ಬೆಂಗಳೂರಿನಲ್ಲಿ ನಡೆದಿದ್ದ 90 ರ ದಶಕದ ಭಯಾನಕ ಹತ್ಯೆ ಪ್ರಕರಣ ಒಟಿಟಿಯಲ್ಲಿ

Amazon Prime Video: 90 ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಭಯಾನಕ ಹತ್ಯೆ ಪ್ರಕರಣದ ಕುರಿತಾದ ಸಾಕ್ಷ್ಯಚಿತ್ರ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಏನಿದು ಪ್ರಕರಣ?

ಬೆಂಗಳೂರಿನಲ್ಲಿ ನಡೆದಿದ್ದ 90 ರ ದಶಕದ ಭಯಾನಕ ಹತ್ಯೆ ಪ್ರಕರಣ ಒಟಿಟಿಯಲ್ಲಿ
ಡ್ಯಾನ್ಸಿಂಗ್ ಆನ್​ ದಿ ಗ್ರೇವ್
Follow us
ಮಂಜುನಾಥ ಸಿ.
|

Updated on:Apr 18, 2023 | 10:02 PM

ಒಟಿಟಿಗಳು (OTT) ಈಗ ಸಿನಿಮಾ, ವೆಬ್ ಸರಣಿಗಳಿಗೆ (Web Series) ಮಾತ್ರವೇ ಸೀಮಿತವಾಗಿಲ್ಲ. ನಿಜ ಘಟನೆ ಆಧರಿಸಿದ ಡಾಕ್ಯು ಸರಣಿಗಳನ್ನು (Docu Series) ಬಿಡುಗಡೆ ಮಾಡುತ್ತಿವೆ. ಈಗಾಗಲೇ ನೆಟ್​ಫ್ಲಿಕ್ಸ್​ ಈ ರೀತಿಯ ಪ್ರಯೋಗವೊಂದನ್ನು ಮಾಡಿ ಗೆಲುವು ಸಾಧಿಸಿದೆ. ಅದನ್ನು ಮುಂದುವರೆಸುತ್ತಲೂ ಇದೆ. ಇದೀಗ ನೆಟ್​ಫ್ಲಿಕ್ಸ್​ನ ಪ್ರತಿಸ್ಪರ್ಧಿಯಾಗಿರುವ ಅಮೆಜಾನ್ ಪ್ರೈಂ ಸಹ ಇಂಥಹುದೇ ಒಂದು ಡಾಕ್ಯು ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಮೊದಲಿಗೆ ಬೆಂಗಳೂರಿನಲ್ಲಿ 90 ರ ದಶಕದಲ್ಲಿ ನಡೆದಿದ್ದ ಭಯಾನಕ ಹತ್ಯಾ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಡ್ಯಾನ್ಸಿಂಗ್ ಆನ್ ದಿ ಗ್ರೇವ್ ಹೆಸರಿನ ಸಾಕ್ಷ್ಯಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ದೇಶವನ್ನೇ ತಲ್ಲಣಗೊಳಿಸಿದ್ದ ಬೆಂಗಳೂರಿನಲ್ಲಿ ನಡೆದ ಕೊಲೆಯೊಂದರ ಕುರಿತಾದ ಮಾಹಿತಿಯನ್ನು ರೋಚಕವಾದ ಮಾದರಿಯಲ್ಲಿ ಈ ಡಾಕ್ಯು ಸರಣಿ ಪ್ರೆಸೆಂಟ್ ಮಾಡಲಿದೆ.

ಏನಿದು ಪ್ರಕರಣ?

ರಿಚ್​ಮಂಡ್ ಟೌನ್​ನ ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಶಕೇರಿ ಖಲೀಲಿ ಎಂಬ ಮಹಿಳೆ ತನ್ನ ಪತಿಯಿಂದಲೇ ಭೀಕರವಾಗಿ ಹತ್ಯೆಯಾಗಿದ್ದಳು, ಆಕೆಯ ಶವವನ್ನು ಆಕೆಯದ್ದೇ ಮನೆಯಲ್ಲಿ ಹೂತು ಹಾಕಲಾಗಿತ್ತು. ಶಕೆರೆ ಖಲೀಲಿ, ಕಡಿಮೆ ವಯಸ್ಸಿನಲ್ಲಿಯೇ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದರು. ಬಳಿಕ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿ 1986 ರಲ್ಲಿ ಎರಡನೇ ಬಾರಿಗೆ ಸ್ವಾಮಿ ಶ್ರದ್ಧಾನಂದ ಎಂಬುವರನ್ನು ವಿವಾಹವಾದರು. ಆ ನಂತರ ನಿಧಾನಕ್ಕೆ ಶಕೆರೆ ತನ್ನ ಗೆಳೆಯರು, ಮಕ್ಕಳೊಟ್ಟಿಗೆ ಸಂಪರ್ಕ ಕಡಿದುಕೊಂಡರು ಬಳಿಕ 1991 ರಲ್ಲಿ ಶಕೆರೆ ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟರು!

ತಾಯಿಯನ್ನು ಭೇಟಿಯಾಗಲು ಮಕ್ಕಳು ಬಂದಾಗ ಆಕೆ ವಿದೇಶಕ್ಕೆ ಹೋಗಿದ್ದಾಳೆಂದು ಸ್ವಾಮಿ ಶ್ರದ್ಧಾನಂದ ಸುಳ್ಳು ಹೇಳಿರುತ್ತಾನೆ ಬಳಿಕ ಅನುಮಾನ ಬಂದು ದೂರು ನೀಡಿದಾಗ 1996 ರಲ್ಲಿ ಕೊಲೆ ಪ್ರಕರಣ ಬಹಿರಂಗಗೊಳ್ಳುತ್ತದೆ. ಪೊಲೀಸರ ತನಿಖೆಯಿಂದ ಶಕೆರೆಯನ್ನು ಸ್ವಾಮಿ ಶ್ರದ್ಧಾನಂದನೇ ಕೊಂದಿರುವುದು ಗೊತ್ತಾಗುತ್ತದೆ. ಆಕೆಯನ್ನು ಜೀವಂತವಾಗಿ ಮರದ ಪೆಟ್ಟಿಗೆಯೊಂದರಲ್ಲಿ ಬಂಧಿ ಮಾಡಿ ಪೆಟ್ಟಿಗೆಯನ್ನು ಆಕೆಯ ಮನೆಯ ಮಧ್ಯ ಭಾಗದಲ್ಲಿ ಹೂತು ಹಾಕಿರುತ್ತಾನೆ ಶ್ರದ್ಧಾನಂದ. ಆ ಬಳಿದ ಅದೇ ಮನೆಯಲ್ಲಿ ಪಾರ್ಟಿಗಳನ್ನು ಸಹ ಮಾಡಿರುತ್ತಾನೆ. ಇದೇ ಕಾರಣಕ್ಕೆ ಈ ಭೀಕರ ಹತ್ಯೆಯ ಮಾಹಿತಿಗಳನ್ನು ಒಳಗೊಂಡ ಡಾಕ್ಯುಸರಣಿಗೆ ಡಾನ್ಸಿಂಗ್ ಆನ್​ ದಿ ಗ್ರೇವ್ ಎಂದು ಹೆಸರಿಡಲಾಗಿದೆ.

ಇದೀಗ ಡಾಕ್ಯು ಸರಣಿಯ ಟ್ರೈಲರ್ ಬಿಡುಗಡೆ ಆಗಿದ್ದು, ಡಾಕ್ಯು ಸರಣಿಯು ಏಪ್ರಿಲ್ 21 ರಂದು ಅಮೆಜಾನ್​ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ನಾಲ್ಕು ಸಂಚಿಕೆಗಳಲ್ಲಿ ಈ ಡಾಕ್ಯು ಸರಣಿ ಪ್ರಸಾರವಾಗಲಿದ್ದು, ಟ್ರೈಲರ್ ಈಗಾಗಲೇ ಬಹುವಾಗ ಗಮನ ಸೆಳೆದಿದೆ. ಶಕೆರೆಯ ಮಕ್ಕಳು, ಅವರ ಗೆಳೆಯರು, ಪ್ರಕರಣದ ತನಿಖೆ ಮಾಡಿದ ಅಧಿಕಾರಿಗಳು, ಕೊಲೆಗಾರ ಶ್ರದ್ಧಾನಂದ ಇನ್ನೂ ಹಲವರನ್ನು ಮಾತನಾಡಿಸಿ, ಹಲವು ಚಿತ್ರಗಳು, ದಾಖಲೆಗಳನ್ನು ಕ್ರೂಢೀಕರಿಸಿ ಡಾಕ್ಯು ಸರಣಿ ರೆಡಿ ಮಾಡಲಾಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಈಗಾಗಲೇ ಈ ರೀತಿಯ ಪ್ರಯತ್ನ ಯಶಸ್ವಿಯಾಗಿದೆ. ಬೆಂಗಳೂರಿನ ಕೆಲವು ಕೊಲೆ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದರ ರಿಯಲ್ ಟೈಮ್ ಡಾಕ್ಯುಸರಣಿಯನ್ನು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಮಾಡಲಾಗಿದೆ. ಇಂಡಿಯನ್ ಪ್ರಿಡೆಟರ್ಸ್ ಹೆಸರಿನ ಹಂತಕರ ಕುರಿತಾದ ಡಾಕ್ಯುಸರಣಿಯೂ ಇತ್ತೀಚೆಗೆ ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 pm, Tue, 18 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ