
ಅನೇಕ ಬಾರಿ ಮಕ್ಕಳು ಪೋಷಕರ ಮುಂದೆ ಹಲವು ಬೇಡಿಕೆಗಳನ್ನಿಡುತ್ತಾರೆ. ಕೆಲವೊಂದನ್ನು ಪೋಷಕರು ಈಡೇರಿಸುತ್ತಾರೆ, ಆದರೆ ಹೇಳಿದ್ದೆಲ್ಲವನ್ನೂ ತಂದುಕೊಟ್ಟು ಮಕ್ಕಳನ್ನು ಹಾಳು ಮಾಡಬಾರದು ಎನ್ನುವ ಉದ್ದೇಶದಿಂದ ಕೆಲವು ಪೋಷಕರು ಎಲ್ಲವನ್ನೂ ತಂದುಕೊಡುವುದಿಲ್ಲ.
ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಯುವತಿಯೊಬ್ಬರು 680ರೂ.ನ ಆಭರಣಕ್ಕಾಗಿ ತಾಯಿಯ 1.16 ಕೋಟಿ ರೂ. ಮೌಲ್ಯದ ಆಭರಣವನ್ನು ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. 680 ರೂ.ಬೆಲೆಯ ಲಿಪ್ಸ್ಟಡ್ಸ್ ಖರೀದಿಸಲು ಕೋಟಿ ಮೌಲ್ಯದ ಆಭರಣವನ್ನು ಮಾರಿರುವ ಯುವತಿ ಕಂಡು ಎಲ್ಲರೂ ಬೆರಗಾಗಿದ್ದಾರೆ. ಆಕೆಯೇ ಈ ವಿಚಾರವನ್ನು ಬಾಯ್ಬಿಟ್ಟಿರಲಿಲ್ಲ. ಆಕೆಯ ತಾಯಿ ತನ್ನ ಆಭರಣ ಕಳುವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಆದರೆ ದುರಾದೃಷ್ಟವೆಂದರೆ ಬಳೆಗಳು, ಕಂಠಹಾರಗಳು, ವಜ್ರವನ್ನು ನಕಲಿ ಎಂದು ತಿಳಿದು ಕಡಿಮೆ ಬೆಲೆ ಮಾರಾಟ ಮಾಡಿದ್ದಾಳೆ ಇದನ್ನು ತಿಳಿದು ತಾಯಿ ಆಘಾತಕ್ಕೊಳಗಾಗಿದ್ದಾಳೆ. ಆಕೆ ಅದನ್ನು ಮಾರಾಟ ಮಾಡಲು ಮುಂದಾಗಿದ್ದುದು ನನಗೆ ತಿಳಿದಿರಲಿಲ್ಲ, ಆ ದಿನ ಆಕೆಗೆ ಹಣದ ಅಗತ್ಯವಿತ್ತು, ಎಷ್ಟು ಬೇಕು ಎಂದು ಕೇಳಿದಾಗ 60 ಯುವಾನ್ ಎಂದು ಹೇಳಿದ್ದಳು, ಯಾರೋ ಲಿಪ್ ಸ್ಟಡ್ಸ್ ಧರಿಸಿರುವುದನ್ನು ನೋಡಿದ್ದೇನೆ ನನಗೂ ಬೇಕೆಂದು ಕೇಳಿದ್ದಳು.
ಮತ್ತಷ್ಟು ಓದಿ: ಬಜೆಟ್ ಎಫೆಕ್ಟ್, ಆಮದು ಸುಂಕ ಕಡಿತ; ಚಿನ್ನಾಭರಣ, ಇತರೆ ಒಡವೆಗಳ ಬೆಲೆ ಇಳಿಕೆ ಸಾಧ್ಯತೆ
ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದರು ಮತ್ತು ಮಾರುಕಟ್ಟೆ ಆಡಳಿತ ಮಂಡಳಿಯ ಸಹಯೋಗದೊಂದಿಗೆ ತನಿಖೆಯಲ್ಲಿ ತೊಡಗಿಸಿಕೊಂಡರು. ಶೀಘ್ರದಲ್ಲೇ ಅವರು ಎಲ್ಲಾ ಆಭರಣಗಳನ್ನು ಮಾರಾಟ ಮಾಡಿದ ಜೇಡ್ ಮರುಬಳಕೆ ಅಂಗಡಿಯನ್ನು ಕಂಡುಕೊಂಡರು. ಮಾರಾಟವಾಗಿದ್ದ ಎಲ್ಲಾ ಆಭರಣಗಳು ಆಕೆಗೆ ಸಿಕ್ಕಿವೆ.
ಕೆಲವರು ಅಷ್ಟು ದುಬಾರಿ ಆಭರಣಗಳನ್ನು ಹುಡುಗಿಯ ಕೈಗೆಟುಕುವಂತೆ ಏಕೆ ಇಟ್ಟಿದ್ದಾರೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಅವಳಿಗೆ ಅಗತ್ಯವಾದ ಪಾಕೆಟ್ ಮನಿ ಏಕೆ ನೀಡುತ್ತಿಲ್ಲ ಎಂದು ಕೇಳಿದರು. ಒಬ್ಬ ಹದಿಹರೆಯದ ಹುಡುಗಿ ಒಂದು ಮಿಲಿಯನ್ ಯುವಾನ್ ಮೌಲ್ಯದ ಆಭರಣಗಳನ್ನು 60 ಯುವಾನ್‌ಗೆ ಮಾರಾಟ ಮಾಡುತ್ತಿದ್ದರೆ, ಆಕೆಯ ಪೋಷಕರು ಎಚ್ಚೆತ್ತುಕೊಳ್ಳಬೇಕಿತ್ತು. ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ