ಈ ಒತ್ತಡದ ಜೀವನದಲ್ಲಿ ನೌಕರಿ ಮಾಡುತ್ತಿರುವವರು ವಾರದ ಒಂದೆರಡು ದಿನಗಳ ರಜೆಗಾಗಿ ಹಂಬಲಿಸುತ್ತಿರುತ್ತಾರೆ. ಸಾಕಷ್ಟು ಮಂದಿ ಇಡೀ ದಿನವೂ ನಿದ್ರೆ ಮಾಡಿ ತಮ್ಮ ವಾರದ ಸುಸ್ತನ್ನು ಕಳೆದುಕೊಳ್ಳುತ್ತಾರೆ. ಆದರೆ ಒಂದೊಮ್ಮೆ ನಿಮಗೆ ವೇತನದ ಜತೆ 1 ವರ್ಷ ರಜೆ ಕೊಟ್ಟಿದ್ದರೆ ಹೇಗಿರುತ್ತೆ ಯೋಚನೆ ಮಾಡಿ. ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗೆ ಈ ಅವಕಾಶವನ್ನು ನೀಡಿದೆ. ಕಂಪನಿಯ ಲಕ್ಕಿ ಡ್ರಾದಲ್ಲಿ ವಿಜೇತರಾದ ಉದ್ಯೋಗಿಗೆ 365 ದಿನಗಳ ಕಾಲ ವೇತನ ಸಹಿತ ರಜೆಯನ್ನು ನೀಡಿದ್ದು, ಉದ್ಯೋಗಿ ಫುಲ್ ಖುಷ್ ಆಗಿದ್ದಾರೆ.
ಶೆನ್ಜೆನ್ ಗ್ವಾಂಗ್ಡಾಂಗ್ನಲ್ಲಿ ಕಂಪನಿಯು ವಾರ್ಷಿಕ ಡಿನ್ನರ್ ಆಯೋಜಿಸಿತ್ತು. ಆ ಉದ್ಯೋಗಿಯು ಕಂಪನಿಯ ಮ್ಯಾನೇಜಿರಿಯಲ್ ಹುದ್ದೆಯಲ್ಲಿದ್ದಾರೆ ಎಂಬುದು ತಿಳಿದುಬಂದಿದೆ. ಚೆಕ್ ಒಂದನ್ನು ಅವರಿಗೆ ನೀಡಿದ್ದು ಅದರಲ್ಲಿ 365 ದಿನಗಳ ಕಾಲ ವೇತನ ಸಹಿತ ರಜೆ ಎಂದು ಬರೆದಿತ್ತು. ಆದರೆ ಈ ಬಹುಮಾನ ನಿಜವೇ ಎಂದು ಪದೇ ಪದೇ ಕೇಳಲಾಯಿತು.
男子在公司年会抽到“365天带薪休假”奖项 pic.twitter.com/aOaSxgBAtO
— The Scarlet Flower (@niaoniaoqingya2) April 12, 2023
ಲಕ್ಕಿ ಡ್ರಾ ಪಾಟ್ ಬಹುಮಾನ ಮತ್ತು ಪೆನಾಲ್ಟಿ ಎರಡನ್ನೂ ಒಳಗೊಂಡಿತ್ತು. ಪೆನಾಲ್ಟಿಯಲ್ಲಿ ಮನೆಯಲ್ಲಿ ತಯಾರಿಸಿದ ಮಾನೀಯವನ್ನು ಕುಡಿಯುವುದು ಅಥವಾ ವೇಯ್ಟರ್ ಕೆಲಸವನ್ನು ಮಾಡುವುದು. ಕೋವಿಡ್ 19 ನಿಂದಾಗಿ ಕಳೆದ 3 ವರ್ಷಗಳಿಂದ ಕಚೇರಿಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿರಲಿಲ್ಲ. ಉದ್ಯೋಗಿಗಳಿಗೆ ಕೆಲಸ ಒತ್ತಡದಿಂದ ದೂರ ಮಾಡಲು ಲಕ್ಕಿ ಡ್ರಾ ನಡೆಸಲಾಯಿತು.
ಮತ್ತಷ್ಟು ಓದಿ: ಮೊಮ್ಮಗನ ಮದುವೆಯಲ್ಲಿ 96ರ ವಯಸ್ಸಿನ ತಾತನ ಭರ್ಜರಿ ಡಾನ್ಸ್; ವಿಡಿಯೋ ವೈರಲ್
ಬಹುಮಾನವನ್ನು ಎನ್ಕ್ಯಾಶ್ ಮಾಡಲು ಅಥವಾ ರಜೆಯನ್ನು ಆನಂದಿಸಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಉದ್ಯೋಗಿಗೆ ಕೇಳಲಾಗಿದೆ.
ಕೆಲವರು ಏಪ್ರಿಲ್ ಫೂಲ್ ಎಂದು ಹೇಳಿದರೆ ಇನ್ನೂ ಕೆಲವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕಾಲದಲ್ಲಿ ಎಲ್ಲರನ್ನೂ ನೌಕರಿಯಿಂದ ತೆಗೆದು ಹಾಕಲಾಗುತ್ತಿದೆ, ಈ ಸಮಯದಲ್ಲಿ ಇಂತಹ ಆಫರ್ ಕೊಟ್ಟಿದ್ದು ಸತ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ.
2022ರಲ್ಲಿ ಮತ್ತೊಂದು ಕಂಪನಿಯ ಉದ್ಯೋಗಿ 365 ದಿನಗಳ ರಜೆಯನ್ನು ಲಕ್ಕಿ ಡ್ರಾದಲ್ಲಿ ಗೆದ್ದಿದ್ದರು. ಉದ್ಯೋಗಿ ತನ್ನ ಬಹುಮಾನದ ಒಂದು ಭಾಗವನ್ನು ಎನ್ಕ್ಯಾಶ್ ಮಾಡಿ ಮತ್ತೊಂದು ಭಾಗವನ್ನು ಧಾನ ಮಾಡಿದ್ದರು ಎಂದು ಚೀನಾ ಮಾಧ್ಯಮ ವರದಿ ಮಾಡಿತ್ತು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ