Viral Pic: ಎರಡು ನಾಯಿಗಳು ಪರಸ್ಪರ ತಬ್ಬಿಕೊಂಡಿರುವ ಸ್ನೇಹದ ಫೋಟೋ ವೈರಲ್, ಇದರಲ್ಲಿ ವಿಶೇಷ ಏನು ಗೊತ್ತಾ?

ಎರಡು ನಾಯಿಗಳು ಪರಸ್ಪರ ಅಪ್ಪಿಕೊಂಡಿರುವ ಸ್ನೇಹದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ವಿಶೇಷವೊಂದು ಇದೆ. ಅದೇನೆಂದು ಈ ಸುದ್ದಿ ಮೂಲಕ ತಿಳಿಸುತ್ತೇವೆ, ಓದಿ.

Viral Pic: ಎರಡು ನಾಯಿಗಳು ಪರಸ್ಪರ ತಬ್ಬಿಕೊಂಡಿರುವ ಸ್ನೇಹದ ಫೋಟೋ ವೈರಲ್, ಇದರಲ್ಲಿ ವಿಶೇಷ ಏನು ಗೊತ್ತಾ?
ನಾಯಿಗಳ ಸ್ನೇಹ
Edited By:

Updated on: Jul 07, 2022 | 3:19 PM

ಅದೆಷ್ಟೋ ಕೋಟಿ ಜನರಿಗೆ ನಾಯಿಗಳೆಂದರೆ ಪಂಚಪ್ರಾಣ. ಕೆಲವರು ಒಂದು ಕ್ಷಣ ಕೂಡ ನಾಯಿಯನ್ನು ಬಿಟ್ಟಿರಲು ಸಾಧ್ಯವಾಗದಷ್ಟು ಜನರು ನಾಯಿಯನ್ನು ಹಚ್ಚಿಕೊಂಡಿರುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಉಕ್ರೇನ್​ನಲ್ಲಿ ಸಿಲುಕಿದ ವಿದ್ಯಾರ್ಥಿಗಳು ತಾವು ಸಾಕಿದ ನಾಯಿಯನ್ನು ಬಿಟ್ಟು ಬರಲಾರೆವು ಎಂದು ಹಠ ಹಿಡಿದಿರುವುದನ್ನು ಕೇಳಿದ್ದೇವೆ. ಇಂಥ ಅದೆಷ್ಟೋ ಸಾಕುಪ್ರಾಣಿ ಪ್ರೇಮಿಗಳಿಗೆ (Pet Lovers) ಇಷ್ಟವಾಗುವ ನಾಯಿಗಳ ಫೋಟೋ(Dog Photo)ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಎರಡು ನಾಯಿಗಳು ಪರಸ್ಪರ ತಬ್ಬಿಕೊಂಡಿರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಅದರಲ್ಲಿ ವಿಶೇಷವೇನು ಎಂದು ನೀವು ಕೇಳುತ್ತಿದ್ದೀರಾ? ವಿಶೇಷ ಇದೆ. ಅದೇನೆಂದು ಹೇಳುತ್ತೇವೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಇದನ್ನೂ ಓದಿ: Viral Video: ನೀರಿನಲ್ಲಿ ಆಕ್ಟೋಪಸ್​ಗಳು ಬಣ್ಣ ಬದಲಾಯಿಸುತ್ತವೆ ಎಂದು ತಿಳಿದಿದೆಯಾ? ಇಲ್ಲಿದೆ ನೋಡಿ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಪಪ್ಪೀಸ್ ಎಂಬ ಟ್ವಿಟರ್‌ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ಲ್ಯಾಬ್ರಡಾರ್ ಮತ್ತು ಹಸ್ಕಿ ಎಂಬ ಎರಡು ತಳಿಯ ನಾಯಿಗಳು ಪರಸ್ಪರ ತಬ್ಬಿಕೊಳ್ಳುವುದನ್ನು ಕಾಣಬಹುದು. ತಮ್ಮ ಸ್ನೇಹಕ್ಕೆ ಅಡ್ಡ ಬಂದಿರುವ ಗೇಟ್​ ಅನ್ನು ಕೂಡ ಲೆಕ್ಕಿಸದೆ ಗೇಟ್​ ಮೇಲೆ ಕೈಯಿಟ್ಟು ಒಂದನ್ನೊಂದು ತಬ್ಬಿಕೊಂಡಿರುವುದು ವಿಶೇಷ.

ಇದನ್ನೂ ಓದಿ: Viral Photo: ನಿಮ್ಮ ಕಣ್ಣುಗಳಿಗೊಂದು ಸವಾಲು, ಈ ಚಿತ್ರದಲ್ಲಿ ಇರುವ ರಿಮೋಟ್​ ಅನ್ನು ಪತ್ತೆಹಚ್ಚಿ

ನಾಯಿಯಗಳ ಸ್ನೇಹದ ಕುರಿತ ಫೋಟೋವನ್ನು ಹಂಚಿಕೊಂಡ ಪಪ್ಪೀಸ್ ಟ್ವಿಟರ್ ಖಾತೆ, “ಕೆಲವು ಸ್ನೇಹಗಳು ಮುರಿಯಲಾಗದವು” ಎಂದು ಶೀರ್ಷಿಕೆಯನ್ನು ಬರೆದುಕೊಂಡಿದೆ. ಫೋಟೋ ವೀಕ್ಷಣೆ ಮಾಡಿದ ನೆಟ್ಟಿಗರು ಎರಡು ನಾಯಿಗಳು ಹಂಚಿಕೊಂಡ ಬಾಂಧವ್ಯದ ಮೇಲೆ ತಮ್ಮ ಪ್ರೀತಿಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ಒಬ್ಬರು, “ನಮ್ಮನ್ನು ದೂರವಿಡುವಷ್ಟು ಎತ್ತರದ ಗೋಡೆ ಇಲ್ಲ, ಆತ್ಮೀಯ ಸ್ನೇಹಿತ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಅಯ್ಯೋ, ಅವುಗಳನ್ನು ತಬ್ಬಿಕೊಳ್ಳಲು ನಾನು ಬಯಸುತ್ತೇನೆ.” ಎಂದಿದ್ದಾರೆ.

ಇದನ್ನೂ ಓದಿ: Viral Video: ‘ಥಟ್ ಥಟ್’ ಎಂಬ ಹೊಸ ಹಾಡಿನೊಂದಿಗೆ ಬಂದ ಗಂಗ್ನಮ್ ಸ್ಟೈಲ್ ಖ್ಯಾತಿಯ Psy, ವೈರಲ್ ವಿಡಿಯೋ ಇಲ್ಲಿದೆ

Published On - 3:19 pm, Thu, 7 July 22