖ್ಯಾತಿಯ ರೋಸ್ಸೊ ಬ್ರದರ್ಸ್ ನಿರ್ಮಾಣ ಮಾಡಿದ್ದು, ಪ್ರಿಯಾಂಕಾ ಚೋಪ್ರಾ ಹಾಗೂ ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ರಿಚರ್ಡ್ ಮ್ಯಾಡ್ನನ್ ಇನ್ನೂ ಹಲವರು ನಟಿಸಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಕತೆಯುಳ್ಳ ವೆಬ್ ಸರಣಿಯಾಗಿದ್ದು, ಪ್ರಿಯಾಂಕಾ ಚೋಪ್ರಾ ಹಾಗೂ ರಿಚರ್ಡ್ ಮ್ಯಾಡ್ನನ್ ಇಬ್ಬರೂ ಸಹ ಗೂಢಚಾರಿಗಳ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿಟಾಡೆಲ್​ನ ಟೀಸರ್, ಟ್ರೈಲರ್​ಗಳು ಈಗಾಗಲೇ ಬಿಡುಗಡೆ ಆಗಿದ್ದು, ವೆಬ್ ಸರಣಿ ಪ್ರಿಯರ ಕುತೂಹಲ ಹೆಚ್ಚಿಸಿವೆ. ಪ್ರಿಯಾಂಕಾ ಚೋಪ್ರಾ ಅಂತೂ ಹಿಂದೆಂದೂ ಕಾಣಿಸದ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವೆಬ್ ಸರಣಿಯಲ್ಲಿನ ಹಲವು ಸ್ಟಂಟ್​ಗಳನ್ನು ಡ್ಯೂಪ್ ಇಲ್ಲದೇ ತಾವೇ ಮಾಡಿರುವುದಾಗಿ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ. ಸಿಟಾಡೆಲ್ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Wed, 19 April 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ