Viral News: ನಾಲ್ಕು ತಿಂಗಳ ನಂತರ ತಾನು ಪ್ರೀತಿಸಿದ ಹುಡುಗನ ಹೆಸರು ತಿಳಿದ ಯುವತಿ, ಆಕೆಗೆ ಹೆಸರು ಹೇಗೆ ತಿಳಿಯಿತು ಎಂಬುದೇ ಇಂಟರೆಸ್ಟಿಂಗ್​​ ಸ್ಟೋರಿ

|

Updated on: Mar 29, 2023 | 5:08 PM

ತನಗೆ ತನ್ನ ಪ್ರಿಯಕರನ ಹೆಸರು ಕೇಳಲು ತುಂಬಾ ಆಸಕ್ತಿ ಇತ್ತು. ಆದರೆ ಇದೀಗಾ ನಾಲ್ಕು ತಿಂಗಳ ನಂತರ ಹೆಸರು ತಿಳಿದುಕೊಂಡೆ ಎಂದು ಪ್ರೇಯಸಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್​​ ಆಗಿದೆ.

Viral News: ನಾಲ್ಕು ತಿಂಗಳ ನಂತರ ತಾನು ಪ್ರೀತಿಸಿದ ಹುಡುಗನ ಹೆಸರು ತಿಳಿದ ಯುವತಿ, ಆಕೆಗೆ ಹೆಸರು ಹೇಗೆ ತಿಳಿಯಿತು ಎಂಬುದೇ ಇಂಟರೆಸ್ಟಿಂಗ್​​ ಸ್ಟೋರಿ
Image Credit source: WDKY
Follow us on

ಪ್ರೀತಿ ಪ್ರಣಯಗಳಲ್ಲಿ ತನ್ನ ಪ್ರೇಮಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬಳು ತನ್ನ ಪ್ರಿಯಕರನ ಹೆಸರೇ ತಿಳಿಯದೇ ಪ್ರೀತಿಸಿದ್ದಾಳೆ. ಸುಮಾರು 4 ತಿಂಗಳುಗಳಿಂದ ಹೆಸರೇ ತಿಳಿಯದೇ ಆತನೊಂದಿಗೆ ಡೇಟಿಂಗ್​​ ಮಾಡಿದ್ದು, ಇದೀಗಾ ಕಡೆಗೂ ಸಾಹಸ ಮಾಡಿ ಹೆಸರು ತಿಳಿದುಕೊಂಡಿದ್ದಾಳೆ. ತನಗೆ ತನ್ನ ಪ್ರಿಯಕರನ ಹೆಸರು ಕೇಳಲು ತುಂಬಾ ಆಸಕ್ತಿ ಇತ್ತು. ಆದರೆ ಇದೀಗಾ ನಾಲ್ಕು ತಿಂಗಳ ನಂತರ ಹೆಸರು ತಿಳಿದುಕೊಂಡೆ ಎಂದು ಪ್ರೇಯಸಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್​​ ಆಗಿದೆ. ಆಕೆಗೆ ಹೆಸರು ಹೇಗೆ ತಿಳಿಯಿತು ಎಂಬುದೇ ಇಂಟರೆಸ್ಟಿಂಗ್​​ ಸ್ಟೋರಿ.

ಆಕೆಗೆ ಪ್ಯಾಟ್ರಿಕ್ ಅಥವಾ ರಿಚರ್ಡ್ ಎಂಬ ಹೆಸರಿನಲ್ಲಿ ಒಂದು ತನ್ನ ಪ್ರಿಯಕರನ ಹೆಸರು ಎಂದು ತಿಳಿದಿತ್ತು. ಆದರೆ ಇವೆರಡರಲ್ಲಿ ಯಾವುದೇ ಎಂಬ ಖಚಿತತೆ ಇರಲಿಲ್ಲ. ಹೆಸರೇ ತಿಳಿಯದೇ 4ತಿಂಗಳಿನಿಂದ ಇಬ್ಬರೂ ಡೇಟಿಂಗ್​​ನಲ್ಲಿ ಬ್ಯೂಸಿಯಾಗಿದ್ದರೂ, ಆದರೆ ಪ್ರತೀ ದಿನ ಆಕೆಗೆ ಆತನ ಹೆಸರು ತಿಳಿದುಕೊಳ್ಳುವ ಕುತೂಹಲವಿದ್ದರೂ ಕೂಡ ಕೇಳಿರಲ್ಲಿಲ್ಲ. ಕಡೆಗೂ ಆತನ ಹೆಸರು ತಿಳಿದಿದೆ. ಅದು ಹೇಗೆ ಅಂತೀರಾ? ಅಂತಿಮವಾಗಿ ಅವನ ಕಾರಿನ ದಾಖಲೆಗಳಿಂದ ಆತನ ಹೆಸರು ತಿಳಿದುಕೊಂಡಿದ್ದಾಳೆ. ಆಕೆಯ ಈ ಖುಷಿ ಸುದ್ದಿಯನ್ನು ಸ್ವತಃ ಆಕೆಯೇ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರು ವಿದ್ಯಾರ್ಥಿಗಳಿಗೆ ಸರ್ಪ್ರೈಸ್ ನೀಡಿದ ಚಿನ್ನದ ಹುಡುಗ; ಮಕ್ಕಳ ಪ್ರತಿಕ್ರಿಯೆ ಹೇಗಿತ್ತು ನೋಡಿ

ಒಂದು ದಿನ ಆತ ಕಾರಿನಿಂದ ಹೊರಗಿಳಿದು ಹೋದಾಗ ಆತನ ಕಾರಿಗೆ ಸಂಬಂಧಪಟ್ಟ ದಾಖಲೆಗಳೆಲ್ಲವೂ ಕಾರಿನೊಳಗೆ ಇತ್ತು. ಅದರಿಂದ ನನಗೆ ಆತನ ಸರಿಯಾದ ಹೆಸರು ತಿಳಿಯಿತು ಎಂದು ಹೇಳಿಕೊಂಡಿದ್ದಾಳೆ. ಹೆಸರು ತಿಳಿದುಕೊಂಡ ಬಳಿಕ ಕೆಲವೇ ದಿನಗಳಲ್ಲಿ ಆತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದ ಈ ಪೋಸ್ಟ್ ಭಾರೀ ವೈರಲ್​​ ಆಗಿದೆ. ಜೊತೆಗೆ ತಮಗೂ ಇಂಥದ್ದೇ ಅನುಭವವಾಗಿದೆ ಎಂದು ಸಾಕಷ್ಟು ಜನರು ತಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:07 pm, Wed, 29 March 23