ದಕ್ಷಿಣ ಅಮೆರಿಕದ ಪೆರುವಿನ ಮಾರ್ಸೆಲಿನೊ ಅಬಾದ್ ಎಂಬ ವ್ಯಕ್ತಿ ಏಪ್ರಿಲ್ 5 ರಂದು ತನ್ನ 124 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ ಪೆರು ಸರ್ಕಾರವು ಮಾರ್ಸೆಲಿನೊ ಅಬಾದ್ ಅವರನ್ನು ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿ ಎಂದು ಹೇಳಿಕೊಂಡಿದೆ. ಮಾರ್ಸೆಲಿನೊ ಅಬಾದ್ ಅವರು 1900 ರಲ್ಲಿ ಜನಿಸಿದ್ದು, ಇತ್ತೀಚೆಗಷ್ಟೇ ತನ್ನ 124 ನೇ ಹುಟ್ಟು ಹಬ್ಬವನ್ನು ಕೇಕು ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.
124 ನೇ ವಯಸ್ಸಿನ ವರೆಗೆ ಇಷ್ಟು ಆರೋಗ್ಯಕರವಾಗಿ ಜೀವನ ನಡೆಸಲು ಮುಖ್ಯ ಪೆರುವಿನ ಹುವಾನುಕೊದ ಸುಂದರ ಹಚ್ಚಹಸುರಿನ ಪರಿಸರ, ಶುದ್ಧ ಗಾಳಿ. ಇದಲ್ಲದೇ ಕುರಿಮರಿ ಮಾಂಸ, ತಾವೇ ಬೆಳೆಸಿದ ತರಕಾರಿಗಳನ್ನು ಸೇವಿಸುತ್ತಿದ್ದಾರೆ ಎಂದು ಪೆರು ಸರ್ಕಾರದ ಹೇಳಿಕೆಯಿಂದ ತಿಳಿದುಬಂದಿದೆ. ಇದಲ್ಲದೇ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಲು ಅಬಾದ್‌ಗೆ ಸಹಾಯ ಮಾಡುತ್ತಿದ್ದೇವೆ ಎಂದು ಪೆರುವಿಯನ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ನಾವು ಸ್ವಲ್ಪ ಡಿಫರೆಂಟ್ ಕಣ್ರೀ, ಕೇಕ್ ಬದಲು ಪಪ್ಪಾಯಿ ಹಣ್ಣು ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ವ್ಯಕ್ತಿ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಇಲ್ಲಿಯವರೆಗೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಪಟ್ಟವನ್ನು 114 ವರ್ಷ ವಯಸ್ಸಿನ ವೆನೆಜುವೆಲಾದ ವ್ಯಕ್ತಿಗೆ ನೀಡಲಾಗಿತ್ತು. ಇದೀಗಾ ಪೆರು ಸರ್ಕಾರವು ಮಾರ್ಸೆಲಿನೊ ಅಬಾದ್ ಅವರ ಹೆಸರಿನಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ. ಸಣ್ಣ ಪಟ್ಟಣವಾದ ಚಗ್ಲ್ಲಾದಲ್ಲಿ ಜನಿಸಿದ ಅಬಾದ್, ಪೆರುವಿಯನ್ ಸರ್ಕಾರವು 2019 ರಲ್ಲಿ ಅವರನ್ನು ಗುರುತಿಸಿದ್ದು, ಇದೀಗ ಅವರಿಗೆ ಸರ್ಕಾರಿ ಐಡಿ ಮತ್ತು ಪಿಂಚಣಿಯನ್ನು ನೀಡಲಾಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ