Viral: ಎಐನೊಂದಿಗೆ ಕೆಲಸ ಮಾಡುವವರಿಗೆ ಒಂಟಿತನ, ನಿದ್ರಾಹೀನತೆ, ಆಲ್ಕೋಹಾಲ್​ ಸಂಗಾತಿಗಳಾಗಬಹುದು

Artificial Intelligence : ಸಂಶೋಧನೆಗಳ ಪ್ರಕಾರ, ಕೃತಕ ಬುದ್ಧಿಮತ್ತೆಯು ತೆಗೆದುಕೊಳ್ಳುವ ಸ್ವತಂತ್ರ ನಿರ್ಧಾರಗಳನ್ನು ಮುಂಬರುವ ದಿನಗಳಲ್ಲಿ ಯಾವ ಮನುಷ್ಯರಿಂದಲೂ ತಡೆಯಲು ಸಾಧ್ಯವಿಲ್ಲ.

Viral: ಎಐನೊಂದಿಗೆ ಕೆಲಸ ಮಾಡುವವರಿಗೆ ಒಂಟಿತನ, ನಿದ್ರಾಹೀನತೆ, ಆಲ್ಕೋಹಾಲ್​ ಸಂಗಾತಿಗಳಾಗಬಹುದು
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 20, 2023 | 2:59 PM

AI: ಜಗತ್ತು ಇಂದು ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚೆಚ್ಚು ಅವಲಂಬನೆಗೊಳ್ಳುತ್ತಿದೆ. AI ಸೃಷ್ಟಿದಾತರೇ ಇದರ ತಾಳಕ್ಕೆ ತಕ್ಕಂತೆ ಕುಣಿಯುವ ಅನಿವಾರ್ಯತೆ ಉಂಟಾಗಿದ್ದು, ತಂತ್ರಜ್ಞರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತತ್ಪರಿಣಾಮವಾಗಿ ಎಐನೊಂದಿಗೆ ಕೆಲಸ ಮಾಡುವ ತಂತ್ರಜ್ಞರು (Software Engineer) ಗಂಭೀರವಾದ ಅಪಾಯಗಳಿಗೆ ಈಡಾಗಲಿದ್ಧಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಒಂಟಿತನ, ನಿದ್ರಾಹೀನತೆಯಿಂದ ಬಳಲುವ ಅವರುಗಳು ಅದರಿಂದ ಹೊರಬರಲು ನಿತ್ಯವೂ ಮದ್ಯಸೇವನೆಗೆ ಈಡಾಗುತ್ತಿದ್ದಾರೆ ಎನ್ನುವ ವಿಷಯ ಕಳವಳವನ್ನುಂಟು ಮಾಡಿದೆ.

ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಅಮೆರಿಕಾ, ತೈವಾನ್, ಇಂಡೋನೇಷಿಯಾ ಮತ್ತು ಮಲೇಷಿಯಾದ ಎಐನೊಂದಿಗೆ ಕೆಲಸ ಮಾಡುವ 166 ಜನರ ಮೇಲೆ ಪ್ರಯೋಗವನ್ನು ಕೈಗೊಂಡರು. ಕೆಲಸ ಮುಗಿದ ಮೇಲೆ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಾರೆ. ಆಗ ಮದ್ಯದ ಮೊರೆ ಹೋಗುತ್ತಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿದರು.

ಇದನ್ನೂ ಓದಿ : Viral Video: ಕೇದಾರನಾಥ ಶಿವಲಿಂಗದ ಮೇಲೆ ನೋಟುಗಳನ್ನು ತೂರಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೃತಕ ಬುದ್ಧಿಮತ್ತೆಯೊಂದಿಗೆ (Artificial Intelligence) ಕೆಲಸ ಮಾಡುವವರು ಮನುಷ್ಯರೊಂದಿಗೆ ಬೆರೆಯಲು ಹಾತೊರೆಯುತ್ತಿರುತ್ತಾರೆ. ಇತರರಿಗೆ ಸಹಾಯ ಮಾಡುವಲ್ಲಿ ಸದಾ ಮುಂದೆ ಇರುತ್ತಾರೆ. ಅಲ್ಲದೆ ಸಾಮಾಜಿಕವಾಗಿ ತೊಡಗಿಕೊಳ್ಳಲು ಬಯಸುವ ಅವರು ಜನರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇಂಡೋನೇಷಿಯಾ, ಮಲೇಷಿಯಾದಲ್ಲಿರುವ ಆಸ್ತಿ ನಿರ್ವಹಣಾ ಕಂಪೆನಿಗಳು ಮತ್ತು ಸಾಫ್ಟ್​ವೇರ್ ಕಂಪೆನಿಗಳು ನಡೆಸಿರುವ ಪ್ರಯೋಗಳಲ್ಲಿಯೂ ಇದೇ ಫಲಿತಾಂಶವು ಹೊರಬಿದ್ದಿದೆ.

ಇದನ್ನೂ ಓದಿ : Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ

ಇದನ್ನು ತಪ್ಪಿಸುವುದು ಹೇಗೆ? ಸಂಶೋಧಕ ಪೋಕ್ ಮ್ಯಾನ್ ಟ್ಯಾಂಗ್, “ಟೆಕ್ ಕಂಪೆನಿಗಳು ಮಾನವ ಧ್ವನಿ ವೈಶಿಷ್ಟ್ಯಗಳನ್ನು ಹೊಂದಿರುವಂಥ AI ಅನ್ನು ತಯಾರಿಸಬಹುದು. ಆಗ ಇದರೊಂದಿಗೆ ಕೆಲಸ ಮಾಡುವವರು ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸಲಾರರು. ಜೊತೆಗೆ ಮನುಷ್ಯರೊಂದಿಗಿನ ಸಂವಹನದ ಅನುಭವವನ್ನು ಇದು ನೀಡುವಂತಾಗಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಮನುಷ್ಯರು AIನೊಂದಿಗೆ ಕನಿಷ್ಟ ಸಮಯವನ್ನು ಕಳೆಯುವುದು ಒಳ್ಳೆಯದು. ಅಲ್ಲದೆ, ತಂತ್ರಜ್ಞರನ್ನು ಇತರರೊಂದಿಗೆ ಬೆರೆಯಲು ಅವಕಾಶ ಕಲ್ಪಿಸಬೇಕು.

ಏನೇ ಆಗಲಿ ಎಐ ತನ್ನಿಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುತ್ತದೆ. ಇದನ್ನು ಭವಿಷ್ಯದಲ್ಲಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಂಶೋಧಕರು ಚಿಂತಿತರಾಗಿದ್ಧಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು