ಡ್ರೈವಿಂಗ್​​ ವೇಳೆ ಹೃದಯಾಘಾತದಿಂದ ಮೃತ ಪಟ್ಟ ಯುವಕ; ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ

ಜೂನ್​​ 17 ಮಧ್ಯಾಹ್ನ 12ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊದಲೇ ಎದೆ ನೋವಿನಿಂದ ಬಳಲುತ್ತಿದ್ದ ಅಶೋಕ್, ಕೆಲಸದ ನಡುವೆ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿದ್ದಾನೆ. ಆದರೆ ಆಸ್ಪತ್ರೆಗೆ ತಲುಪುವ ದಾರಿಯಲ್ಲೇ ಪ್ರಾಣ ಬಿಟ್ಟಿದ್ದಾನೆ.

ಡ್ರೈವಿಂಗ್​​ ವೇಳೆ ಹೃದಯಾಘಾತದಿಂದ ಮೃತ ಪಟ್ಟ ಯುವಕ; ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ
ಸಿಸಿಟಿವಿ ದೃಶ್ಯ
Image Credit source: twitter

Updated on: Jun 20, 2023 | 3:18 PM

ಮಧ್ಯಪ್ರದೇಶದ ಬರ್ವಾನಿಯಲ್ಲಿ ಯುವಕನೊಬ್ಬ ಬೈಕು ಚಲಾಯಿಸಿಕೊಂಡು ಬರುವ ವೇಳೆಗೆ ಹೃದಯಾಘಾತವಾಗಿದ್ದು, ಆತನ ಬೈಕು ಬೀದಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಯುವಕ ಬೈಕ್​​ನಿಂದ ಕೆಳಗೆ ಬಿದ್ದಿದ್ದಾನೆ. ಚಿಕ್ಕದಾಗಿ ಅಪಘಾತವಾಗಿದ್ದರಿಂದ ಚಾಲಕನಿಗೆ ಜೀವಕ್ಕೆ ಎನು ತೊಂದರೆಯಾಗಿಲ್ಲ ಎಂದು ಸ್ಥಳೀಯರು ಅಂದು ಕೊಂಡಿದ್ದರು. ಆದರೆ ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಯುವಕರಲ್ಲಿಯೇ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದೀಗಾ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮೃತಪಟ್ಟ ಯುವಕ ಅಶೋಕ್​​​ ಸೋಲಂಗಿ ಎಂದು ಗುರುತಿಸಲಾಗಿದೆ. ದಾರಿ ಮಧ್ಯೆ ಈತ ಸಾವನ್ನಪ್ಪಿರುವ ಸಿಸಿಟಿವಿ ದೃಶ್ಯಾವಳಿಗಳು ಎಲ್ಲೆಡೆ ವೈರಲ್​​​ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಇದನ್ನೂ ಓದಿ: ಸ್ನೇಹಿತೆಯನ್ನು ಹುಲಿಯಿಂದ ಕಾಪಾಡಿದ ಹಸುಗಳ ಹಿಂಡು, ಘಟನೆ ಸಿಸಿಟಿವಿಯಲ್ಲಿ ಸೆರೆ

ಜೂನ್​​ 17 ಮಧ್ಯಾಹ್ನ 12ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊದಲೇ ಎದೆ ನೋವಿನಿಂದ ಬಳಲುತ್ತಿದ್ದ ಅಶೋಕ್, ಕೆಲಸದ ನಡುವೆ  ಎದೆ ನೋವು ಕಾಣಿಸಿಕೊಂಡಿದೆ. ಆದ್ದರಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ತನ್ನೊಂದಿರುವ ಕೆಲಸಗಾರರಿಗೆ ತಿಳಿಸಿದ್ದಾನೆ. ಅದರಂತೆ ಸ್ವತಃ ಆತನೇ ಬೈಕ್​​​ ಡ್ರೈವಿಂಗ್​​​​ ಮಾಡುಕೊಂಡು ಬಂದಿದ್ದಾನೆ. ಆದರೆ ಆಸ್ಪತ್ರೆಗೆ ತಲುಪುವ ದಾರಿಯಲ್ಲೇ ಪ್ರಾಣ ಬಿಟ್ಟಿರುವುದು ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:05 pm, Tue, 20 June 23